Jio-Airtelಗೆ ಬಿಗ್ ಶಾಕ್: 1,198 ರೂ.ಗೆ ಅನ್‌ಲಿಮಿಡೆಟ್ ಡೇಟಾ & ಕರೆಯ 365 ದಿನಗಳ BSNL ಪ್ಲಾನ್!
ಈ ಎರಡೂ BSNL ಪ್ರಿಪೇಯ್ಡ್ ಯೋಜನೆಗಳಲ್ಲಿ ಗ್ರಾಹಕರು ಯಾವ ರೀತಿಯ ಪ್ರಯೋಜನಗಳನ್ನು ಪಡೆಯುತ್ತಾರೆ? ಈ ಯೋಜನೆಗಳು ಎಷ್ಟು ದಿನಗಳ ವ್ಯಾಲಿಡಿಟಿಯನ್ನು ನೀಡುತ್ತವೆ ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಈ ಯೋಜನೆಯಲ್ಲಿ ನೀವು 12 ತಿಂಗಳ ಅಂದರೆ 365 ದಿನಗಳ ವ್ಯಾಲಿಡಿಟಿ ಪಡೆಯುತ್ತೀರಿ. ಇದರೊಂದಿಗೆ ಡೇಟಾ ಮತ್ತು SMSನ ಪ್ರಯೋಜನವೂ ಲಭ್ಯವಿದ್ದು, ನಿಮ್ಮ ಮಾಸಿಕ ವೆಚ್ಚ ಕೇವಲ 100 ರೂ. ಆಗುತ್ತದೆ. BSNL ಈ ಯೋಜನೆಯ ಬೆಲೆ 1,198 ರೂ. ಆಗಿದ್ದು, ಇದರಲ್ಲಿ ನೀವು ವರ್ಷವಿಡೀ 365 ದಿನಗಳ ವ್ಯಾಲಿಡಿಟಿ ಪಡೆಯುತ್ತೀರಿ. ಇದರೊಂದಿಗೆ ತಿಂಗಳಿಗೆ 300 ನಿಮಿಷಗಳ ವಾಯ್ಸ್ ಕರೆ, ತಿಂಗಳಿಗೆ 3GB ಡೇಟಾ ಮತ್ತು 30 SMS ಲಭ್ಯವಿದೆ.
ತಮ್ಮ ಸಂಖ್ಯೆಯನ್ನು ಸಕ್ರಿಯವಾಗಿ ಇರಿಸಿಕೊಳ್ಳಲು & ಅದೇ ಸಮಯದಲ್ಲಿ ಸೀಮಿತ ಕರೆ ಮತ್ತು ಡೇಟಾ ಬಳಸಲು ಬಯಸುವವರಿಗೆ ಈ ಯೋಜನೆ ಉತ್ತಮವಾಗಿದೆ. 12 ತಿಂಗಳಿಗೆ ನಿಮಗೆ ಒಟ್ಟು 1,198 ರೂ. ಖರ್ಚಾಗುತ್ತದೆ. ಅಂದರೆ ನಿಮ್ಮ ಖರ್ಚು ತಿಂಗಳಿಗೆ ಕೇವಲ 100 ರೂ. ಆಗುತ್ತದೆ. ಈ ಮೂಲಕ ನೀವು ಅತ್ಯುತ್ತಮ ಸೇವೆಯನ್ನು ಪಡೆಯಬಹುದು.
ಬಿಎಸ್‌ಎನ್‌ಎಲ್‌ನ (BSNL) 439 ರೂ.ಗಳ ಈ ಯೋಜನೆಯಲ್ಲಿ ನಿಮಗೆ ಅನಿಯಮಿತ ವಾಯ್ಸ್ ಕರೆ & ಒಟ್ಟು 300 SMS ನೀಡಲಾಗುವುದು. ನೀವು 90 ದಿನಗಳ ವ್ಯಾಲಿಡಿಟಿ ಪಡೆಯುತ್ತೀರಿ. ಈ ಯೋಜನೆಯಲ್ಲಿ ನೀವು ಯಾವುದೇ ಡೇಟಾ ಸೌಲಭ್ಯವನ್ನು ಒದಗಿಸುತ್ತಿಲ್ಲ. ಅಂದರೆ ನೀವು ದೀರ್ಘಾವಧಿಯ ವ್ಯಾಲಿಡಿಟಿಯೊಂದಿಗೆ ಕರೆ ಮಾಡಲು ಬಯಸಿದರೆ ಈ ಯೋಜನೆಯನ್ನು ಇಷ್ಟಪಡಬಹುದು.
ಮೇಲಿನ ಈ ಯೋಜನೆ ನಿಮಗೆ ಕೇವಲ ಕರೆ ಸೌಲಭ್ಯ ಮಾತ್ರ ಬೇಕಿದ್ದರೆ ಅತ್ಯುತ್ತಮ ಆಯ್ಕೆಯಾಗಿದೆ. BSNLನ ಅಧಿಕೃತ ಸೈಟ್‌ನಲ್ಲಿ ರೀಚಾರ್ಜ್‌ಗಾಗಿ ಈ ಎರಡೂ ಯೋಜನೆಗಳು ಲಭ್ಯವಿದೆ. ಈ ಯೋಜನೆಗಳಲ್ಲಿ ಯಾವುದಾದರೂ ನಿಮ್ಮ ಸಂಖ್ಯೆಯನ್ನು ರೀಚಾರ್ಜ್ ಮಾಡಲು ಬಯಸಿದರೆ ನೀವು BSNL ಅಧಿಕೃತ ಸೈಟ್ ಅಥವಾ ಕಂಪನಿಯ ಮೊಬೈಲ್ ಅಪ್ಲಿಕೇಶನ್ ಬಳಸಬಹುದು.