Big News On New Wage Code: ವೇತನ ಹಾಗೂ PFನಲ್ಲಿ ಯಾವುದೇ ಬದಲಾವಣೆ ಇಲ್ಲ, New Wage Code ಜಾರಿಗೆ ತಡೆ

Wed, 31 Mar 2021-7:59 pm,

ನೂತನ ವೇತನ ಸಂಹಿತೆ - ವೇತನ ಸಂಹಿತೆ (Wage Code Act) 2019ರ ಪ್ರಕಾರ, ಯಾವುದೇ ಓರ್ವ ನೌಕರನ ಬೇಸಿಕ್ ವೇತನ ಕಂಪನಿಯ CTCಯ ಶೇ.50 ಕ್ಕಿಂತ ಕಡಿಮೆಯಾಗಬಾರದು ಎನ್ನಲಾಗಿದೆ. ಪ್ರಸ್ತುತ ಸಾಕಷ್ಟು ಕಂಪನಿಗಳು ಬೇಸಿಕ್ ವೇತನವನ್ನು (Basic Salary) ಇಳಿಕೆ ಮಾಡಿ, ಭತ್ಯೆಗಳನ್ನು ಹೆಚ್ಚಾಗಿ ನೀಡುತ್ತವೆ. ಇದರಿಂದ ಕಂಪನಿಯ ಮೇಲೆ ಹೊರೆ ಕಡಿಮೆಯಾಗಬೇಕು ಎಂಬುದು ಅವುಗಳ ಉದ್ದೇಶ.

2. ನೂತನ ವೇತನ ಸಂಹಿತೆಯಿಂದ ಬದಲಾಗಳಿಗೆ ಸ್ಯಾಲರಿ ಸ್ಟ್ರಕ್ಚರ್ -  ವೆಜ್ ಕೋಡ್ (Wage Code Act), 2019 ಜಾರಿಗೆ ಬಂದ ಬಳಿಕ ನೌಕರರ ಸ್ಯಾಲರಿ ಸ್ಟ್ರಕ್ಚರ್ ಸಂಪೂರ್ಣ ಬದಲಾಗಲಿದೆ. ಇದರಿಂದ ನೌಕರರ ಕೈಗೆ ಸೇರುವ ಸಂಬಳ (Take Home Salary) ಕಡಿಮೆಯಾಗಲಿದೆ. ಏಕೆಂದರೆ ಬೇಸಿಕ್ ಸ್ಯಾಲರಿ ಹೆಚ್ಚಾಗುವುದರಿಂದ ಭವಿಷ್ಯ ನಿಧಿ ಖಾತೆಗೆ ಹೆಚ್ಚಿನ ಹಣ ಸೇರಲಿದ್ದು, ನೌಕರರ ಭವಿಷ್ಯ ಮತ್ತಷ್ಟು ಸುರಕ್ಷಿತವಾಗಲಿದೆ. ಪಿಎಫ್ ಜೊತೆಗೆ ಗ್ರ್ಯಾಚುಟಿಯಲ್ಲಿ (Monthly Gratuity) ನೌಕರರ ಕೊಡುಗೆ ಕೂಡ ಹೆಚ್ಚಾಗಲಿದೆ. ಈ ರೀತಿ ನೌಕರರ ಟೇಕ್ ಹೋಮ್ ಸ್ಯಾಲರಿ ಕಡಿಮೆಯಾಗಲಿದ್ದು, ನೌರರರಿಗೆ ನಿವೃತ್ತಿಯ ಬಳಿಕ ಹೆಚ್ಚಿನ ಹಣ ಸಿಗಲಿದೆ.

3. ಇದರ ಜೊತೆಗೆ ಉಳಿದ ಕೋಡ್ ಕೂಡ ಜಾರಿಗೆ ಬರುವುದಿಲ್ಲ - ನೂತನ ವೆಜ್ ಕೋಡ್ ಜೊತೆಗೆ ಸಾಮಾಜಿಕ ಭದ್ರತೆ ಸಂಹಿತೆ (social security code), ಇಂಡಸ್ಟ್ರಿಯಲ್ ರಿಲೇಶನ್ ಕೋಡ್ (code on industrial relations) ಹಾಗೂ ಆಕ್ಯುಪೇಶನಲ್ ಸೇಫ್ಟಿ ಕೋಡ್, ಹೆಲ್ತ್ ಅಂಡ್ ವರ್ಕಿಂಗ್ ಕಂಡಿಶನ್ಸ್ ಕೋಡ್ (code on occupational safety, health and working conditions) ಗಳು ಕೂಡ ಏಪ್ರಿಲ್ 1 ಕ್ಕೆ ಜಾರಿಗೆ ಬರುತ್ತಿಲ್ಲ.   

4. ಸಾಮಾಜಿಕ ಭದ್ರತೆ ಸಂಹಿತೆ (social security code) - ಯಾವುದೇ ಓರ್ವ ನೌಕರ ಯಾವುದೇ ಒಂದು ಕಂಪನಿಯಲ್ಲಿನ ಗುತ್ತಿಗೆ ಎಷ್ಟೇ ಅವಧಿಯದ್ದಾಗಿದ್ದರೂ ಕೂಡ ಆತ ಗ್ರ್ಯಾಚುಟಿ ಪಡೆಯಲು ಅರ್ಹನಾಗಿರುವ ವ್ಯವಸ್ಥೆಯನ್ನು ಈ ಸಂಹಿತೆಯಲ್ಲಿ ಮಾಡಿಕೊಡಲಾಗಿದೆ. ಇದುವರೆಗೆ ಯಾವುದೇ ನೌಕರ ಕಂಪನಿಯೊಂದರಲ್ಲಿ 5 ವರ್ಷ ಸೇವೆ ಪೂರ್ಣಗೊಳಿಸಿದಾಗ ಮಾತ್ರ ಗ್ರ್ಯಾಚುಟಿಗೆ ಅರ್ಹನಾಗಲಿದ್ದಾನೆ ಎಂಬ ನಿಯಮವಿತ್ತು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link