ಸ್ಪರ್ಧಿಗಳಿಗೆ ಶಾಕ್ ಮೇಲೆ ಶಾಕ್ !ಎಲಿಮಿನೇಶನ್ ನಲ್ಲಿ ಬಿಗ್ ಟ್ವಿಸ್ಟ್ !ಎರಡನೇ ವಾರವೇ ಯಾರೂ ಊಹಿಸದ ನಿರ್ಧಾರ ತೆಗೆದುಕೊಂಡ Biggboss
ಈ ಬಾರಿ ಬಿಗ್ ಬಾಸ್ ನಲ್ಲಿ ಯಾರೂ ಊಹಿಸಿರದ ಟ್ವಿಸ್ಟ್ ಗಳು ಸಿಗುತ್ತಿವೆ. ಹೀಗೆ ಆಗಬಹುದು ಎಂದು ವೀಕ್ಷಕರು ಅಂದುಕೊಂಡರೆ, ಆ ನಿರೀಕ್ಷೆಯನ್ನೇ ಬಿಗ್ ಬಾಸ್ ತಲೆ ಕೆಳಗೆ ಮಾಡುತ್ತಿದ್ದಾರೆ.
ಮೊದಲ ವಾರವೇ ಯಮುನಾ ಶ್ರೀನಿಧಿ ಎಲಿಮಿನೆಟ್ ಆಗಬಹುದು ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ.ಆದರೆ ಅವರು ಮನೆಯಿಂದ ಔಟಾದರು. ಹೊರ ಬರಬಹುದು ಅಂದುಕೊಂಡಿದ್ದ ಹಂಸ ಕ್ಯಾಪ್ಟನ್ ಆಗಿ ಇಮ್ಯುನಿಟಿ ಪಡೆಯುತ್ತಾರೆ.
ಬಿಗ್ ಬಾಸ್ ಇತಿಹಾಸಲ್ಲಿ ಹಿಂದೆಂದೂ ಆಗದ ಘಟನೆಗೆ ಎರಡನೇ ವಾರ ಸಾಕ್ಷಿಯಾಗುತ್ತದೆ. ರೂಲ್ಸ್ ಬ್ರೇಕ್ ಆದ ಕಾರಣ ಕ್ಯಾಪ್ಟನ್ ಸೇರಿದಂತೆ ಇಡೀ ಮನೆಯೇ ನಾಮಿನೇಟ್ ಆಗುತ್ತದೆ.
ಹಂಸ ನಾಯಕತ್ವದ ಬಗ್ಗೆ ಮನೆಯೊಳಗಿನ ಬಹುತೇಕರಿಗೆ ಮುನಿಸಿದೆ. ಹಂಸ ಕೂಡಾ ತನ್ನ ಕೈಯಲ್ಲಿ ನಿಭಾಯಿಸುವುದು ಸಾಧ್ಯವಾಗುತ್ತಿಲ್ಲ, ಕ್ವಿಟ್ ಮಾಡುವುದಾಗಿ ಕಣ್ಣೀರಿಟ್ಟಿದ್ದಾರೆ.
ಈ ಮಧ್ಯೆ ಬಿಗ್ ಬಾಸ್ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ. ಅದುವೇ ಈ ವಾರ ನೋ ಎಲಿಮಿನೇಶನ್. ಹಾಗಾಗಿ ಈ ವಾರ ವೋಟಿಂಗ್ ಲೈನ್ ಕೂಡಾ ಓಪನ್ ಆಗಿಲ್ಲ.
ಈ ಮೂಲಕ ಬಿಗ್ ಬಾಸ್ ಎಲ್ಲಾ ಸ್ಪರ್ಧಿಗಳಿಗೆ ಒಂದು ವಾರದ ಇಮ್ಮ್ಯುನಿಟಿ ನೀಡಿದೆ. ಹಬ್ಬದ ಕಾರಣ ಈ ವಾರ ಎಲ್ಲರೂ ಸೇಫ್ ಆಗಿದ್ದಾರೆ.
ಆದರೆ, ಮುಂದಿನ ವಾರ ಡಬಲ್ ಎಲಿಮಿನೇಶನ್ ಇರುವ ಸಾಧ್ಯತೆ ಇದೆ.ಆಗ ಒಟ್ಟಿಗೆ ಇಬ್ಬರು ಮನೆಯಿಂದ ಹೊರ ಬರಬೇಕಾಗುತ್ತದೆ.
ಇನ್ನೊಂದು ಮೂಲಗಳ ಪ್ರಕಾರ ಒಂದೇ ವಾರಕ್ಕೆ ಮನೆಯಿಂದ ಹೊರ ಬಂದಿರುವ ಯಮುನಾ ಮತ್ತೆ ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆ ಪ್ರವೇಶ ಮಾಡಬಹುದು.