ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾಳೆ ಬ್ಯೂಟಿಫುಲ್‌ ಬೆಡಗಿ! ಮೊದಲ ಭಾರಿಗೆ ದೊಡ್ಮನೆಯಲ್ಲಿ ಸೃಷ್ಟಿಯಾಗಲಿದೆ ಇತಿಹಾಸ..ಎಂಟ್ರಿ ಕೊಡುತ್ತಿರುವ ಆ ಹುಡುಗಿ ಯಾರು ಗೊತ್ತಾ?

Sun, 22 Sep 2024-10:52 am,

ಅಭಿಮಾನಿಗಳು 'ಬಿಗ್ 18' ಗಾಗಿ ತುಂಬಾ ಉತ್ಸಾಹದಿಂದ ಕಾಯುತ್ತಿದ್ದಾರೆ. ಈ ಸೀಸನ್‌ನ ವಿಶೇಷವಾದ ವಿಷಯವೆಂದರೆ ಸಲ್ಮಾನ್ ಖಾನ್ ಮತ್ತೊಮ್ಮೆ ಕಾರ್ಯಕ್ರಮಕ್ಕೆ ಹೋಸ್ಟ್ ಆಗಿ ರೀ ಎಂಟ್ರಿ ಕೊಟ್ಟಿದ್ದಾರೆ. 

ಇದೀಗ ರಿಲೀಸ್‌ ಆಗಿರುವ ಬಿಗ್‌ಬಾಸ್‌ ಯೂನೀಕ್‌ ಥೀಮ್‌ನ ಟ್ರೇಲರ್‌ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಈ ಪ್ರೊಮೋದಲ್ಲಿ ಸಲ್ಮಾನ್ ಖಾನ್ ಕುಟುಂಬ ಸದಸ್ಯರ ಭವಿಷ್ಯವನ್ನು ಬಿಗ್ ಬಾಸ್‌ನಲ್ಲಿ ನೋಡಬಹುದು ಎಂದು ಹೇಳಿದ್ದಾರೆ. 

ಏತನ್ಮಧ್ಯೆ, ಈ ಭಾರಿ ಬಿಗ್‌ ಬಾಸ್‌ನಲ್ಲಿ ಯಾವ ಯಾವ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಎನ್ನುವ ಚರ್ಚೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೀಗಿರುವಾಗ ಒಬ್ಬ ಯುವತಿಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. 

ಭಾರತದ ಮೊದಲ AI ಸೂಪರ್ಸ್ಟಾರ್ ನೈನಾ ಬಿಗ್‌ಬಾಸ್‌ ಮೆನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಆದಾಗ್ಯೂ, ಅವರು ಸ್ಪರ್ಧಿಯಾಗಿ ಮನೆಗೆ ಎಂಟ್ರಿ ಕೊಡುತ್ತಾರಾ ಅಥವಾ  AI ರೂಪದಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬುದರು ಬಗ್ಗೆ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಆದರೆ ನೈನಾ ಹೆಸರಿನ ಚರ್ಚೆಯೇ ಅಭಿಮಾನಿಗಳನ್ನು ಹುರಿದುಂಬಿಸಿದೆ.  

ಝಾನ್ಸಿ ಮೂಲದ ನೈನಾ ಭಾರತದ ಪ್ರಮುಖ ವಿಷಯ ಆಧಾರಿತ ಮೆಟಾ-ಇನ್‌ಫ್ಲುಯೆನ್ಸರ್ ಕಂಪನಿಯಾದ Avtr ಗೆ ಪ್ರಮುಖ ಪ್ರಭಾವಿಯಾಗಿ ಆನ್‌ಲೈನ್ ಸಂವೇದನೆಯಾಗಿದ್ದಾರೆ.

Avtr ಮೆಟಾ ಲ್ಯಾಬ್ಸ್‌ನಿಂದ 2022 ರಲ್ಲಿ AI ಅವತಾರವನ್ನು ರಚಿಸಲಾಗಿದ್ದು, ನೈನಾ Instagram ನಲ್ಲಿ 168,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ, ಫಿಟ್‌ನೆಸ್ ಮತ್ತು ಫ್ಯಾಷನ್ ವಿಷಯವನ್ನು AI ಬೆಡಗಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link