ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್! 18 ತಿಂಗಳ ಬಾಕಿ ಡಿಎಯ ಬಗ್ಗೆ ಹೊರ ಬಿದ್ದಿದೆ ಅಪ್ಡೇಟ್ !
ನರೇಂದ್ರ ಮೋದಿ ಸರ್ಕಾರವು ಕೋವಿಡ್ -19 ಸಮಯದ 18 ತಿಂಗಳ ಬಾಕಿ ಡಿಎಯನ್ನು ನೀಡುವ ಪ್ರಸ್ತಾಪವನ್ನು ಸ್ವೀಕರಿಸಿದೆ.ಕೇಂದ್ರ ಸರ್ಕಾರಿ ನೌಕರರ ಜಂಟಿ ಸಲಹಾ ಯಂತ್ರೋಪಕರಣಗಳ ರಾಷ್ಟ್ರೀಯ ಮಂಡಳಿಯ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ 18 ತಿಂಗಳ ಬಾಕಿ ಡಿಎಯನ್ನು ನೀಡುವಂತೆ ಕೋರಲಾಗಿದೆ.
ಕೋವಿಡ್ ಸಾಂಕ್ರಾಮಿಕ ಮತ್ತು ಅದರಿಂದ ಉಂಟಾದ ಆರ್ಥಿಕ ಸಮಸ್ಯೆಗಳ ಕಾರಣ 18 ತಿಂಗಳ ತುಟ್ಟಿಭತ್ಯೆ ಪಾವತಿಯನ್ನು ಕೇಂದ್ರ ಸರ್ಕಾರ ತಡೆ ಹಿಡಿದಿತ್ತು. ಆದರೆ ಇದೀಗ ಈ ಹಣವನ್ನು ಮತ್ತೆ ತಮಗೆ ಪಾವತಿಸುವತೆ ಒತ್ತಾಯ ಜೋರಾಗಿದೆ.
ಈ ಹಿಂದೆ ಕೂಡಾ ಭಾರತೀಯ ರಕ್ಷಣಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮುಖೇಶ್ ಸಿಂಗ್, ಬಾಕಿ ಉಳಿಸಿಕೊಂಡಿರುವ ತುಟ್ಟಿಭತ್ಯೆ ಹಣವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.ಈ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದರು.
ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರವು ವರ್ಷಕ್ಕೆ ಎರಡು ಬಾರಿ ಜನವರಿ ಮತ್ತು ಜುಲೈನಲ್ಲಿ ಪರಿಶೀಲಿಸುತ್ತದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಜನವರಿ 1, 2024 ರಿಂದ ಶೇಕಡಾ 50 ಕ್ಕೆ ಹೆಚ್ಚಿಸಲಾಗಿದೆ.
DA 50 ಪ್ರತಿಶತವನ್ನು ತಲುಪಿದಾಗ, ಮನೆ ಬಾಡಿಗೆ ಭತ್ಯೆ (HRA) ಸಾಲ ಭತ್ಯೆಯನ್ನು ಸಹ ಪರಿಷ್ಕರಿಸಲಾಗುತ್ತದೆ.
ಮಾರ್ಚ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಡಿಎ ಮತ್ತು ಡಿಆರ್ ಹೆಚ್ಚಳಕ್ಕೆ ಅನುಮೋದನೆ ನೀಡಿತು.ಆಗ ಕೇಂದ್ರ ನೌಕರರ ಡಿಎ ಶೇ.46ರಿಂದ ಶೇ.50ಕ್ಕೆ ಏರಿಕೆಯಾಗಿದೆ.ಇನ್ನು ಈ ತಿಂಗಳಿನಲ್ಲಿ ಮತ್ತೆ ಮತ್ತೆ ಡಿಎ ಹೆಚ್ಚಿಸಲಿದೆ.