ಏಕಕಾಲಕ್ಕೆ ಎರಡು ರಾಜಯೋಗಗಳ ಮಹಾ ಸಂಯೋಗ ರಚನೆ, ಈ ಜನರ ಮೇಲೆ ಧನಕುಬೇರನ ಅಪಾರ ಧನವೃಷ್ಟಿ!
Bhadra Mahapurush-Budhaadiya Samyog In Kanya 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಏಕಕಾಲಕ್ಕೆ ಭದ್ರ ಹಾಗೂ ಬುದ್ಧಾದಿತ್ಯ ರಾಜಯೋಗಗಳ ಮಹಾ ಸಂಯೋಜನೆ ನೆರವೇರಲಿದೆ. ಇದರಿಂದ ಒಟ್ಟು ಮೂರು ರಾಶಿಗಳ ಜನರ ಅದೃಷ್ಟ ಅಪಾರ ಹೊಳೆಯಲಿದೆ. ಈ ಅಜನರ ಮೇಲೆ ಧನ-ಕುಬೇರ ಖುದ್ದಾಗಿ ಬಂದು ಅಪಾರ ಧನವೃಷ್ಟಿ ಸುರಿಸಲಿದ್ದಾನೆ.
ಸಿಂಹ ರಾಶಿ: ಭದ್ರಮಹಾಪುರುಷ ಹಾಗೂ ಬುದ್ಧಾದಿತ್ಯ ರಾಜಯೋಗಗಳ ಈ ಮಹಾಸಂಯೋಗ ನಿಮ್ಮ ಗೋಚರ ಜಾತಕದ ಧನ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭದ ಯೋಗವಿದೆ. ಸಮಾಜದಲ್ಲಿ ನಿಮ್ಮ ಘನತೆ-ಗೌರವದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ. ಸಿಲುಕಿಬಿದ್ದ ಹಣ ನಿಮ್ಮತ್ತ ಮರಳಲಿದೆ. ಹೊಸ ಯೋಜನೆಯಲ್ಲಿ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಷೇರುಮರುಕಟ್ಟೆ, ಲಾಟರಿ ವ್ಯವಹಾರಗಳಿಂದ ನಿಮಗೆ ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮ್ಮ ಮಾತಿನಲ್ಲಿ ನಿಮಗೆ ಪ್ರಭಾವ ಗೋಚರಿಸಲಿದೆ.
ಧನು ರಾಶಿ: ಈ ಎರಡೂ ಯೋಗಗಳ ಮಹಾಸಂಯೋಗ ನಿಮ್ಮ ಗೋಚರ ಜಾತಕದ ಕರ್ಮಭಾವದಲ್ಲಿ ಸಂಭವಿಸುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಸಂಭವಿಸುವ ಸಾಧ್ಯತೆ ಇದೆ. ವ್ಯಾಪಾರ ವರ್ಗದ ಜನರಿಗೆ ಉತ್ತಮ ಅವಕಾಶಗಳು ಒದಗಿಬರಲಿವೆ. ಅಷ್ಟೇ ಅಲ್ಲ ವ್ಯಾಪಾರದಲ್ಲಿಯೂ ಕೂಡ ಆಕಸ್ಮಿಕ ಧನಪ್ರಾಪ್ತಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ನೌಕರಿಯ ಹುಡುಕಾಟದಲ್ಲಿ ನಿರತರಾದವರಿಗೆ ಹೊಸ ಉದ್ಯೋಗಾವಕಾಶ ಪ್ರಾಪ್ತಿಯಾಗಲಿದೆ. ಕುಟುಂಬದಲ್ಲಿ ನಿಮಗೆ ನಿಮ್ಮ ತಂದೆಯ ಭಾರಿ ಬೆಂಬಲ ಪ್ರಾಪ್ತಿಯಾಗಲಿದೆ. ಇನ್ನೊಂದೆಡೆ ನೌಕರವರ್ಗದ ಕುರಿತು ಹೇಳುವುದಾದರೆ, ಕಾರ್ಯಸ್ಥಳದಲ್ಲಿ ಹಿರಿಯ ಹಾಗೂ ಕಿರಿಯ ಸಹೋದ್ಯೋಗಿಗಳ ಬೆಂಬಲ ಪಡೆಯುವಲ್ಲಿ ನೀವು ಯಶಸ್ವಿಯಾಗುವಿರಿ.
ಮಿಥುನ ರಾಶಿ: ಭದ್ರಮಹಾಪುರುಷ ಹಾಗೂ ಬುದ್ಧಾದಿತ್ಯ ರಾಜ್ಯೋಗಗಳ ಈ ಮಹಾಸಂಯೋಜನೆ ನಿಮ್ಮ ಪಾಲಿಗೆ ಒಂದು ವರದಾನ ಎಂಬಂತೆ ಸಾಬೀತಾಗಲಿದೆ. ಈ ಮಹಾಸಂಯೋಗ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸುಖ-ಸೌಕರ್ಯಗಳಲ್ಲಿ ಅಪಾರ ವೃದ್ಧಿಯ ಲಕ್ಷಣಗಳು ಗೋಚರಿಸುತ್ತಿವೆ. ವಾಹನ-ಆಸ್ತಿಪಾಸ್ತಿ ಖರೀದಿಸುವ ಯೋಜನೆ ಇದ್ದರೆ, ಈ ಸಮಯ ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರವಾಗಿದೆ. ಇನ್ನೊಂದೆಡೆ ಹೂಡಿಕೆಯಿಂದ ನಿಮಗೆ ಅಪಾರ ಹಣ ಧನಪ್ರಾಪ್ತಿಯಾಗಲಿದೆ. ಆಸ್ತಿಪಾಸ್ತಿ, ರಿಯಲ್ ಎಸ್ಟೇಟ್, ಜಾಮೀನು-ನಿವೇಶನ ಕ್ಷೇತ್ರಲ್ಲಿರುವವರಿಗೆ ಇದು ವಿಶೇಷ ಲಾಭವನ್ನು ತಂದುಕೊಡಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)