‘ಭಾಗ್ಯಲಕ್ಷ್ಮೀ’ ನಟ ತಾಂಡವ್ ರಿಯಲ್ ಪತ್ನಿ ಇವರೇ… ಕರುನಾಡ ಈ ಸುಂದರಿ ಖ್ಯಾತ ಬಹುಭಾಷಾ ನಟಿ

Wed, 13 Dec 2023-4:21 pm,

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ಸುಷ್ಮಾ ರಾವ್, ಪದ್ಮಜಾ, ಶಶಿಧರ್ ಕೋಟೆ, ಸುದರ್ಶನ್ ರಂಗಪ್ರಸಾದ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಂದಹಾಗೆ ನಾವಿಂದು ಈ ವರದಿಯಲ್ಲಿ ತಾಂಡವ್ ಸೂರ್ಯವಂಶಿ ಅಲಿಯಾಸ್ ಸುದರ್ಶನ್ ರಂಗಪ್ರಸಾದ್ ಅವರ ರಿಯಲ್ ಲೈಫ್ ಪತ್ನಿ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಪಾತ್ರಕ್ಕೆ ಜೀವ ತುಂಬುತ್ತಿರುವ ಸುದರ್ಶನ್ ರಂಗಪ್ರಸಾದ್ ಅವರ ಪತ್ನಿ ಬೇರಾರು ಅಲ್ಲ, ಸಂಗೀತಾ ಭಟ್. ಕನ್ನಡ ಪ್ರಖ್ಯಾತ ನಟಿ ಸಂಗೀತಾ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ .

ಸಿನಿಮಾಗಳಲ್ಲಿ ಅಭಿನಯಿಸುವ ಮೊದಲು ಸಂಗೀತಾ ಅವರು, ಪಂಜರದ ಗಿಳಿ (ಕಸ್ತೂರಿ ಚಾನೆಲ್ ಕನ್ನಡ), ಭಾಗ್ಯವಂತರು (ಸುವರ್ಣ ಚಾನೆಲ್ ಕನ್ನಡ), ಚಂದ್ರಚಕೋರಿ (ಉದಯ ಟಿವಿ ಕನ್ನಡ), ನೀಲಿ (ಸುವರ್ಣ ಚಾನೆಲ್ ಕನ್ನಡ), ಮತ್ತು ಚಂದ್ರಮುಖಿ (ಕಸ್ತೂರಿ ಚಾನೆಲ್ ಕನ್ನಡ) ಧಾರವಾಹಿಗಳಲ್ಲಿ ನಟಿಸಿದ್ದರು.

ಅಲ್ಲದೆ, ರಿಯಾಲಿಟಿ ಟಿವಿ ಶೋ ಲೈಫ್ ಸೂಪರ್ ಗುರು (ಜೀ ಕನ್ನಡ ವಾಹಿನಿ)ನಲ್ಲೂ ಕಾಣಿಸಿಕೊಂಡಿದ್ದರು. ಇನ್ನು ಸಿನಿಮಾದ ಬಗ್ಗೆ ಮಾತನಾಡುವುದಾದರೆ, 2014 ರಲ್ಲಿ ತೆರೆಕಂಡ ‘ಪ್ರೀತಿ ಗೀತಿ ಇತ್ಯಾದಿ’ಯಲ್ಲಿ ಅಭಿನಯಿಸುವ ಮೂಲಕ ಪದಾರ್ಪಣೆ ಮಾಡಿದರು.

ಇವೆಲ್ಲದರ ಹೊರತಾಗಿ ಮಿಟೂ ಅಭಿಯಾನದಲ್ಲೂ ಸಂಗೀತಾ ಹೆಸರು ಭಾರೀ ಸದ್ದು ಮಾಡಿತ್ತು.

ಸಂಗೀತಾ ಭಟ್ ತನ್ನ ಸ್ವಂತ ನಿರ್ಮಾಣ ಸಂಸ್ಥೆ "ಸ್ಕ್ರ್ಯಾಬಲ್ ಪ್ರೊಡಕ್ಷನ್ಸ್" ಹೊಂದಿದ್ದಾರೆ. ಈ ಸಂಸ್ಥೆ ಮೂಲಕ ಹೊರಬಂದ ಕಿರುಚಿತ್ರವೊಂದರಲ್ಲಿ ಪತಿ ಸುದರ್ಶನ್ ರಂಗಪ್ರಸಾದ್ ಜೊತೆ ಸೇರಿ ‘ನಟಿಸಿದ್ದಾರೆ.

ಸುಮಾರು ಏಳು ವರ್ಷಗಳ ಸುಖೀ ದಾಂಪತ್ಯ ಜೀವನ ನಡೆಸುತ್ತಿರುವ ಈ ಮುದ್ದಾದ ಜೋಡಿ ಆಗಾಗ್ಗೆ ವೆಕೇಶನ್ ಎಂದು ದೇಶ ಸುತ್ತುತ್ತಿರುತ್ತಾರೆ. ಆಗ ತೆಗೆದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link