Corona- ನಿಮ್ಮ ಒಳ್ಳೆಯ ಅಭ್ಯಾಸ ಕರೋನದ ಅಪಾಯವನ್ನು 31% ಕಡಿಮೆ ಮಾಡುತ್ತೆ

Sat, 24 Apr 2021-12:13 pm,

ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿರುವ ಕ್ಯಾಲೆಡೋನಿಯನ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ದೈನಂದಿನ ವ್ಯಾಯಾಮ ಮಾಡುವ ಮೂಲಕ ನೀವು ಕರೋನದ ಅಪಾಯವನ್ನು ಶೇಕಡಾ 31 ರಷ್ಟು ಕಡಿಮೆ ಮಾಡಬಹುದು.

ಜೀವನಕ್ರಮ ಮತ್ತು ರೋಗನಿರೋಧಕ ಶಕ್ತಿಗೆ ಸಂಬಂಧಿಸಿದಂತೆ ನಡೆಸಿರುವ ಅಧ್ಯಯನಗಳಲ್ಲಿ ಇದನ್ನು ವಿಶ್ವದಲ್ಲೇ ಅತಿದೊಡ್ಡ ಅಧ್ಯಯನ ಎಂದು ಹೇಳಲಾಗುತ್ತಿದೆ. ಇದರ ಪ್ರಕಾರ, ದೈನಂದಿನ ಜೀವನಕ್ರಮವು ನಮ್ಮ ದೇಹವನ್ನು ಸದೃಢವಾಗಿರಿಸುತ್ತದೆ, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಕರೋನಾದಂತಹ ಮಾರಕ ವೈರಸ್‌ಗಳ ವಿರುದ್ಧ ಹೋರಾಡುವಲ್ಲಿ ಇದರ ಪಾತ್ರ ಮಹತ್ತರವಾದದ್ದು ಎಂದು ಹೇಳಲಾಗಿದೆ.

ದಿನಕ್ಕೆ 30 ನಿಮಿಷ, ವಾರದಲ್ಲಿ 5 ದಿನ ಅಥವಾ 150 ನಿಮಿಷಗಳ ಕಾಲ ವ್ಯಾಯಾಮ (Exercises) ಮಾಡುವುದರಿಂದ ಉಸಿರಾಟದ ತೊಂದರೆ ಉಂಟಾಗುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಇದರಲ್ಲಿ, ವಾಕಿಂಗ್, ರನ್ನಿಂಗ್, ಸೈಕ್ಲಿಂಗ್ ಮತ್ತು ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮವನ್ನು ಸೂಚಿಸಲಾಗಿದೆ.

ಇದನ್ನೂ ಓದಿ - Home Quarantine: ಆರೋಗ್ಯ ಸಚಿವಾಲಯದ ಈ ಟಿಪ್ಸ್ ಅನುಸರಿಸಿ ಮನೆಯಲ್ಲಿಯೇ ನಿಮ್ಮ Oxygen ಮಟ್ಟ ಸುಧಾರಿಸಿ

ಅಧ್ಯಯನದ ಪ್ರಕಾರ, ಪ್ರತಿದಿನ ವ್ಯಾಯಾಮ (Exercises) ಮಾಡುವ ವ್ಯಕ್ತಿಗೆ ಕರೋನಾ ಲಸಿಕೆ (Corona Vaccine) ನೀಡಿದರೆ, ಅದು 40% ಹೆಚ್ಚು ಪರಿಣಾಮಕಾರಿಯಾಗುತ್ತದೆ. ಇದು ಸಂಭವಿಸಿದಲ್ಲಿ, ರೋಗದ ಅಪಾಯವನ್ನು 31 ಪ್ರತಿಶತ ಮತ್ತು ಸಾವಿನ ಅಪಾಯವನ್ನು 37 ಪ್ರತಿಶತದಷ್ಟು ಕಡಿಮೆ ಮಾಡಬಹುದು. 

ಇದನ್ನೂ ಓದಿ- Covid-19 ರೋಗಿಯನ್ನು ಯಾವಾಗ ಆಸ್ಪತ್ರೆಗೆ ಸೇರಿಸಬೇಕು? ಕೇವಲ 6 ನಿಮಿಷಗಳಲ್ಲಿ ಈ ರೀತಿ ಪತ್ತೆ ಹಚ್ಚಿ

ಗ್ಲ್ಯಾಸ್ಗೋ ಕ್ಯಾಲೆಡೋನಿಯನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸೆಬಾಸ್ಟಿಯನ್ ಚಾಸ್ಟೀನ್, ನಿಯಮಿತ ದೈಹಿಕ ಚಟುವಟಿಕೆಯು ಸಾಂಕ್ರಾಮಿಕ ರೋಗದಿಂದ ರಕ್ಷಿಸುತ್ತದೆ ಎಂದು ನಮ್ಮ ಸಂಶೋಧನೆ ಸೂಚಿಸುತ್ತದೆ. ಲಸಿಕೆ ಹಾಕುವ ಮೊದಲು 12 ವಾರಗಳ ದೈಹಿಕ ಚಟುವಟಿಕೆಯ ಕಾರ್ಯಕ್ರಮವನ್ನು ಮಾಡಲು ನಾವು ಜನರಿಗೆ ಸಲಹೆ ನೀಡುತ್ತಿರುವುದಕ್ಕೆ ಇದೇ ಮುಖ್ಯ ಕಾರಣ ಎಂದು ತಿಳಿಸಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link