ಭರತ್ ಗೌಡ ಎಸ್‌ವಿ ಮುಡಿಗೆ ಜೀ ನ್ಯೂಸ್ `ಯುವರತ್ನ` ಪ್ರಶಸ್ತಿಯ ಗರಿ..!
ತಳಮಟ್ಟದಿಂದ ಬೆಳೆದು ಸಾಮಾಜಿಕ, ರಾಜಕೀಯ, ಶಿಕ್ಷಣ, ವೈದ್ಯಕೀಯ, ಕ್ರೀಕಾ, ಕೈಗಾರಿಕಾ, ಖಾಸಗೀ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು, ಎಲೆಮರೆ ಕಾಯಿಯಂತೆ ಇರುವ ಉದ್ಯಮಿಗಳನ್ನು ಗುರ್ತಿಸುವ ಕಾರ್ಯಕ್ರಮವೇ ʼಯುವರತ್ನʼ.
ಈ ಪೈಕಿ ರಾಜಕೀಯ ಸಂಘಟಕರು ಭರತ್ ಗೌಡ ಎಸ್‌ವಿ ಅವರ ಅದ್ಭುತ ಸಾಧನೆಯನ್ನು ಗುರುತಿಸಿ ಜೀ ಕನ್ನಡ ನ್ಯೂಸ್ ಯುವರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಭರತ್ ಗೌಡ ಅವರು, ಬಿಜೆಪಿ ಮತ್ತು ಆರ್‌ಎಸ್‌ಎಸ್ ಮಾರ್ಗದರ್ಶನಲ್ಲಿ ಪ್ರಬಲ ಯುವರಾಜಕಾರಣಿಯಾಗಿ ಸಮಾಜ ಸೇವೆಯಲ್ಲಿ ತಡಗಿಸಿಕೊಂಡಿರುವ ನಿಸ್ವಾರ್ಥಿ.
ಶಾಲಾ ಮಕ್ಕಳು , ರೈತರು, ಬಡವರ ಕಷ್ಟಕ್ಕೆ ಸದಾ ಮಿಡಿಯುವ ಹೃದಯ. ಕೋವಿಡ್ ಸಂದರ್ಭದಲ್ಲಿ ಪ್ರಾಣವನ್ನು ಲೆಕ್ಕಿಸದೆ ಬಡವರ ಸಹಾಯಕ್ಕೆ ನಿಂತವರು. 30 ಬಡಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಹೊಣೆ ಹೊತ್ತಿದ್ದಾರೆ. ದಾನಿಗಳ ಮೂಲಕ ಬಡಮಕ್ಕಳಿಗೆ ಉಚಿತ ಪುಸ್ತಕ, ಬಟ್ಟೆ, ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
ರಾಷ್ಟ್ರ ನಿರ್ಮಾಣ ಮತ್ತು ರಾಷ್ಟ್ರೀಯತೆಯ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬಂದಿರುವ ಎಸ್.ವಿ.ಭರತ್ ಗೌಡ ಸಾಮಾಜಿಕ ಕಳಕಳಿ ಹೊಂದಿರುವ ಸಮಾನ ಮನಸ್ಕರ ಸರ್ಜಾಪುರ ಸಿಟಿಜನ್ ಫೋರಂ ಸ್ಥಾಪಿಸಿ ಆ ಮೂಲಕ ಸಮಾಜ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ.
ಇಂತಹ ಅದ್ಭುತ ವ್ಯಕ್ತಿತ್ವ ಮತ್ತು ಸಾಧನೆಯನ್ನು ಮಾಡಿದ ಎಸ್.ವಿ.ಭರತ್ ಗೌಡರವರಿಗೆ ʼಯುವರತ್ನ ಪ್ರಶಸ್ತಿʼ ನೀಡಲು ಝೀ ಕನ್ನಡ ನ್ಯೂಸ್ ಹೆಮ್ಮೆ ಪಡುತ್ತದೆ.