ಖ್ಯಾತ ನಟನೊಂದಿಗೆ ಮದುವೆ.. 4 ಬಾರಿ ಅಬಾರ್ಷನ್, ಸತ್ತೇ ಹೋಗಿದ್ದೇ: ಪಡಬಾರದ ಕಷ್ಟ ಪಟ್ಟ ನಟಿ ಭಾವನಾ
Bhavana Menon: ನಟಿ ಭಾವನಾ ಮೆನನ್ ಹೇಳಿದ ಮಾತುಗಳಿಂದ ಫ್ಯಾನ್ಸ್ ಶಾಕ್ ಆಗಿದ್ದಾರೆ. ಮದುವೆ.. ಗರ್ಭಪಾತ.. ಸಾವಿನ ಬಗ್ಗೆ ನಟಿ ಭಾವನಾ ಹೇಳಿಕೆ ವೈರಲ್ ಆಗುತ್ತಿದೆ.
ನಟಿ ಭಾವನಾ ಮೆನನ್ ಜಾಕಿ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ನಾಯಕಿಯಾಗಿ ನಟಿಸುವ ಮೂಲಕ ಕನ್ನಡ ಸಿನಿರಂಗದಲ್ಲಿ ಖ್ಯಾತಿ ಪಡೆದರು.
ಭಾವನಾ ಮೆನನ್ ಎಂದೇ ಪ್ರಸಿದ್ಧರಾಗಿರುವ ಕಾರ್ತಿಕಾ ಮೆನನ್ ಕನ್ನಡ, ತೆಲಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಭಾವನಾ ಮೆನನ್ ಸೌತ್ ಸಿನಿರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದರು. 16 ನೇ ವಯಸ್ಸಿನಲ್ಲಿ ನಮ್ಮಾಳ್ ಎಂಬ ಮಲಯಾಳಂ ಸಿನಿಮಾ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು.
2010 ರಲ್ಲಿ ಪುನೀತ್ ರಾಜಕುಮಾರ್ ಅಭಿನಯದ ಜಾಕಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ಕಿಚ್ಚ ಸುದೀಪ್ ಜೊತೆ ವಿಷ್ಣುವರ್ಧನ, ಗಣೇಶ್ ಜೊತೆ ರೋಮಿಯೊ ಹೀಗೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿಯೂ ಭಾವನಾ ಮೆನನ್‌ಗೆ ಅಪಾರ ಅಭಿಮಾನಿಗಳಿದ್ದಾರೆ. ನಟಿ ಭಾವನಾ ಸಂದರ್ಶನವೊಂದರಲ್ಲಿ ತಮ್ಮ ಮದುವೆ ಮತ್ತು ಗರ್ಭಪಾತದ ಕುರಿತು ಮಾತನಾಡಿದ್ದಾರೆ.
ಮಲಯಾಳಂ ನಟ ಅನೂಪ್ ಮೆನನ್ ಜತೆಗೆ ಮದುವೆ ಆಯ್ತು, ಮೊದಲೇ ನಾಲ್ಕು ಬಾರಿ ಗರ್ಭಪಾತ ಆಗಿತ್ತು. ಅದೊಂದು ದಿನ ಸತ್ತೇ ಹೋಗಿದ್ದೆ ಎಂದು ನಟಿ ಭಾವನಾ ಮೆನನ್ ಹೇಳಿದ್ದು, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಭಾವನಾ ಹೇಳಿದ ಈ ಮಾತುಗಳು ಕೇವಲ ಮಾರ್ಮಿಕ ನುಡಿಗಳಾಗಿವೆ. ನಟಿ ಭಾವನಾ ತಮ್ಮ ಜೀವನದ ಬಗ್ಗೆ ಹಬ್ಬಿದ್ದ ಹಲವು ಗಾಸಿಪ್ ಗಳ ಬಗ್ಗೆ ಮಾತನಾಡಿದ್ದಾರೆ.
ಮಲಯಾಳಂ ನಟ ಅನೂಪ್ ಮೆನನ್ ಜತೆಗೆ ಭಾವನಾ ಮದುವೆ ಆಗಿದ್ದಾರೆ ಎಂಬ ವದಂತಿ ಒಂದು ಹಬ್ಬಿತ್ತು.
ಇದಕ್ಕೂ ಮುನ್ನ ನಟಿ ಭಾವನಾ 4 ಬಾರಿ ಗರ್ಭಪಾತ ಆಗಿದೆ ಎಂದು ಸುಳ್ಳು ಸುದ್ದಿ ಹರಡಲಾಗಿತ್ತು. ಮತ್ತೊಮ್ಮೆ ನಟಿ ಭಾವನಾ ಇನ್ನಿಲ್ಲ ಎಂದೇ ವದಂತಿ ಸೃಷ್ಟಿಸಿದ್ದರು. ಇದೆಲ್ಲವೂ ಸುಳ್ಳು ಸುದ್ದಿಯಾಗಿತ್ತು.
ಈ ಗಾಸಿಪ್‌ಗಳ ಕುರಿತು ನಟಿ ಭಾವನಾ ಮಾತನಾಡಿದ್ದಾರೆ. ನಟಿ ಭಾವನಾ ಬಹುಕಾಲದ ಗೆಳೆಯ ಮತ್ತು ಸ್ಯಾಂಡಲ್‌ವುಡ್ ನಿರ್ಮಾಪಕ ನವೀನ್ ಜೊತೆ ನವೆಂಬರ್ 22, 2018 ರಲ್ಲಿ ಮದುವೆಯಾದರು.