Bhopal Tourism: ಭೋಪಾಲ್‌ನಲ್ಲಿ ನೀವು ಭೇಟಿ ನೀಡಲೇಬೇಕಾದ 5 ಪ್ರಮುಖ ಸ್ಥಳಗಳು!

Sat, 03 Feb 2024-5:41 pm,

ದೊಡ್ಡ ಸರೋವರ ಅಥವಾ ಬಡಾ ತಲಾಬ್ ಅನ್ನು ಭೋಪಾಲ್‌ನ ಹೆಮ್ಮೆ ಎಂದು ಪರಿಗಣಿಸಲಾಗಿದೆ. ರಾತ್ರಿ 12 ಗಂಟೆಯೊಳಗೆ ನೀವು ಯಾವಾಗ ಬೇಕಾದರೂ ಇಲ್ಲಿಗೆ ಹೋಗಬಹುದು. ಇಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ವಾಕ್‌ ಮಾಡಬಹುದು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಮೋಜು-ಮಸ್ತಿ ಮಾಡಬಹುದು. ಈ ಸ್ಥಳವು ಎಲ್ಲದಕ್ಕೂ ಸೂಕ್ತವಾಗಿದೆ. ಇಲ್ಲಿ ನೀವು ಕೊಳದ ಸುತ್ತಲೂ ಬೋಟಿಂಗ್ ಮತ್ತು ವಿಹಾರವನ್ನು ಆನಂದಿಸಬಹುದು, ಅದೂ ಸಹ ಕಡಿಮೆ ಬೆಲೆಯಲ್ಲಿ.

ಗೌಹರ್ ಮಹಲ್ ಭೋಪಾಲ್‌ನಲ್ಲಿರುವ ಅದ್ಭುತ ಸ್ಥಳಗಳಲ್ಲಿ ಒಂದಾಗಿದೆ. ಇದು ನಗರದಲ್ಲಿ ವಾಸಿಸುವ ಹೆಚ್ಚಿನ ಜನರಿಗೆ ಸಹ ತಿಳಿದಿಲ್ಲ. ನೀವು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲು ಇಷ್ಟಪಡುತ್ತಿದ್ದರೆ, 1820ರಲ್ಲಿ ನಿರ್ಮಿಸಲಾದ ಈ ಗೌಹರ್ ಮಹಲ್ ನಿಮಗೆ ಅತ್ಯಂತ ಉತ್ತಮ ಆಯ್ಕೆಯಾಗಿದೆ.

ಬುಡಕಟ್ಟು ವಸ್ತುಸಂಗ್ರಹಾಲಯವು ಮಧ್ಯಾಹ್ನ 12ರಿಂದ ರಾತ್ರಿ 8ರವರೆಗೆ ತೆರೆದಿರುತ್ತದೆ. ಇಲ್ಲಿ ನೀವು ಬುಡಕಟ್ಟು ಜೀವನಶೈಲಿಯ ಬಗ್ಗೆ ಕಲಿಯುವ ಮೂಲಕ ನಿಮ್ಮ ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬಹುದು. ಇಲ್ಲಿನ ಬೆಳಕು ಮತ್ತು ಕಲಾಕೃತಿಗಳು ತುಂಬಾ ಸುಂದರವಾಗಿವೆ.

ಕೆರ್ವಾ ಅಣೆಕಟ್ಟು ಭೋಪಾಲ್‌ನ ಪ್ರಸಿದ್ಧ ಪಿಕ್ನಿಕ್ ತಾಣದಲ್ಲಿ ಸೇರಿದೆ. ನಿಮ್ಮ ಸ್ನೇಹಿತರು, ಕುಟುಂಬ ಮತ್ತು ಪಾಲುದಾರರೊಂದಿಗೆ ನೈಸರ್ಗಿಕ ಸೌಂದರ್ಯದಿಂದ ಸುತ್ತುವರಿದ ಈ ಅಣೆಕಟ್ಟಿನ ಮೇಲೆ ನೀವು ಗಂಟೆಗಳ ಕಾಲ ಸಮಯ ಕಳೆಯಬಹುದು. ಈ ಅಣೆಕಟ್ಟು ಎಲ್ಲಾ ಕಡೆ ಹಸಿರಿನಿಂದ ಆವೃತವಾಗಿದ್,ದು ನಿಮಗೆ ಶಾಂತಿಯ ಭಾವನೆಯನ್ನು ನೀಡುತ್ತದೆ.

ಭೀಮೇಟ್ಕಾ 30 ಸಾವಿರ ವರ್ಷಗಳಷ್ಟು ಹಳೆಯದಾದ ಕಲ್ಲಿನ ಕಲಾಕೃತಿಗಳ ಸಂಗ್ರಹ ತಾಣವಾಗಿದೆ. ಇದನ್ನು ಕಾಡಿನ ನಡುವೆ ಬಹಳ ಸುಂದರವಾಗಿ ಸಂರಕ್ಷಿಸಲಾಗಿದೆ. ಇದನ್ನು ಯುನೆಸ್ಕೋ ಪರಂಪರೆಯಲ್ಲಿಯೂ ಸೇರಿಸಲಾಗಿದೆ. ನೀವು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಇಲ್ಲಿಗೆ ಭೇಟಿ ನೀಡಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link