Gold Rate Today: ಚಿನ್ನದ ಬೆಲೆ 50,000 ರೂಪಾಯಿಗೆ ಕುಸಿತ? ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ !
ಚಿನ್ನದ ಬೆಲೆ ಕಳೆದ ಕೆಲವು ದಿನಗಳಿಂದ ಇಳಿಯುತ್ತಲೇ ಇದ್ದು, ದೀಪಾವಳಿ ಮತ್ತು ದಸರಾ ಹಬ್ಬದ ಸಮಯದಲ್ಲಿ ಗಗನಕ್ಕೇರಿತ್ತು. ಕಳೆದ 1 ವಾರದಲ್ಲಿ ಭರ್ಜರಿ ಇಳಿಕೆ ಕಂಡಿದೆ.
ಭಾರತದಲ್ಲಿ ಆಭರಣಗಳ ರೂಪದಲ್ಲಿ ಚಿನ್ನದ ಮೇಲೆ ಜನರು ಹೂಡಿಕೆ ಮಾಡುತ್ತಾರೆ. ಮದುವೆ & ಶುಭ ಸಮಾರಂಭಗಳಲ್ಲಿ ಚಿನ್ನ ಬಹುಮುಖ್ಯ ಪಾತ್ರವಹಿಸುತ್ತದೆ.
ಚಿನ್ನದ ಬೆಲೆಯಲ್ಲಿ ಸತತವಾಗಿ ಇಳಿಕೆ ಕಂಡು ಬಂದಿದೆ. ಗಗನಕ್ಕೇರಿದ್ದ ಚಿನ್ನ ಇದೀಗ ಪಾತಾಳ ತಲುಪಿದೆ.
ಇನ್ನೊಂದು ಕಡೆ ಬೆಳ್ಳಿ ಬೆಲೆಯಲ್ಲೂ ಭಾರಿ ಇಳಿಕೆ ಕಂಡು ಬಂದಿದೆ. ಪ್ರತಿ 1 ಕೆಜಿಗೆ 89,500 ರೂಪಾಯಿ ತಲುಪಿದೆ.
ಬಂಗಾರದ ಬೆಲೆ 50 ಸಾವಿರ ರೂಪಾಯಿ & ಬೆಳ್ಳಿ ಬೆಲೆಯು 75 ಸಾವಿರ ರೂಪಾಯಿ ಆಗುತ್ತಾ? ಎಂಬ ಪ್ರಶ್ನೆ ಇದೀಗ ಅನೇಕರಲ್ಲಿ ಮೂಡಿದೆ.
ಕೆಲವು ಮಾರುಕಟ್ಟೆ ತಜ್ಞರ ಪ್ರಕಾರ ಬಂಗಾರದ ಬೆಲೆ 50 ಸಾವಿರ ರೂಪಾಯಿ ತಲುಪುವುದು ಅಷ್ಟು ಸುಲಭವಾಗಿ ಸಾಧ್ಯವಾಗದ ಸಂಗತಿಯಾಗಿದೆ.
ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಇಿಕೆಯಾಗುತ್ತಿರುವುದು ಆಭರಣ ಪ್ರಿಯರಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ.
ಇಂದು 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 69,950 ರೂಪಾಯಿ ತಲುಪಿದೆ. 22 ಕ್ಯಾರೆಟ್‌ನ ಆಭರಣ ಚಿನ್ನದ ಬೆಲೆಯು ಮತ್ತಷ್ಟು ಕುಸಿತ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.