Bhadra Yoga: ಬುಧ ಸಂಚಾರದಿಂದ ಭದ್ರ ಯೋಗ, ಮೂರು ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ
ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧನು ಅಕ್ಟೋಬರ್ 01, 2023 ರಂದು ರಾಶಿ ಪರಿವರ್ತನೆ ಹೊಂದುವ ಮೂಲಕ ಕನ್ಯಾ ರಾಶಿಗೆ ಪ್ರವೇಶಿಸಿದ್ದಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧನು ತನ್ನದೇ ಆದ ರಾಶಿಗಳಿಗೆ ಎಂದರೆ ಮಿಥುನ ರಾಶಿ ಮತ್ತು ಕನ್ಯಾ ರಾಶಿಗೆ ಪ್ರವೇಶಿಸಿದಾಗ ಭದ್ರ ರಾಜಯೋಗವು ನಿರ್ಮಾಣವಾಗುತ್ತದೆ.
ಇದೀಗ ಸ್ವ ರಾಶಿಯಲ್ಲಿ ಎಂದರೆ ಕನ್ಯಾ ರಾಶಿಯಲ್ಲಿ ಬುಧನ ಪ್ರವೇಶದೊಂದಿಗೆ ಮಂಗಳಕರ ಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಭದ್ರ ರಾಜಯೋಗ ನಿರ್ಮಾಣವಾಗಿದೆ.
ಭದ್ರ ಯೋಗದ ಶುಭ-ಅಶುಭ ಪರಿಣಾಮಗಳು ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಮೂರು ರಾಶಿಯವರ ದೃಷ್ಟಿಯಿಂದ ಅತ್ಯಂತ ಮಂಗಳಕರ ಸಮಯ ಎಂದು ಬಣ್ಣಿಸಲಾಗುತ್ತದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ನೋಡುವುದಾದರೆ...
ಬುಧ ರಾಶಿ ಪರಿವರ್ತನೆಯಿಂದ ನಿರ್ಮಾಣವಾಗಿರುವ ಭದ್ರ ಯೋಗವು ಮಿಥುನ ರಾಶಿಯವರಿಗೆ ಅವರ ಪ್ರತಿ ಕೆಲಸದಲ್ಲಿಯೂ ಕೈಹಿಡಿಯಲಿದೆ. ವೃತ್ತಿ ವ್ಯವಹಾರಗಳು ಅಂದುಕೊಂಡಂತೆ ನಡೆಯಲಿದ್ದು, ಬಂಪರ್ ಲಾಭಗಳಿಸುವ ಅವಕಾಶಗಳಿವೆ. ಈ ಯೋಗವು ನಿಮ್ಮ ವೃತ್ತಿಜೀವನಕ್ಕೆ ಬಹಳ ಫಲಪ್ರದವಾಗಿದೆ ಎಂದು ಸಾಬೀತುಪಡಿಸುತ್ತದೆ.
ಸ್ವ ರಾಶಿಯಲ್ಲಿ ನಿರ್ಮಾಣಗೊಳ್ಳಲಿರುವ ಭದ್ರ ಯೋಗವು ಕನ್ಯಾ ರಾಶಿಯ ಜನರ ವಿಶ್ಲೇಷಣಾತ್ಮಕ ಮತ್ತು ತಾರ್ಕಿಕ ಸಾಮರ್ಥ್ಯಗಳು ಸುಧಾರಿಸುತ್ತವೆ. ಇದು ನಿಮಗೆ ನಿಮ್ಮ ವ್ಯಾಪಾರ-ವ್ಯವಹಾರವನ್ನು ವಿಸ್ತರಿಸಲು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಈ ಸಂಯದಲ್ಲಿ ನೀವು ಹಲವು ಪ್ರಮುಖ ಕೆಲಸಗಳಲ್ಲಿ ಯಶಸ್ಸನ್ನು ನಿಮ್ಮದಾಗಿಸುವಿರಿ.
ಶುಭಕರ ಭದ್ರ ಯೋಗದ ರಚನೆಯಿಂದ ಧನು ರಾಶಿಯ ಜನರು ಧನಾತ್ಮಕ ಫಲಗಳನ್ನು ಅನುಭವಿಸಲಿದ್ದಾರೆ. ಈ ಸಮಯದಲ್ಲಿ ನಟರು, ಕಲಾವಿದರು, ಕ್ರೀಡಾಪಟುಗಳು ಮತ್ತು ಉದ್ಯಮಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುವುದರ ಜೊತೆಗೆ ಬಂಪರ್ ಧನ ಲಾಭವನ್ನು ಸಹ ನಿರೀಕ್ಷಿಸಬಹುದು. ಕೆಲಸ ಬದಲಾಯಿಸಲು ಯೋಚಿಸುವವರಿಗೆ ಇದು ಒಳ್ಳೆಯ ಸಮಯ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.