ಸಂಸಾರ ಜಂಜಾಟದಲ್ಲಿ ಹೆಣಗಾಡುತ್ತಿರುವ ಭಾಗ್ಯ ಲಕ್ಷ್ಮೀಯ ಭಾಗ್ಯ ನಿಜ ಸಂಸಾರ ಹೀಗಿದೆ !ಇವರು ಮದುವೆಯಾಗಿದ್ದು ಖ್ಯಾತ ನಿರ್ದೇಶಕನನ್ನು
ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರವಾಹಿ ಜನ ಮನ್ನಣೆ ಪಡೆದಿದೆ. ಈ ಧಾರಾವಾಹಿಯ ಭಾಗ್ಯ ಪಾತ್ರವನ್ನು ಹೆಂಗಳೆಯರು ಮನೆ ಮಗಳಂತೆ ನೋಡುತ್ತಾರೆ.
ಧಾರಾವಾಹಿಯಲ್ಲಿ ಭಾಗ್ಯ ಬರೀ ನೋವನ್ನೇ ಕಾಣುವ ಪಾತ್ರಧಾರಿ. ಅತ್ತೆ ಮಾವ ಮಕ್ಕಳು ಎಲ್ಲಾ ಸುಖ ಇದ್ದರೂ ಗಂಡ ಆಕೆಯನ್ನು ದೂರ ಮಾಡುವ ಕಾರಣ ನೋವು ಪಡುತ್ತಲೇ ಇರುತ್ತಾಳೆ
ಧಾರಾವಾಹಿಯಲ್ಲಿ ಭಾಗ್ಯ ಪಾತ್ರವನ್ನು ನಿರ್ವಹಹಿಸುತ್ತಿರುವುದು ನಟಿ ಸುಷ್ಮಾ. ಇವರು ಧಾರಾವಾಹಿ ಮಾತ್ರವಲ್ಲದೆ ನಿರೂಪಣೆಯಲ್ಲಿಯೂ ಶಭಾಶ್ ಎನಿಸಿಕೊಂಡಿದ್ದಾರೆ.
ಇನ್ನು ಇವರು ಕನ್ನಡ ಖ್ಯಾತ ನಿರ್ದೇಶಕ ಪ್ರೀತಂ ಗುಬ್ಬಿಯನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ನಾಲ್ಕು ವರ್ಷಕ್ಕೆ ಇವರ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿದೆ.
ಇದಾದ ನಂತರ ಸುಷ್ಮಾ ತಮ್ಮ ಪೋಷಕರ ಜೊತೆ ವಾಸಿಸುತ್ತಿದ್ದಾರೆ. ಈ ಮದುವೆ ಮುರಿದು ಬಿದ್ದ ನಂತರ ಸುಷ್ಮಾ ಆಗಲಿ ಪ್ರೀತಂ ಆಗಲಿ ಬೇರೆ ಮದುವೆಯಾಗಿಲ್ಲ.
ಇಬ್ಬರೂ ತಮ್ಮ ತಮ್ಮ ವೃತ್ತಿ ಬದುಕಿನತ್ತ ಗಮನ ಹರಿಸಿದ್ದು ತಮ್ಮದೇ ರೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ.