ಶೋಭಾ ಶೆಟ್ಟಿ ಟಾರ್ಗೆಟ್ ಮಾಡುತ್ತಿರುವ ʼಸತ್ಯʼ ಖ್ಯಾತಿಯ ಗೌತಮಿ ಜಾಧವ್ ಒಂದು ವಾರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
)
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಈಗಾಗಲೇ ಮೂವರು ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಈ ಹಿಂದೆ ಹನುಮಂತ ಅವರು ಆಗಮಿಸಿದ್ದರೆ, ಅದಾದ ನಂತರ ನಟಿ ಶೋಭಾ ಶೆಟ್ಟಿ ಮತ್ತು ರಜತ್ ಎಂಟ್ರಿ ಕೊಟ್ಟಿದ್ದಾರೆ.
)
ಇನ್ನು ದೊಡ್ಮನೆಯಲ್ಲಿ ಶೋಭಾ ಶೆಟ್ಟಿ ಸಖತ್ ಹವಾ ಕ್ರಿಯೇಟ್ ಮಾಡಿದ್ದಾರೆ. ಈ ಹಿಂದೆ ತೆಲುಗು ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸಿದ್ದ ಈಕೆ ಇದೀಗ ಕನ್ನಡದಲ್ಲೂ ಭರ್ಜರಿಯಾಗಿ ಆಟವಾಡುತ್ತಿದ್ದಾರೆ.
)
ನೇರ ನಡೆ ನುಡಿಯಿಂದ ಮನೆಮಂದಿಯಲ್ಲಿ ನಡುಕ ಹುಟ್ಟಿಸಿರುವ ಶೋಭಾ, ಬಂದಾಗಿನಿಂದ ಟಾರ್ಗೆಟ್ ಮಾಡುತ್ತಿರುವುದು ಗೌತಮಿ ಜಾಧವ್ ಎಂಬವರನ್ನು. "ನಿಮ್ಮಲ್ಲಿ ಪಾಸಿಟಿವಿಟಿನೇ ಇಲ್ಲ. ಇರೋದೆಲ್ಲಾ ನೆಗೆಟಿವ್" ಎಂದೆಲ್ಲಾ ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದಾರೆ.
ಅಂದಹಾಗೆ ಶೋಭಾ ಶೆಟ್ಟಿ ಎಷ್ಟೇ ಕೌಂಟರ್ ಕೊಟ್ಟರೂ ತಾನೂ ಜಗ್ಗೋದೇ ಇಲ್ಲ ಎಂಬಂತೆ ಗೌತಮಿ ವರ್ತಿಸುತ್ತಿದ್ದಾರೆ. ಆದರೆ ಅವರ ವರ್ತನೆ ಗಮನಿಸಿದರೆ ಕೊಂಚ ಅಳುಕಿದವರಂತೆ ಕಾಣಿಸುತ್ತದೆ..
ಇನ್ನೊಂದೆಡೆ ಗೌತಮಿಯವರು ಬಿಗ್ ಬಾಸ್ ಮನೆಯಿಂದ ಪಡೆಯುತ್ತಿರುವ ಸಂಭಾವನೆ ಬಗ್ಗೆ ಸದ್ಯ ಚರ್ಚೆ ಶುರುವಾಗಿದೆ. ಉಳಿದೆಲ್ಲಾ ಕಂಟೆಸ್ಟೆಂಟ್‌ಗಳಿಗಿಂತ ಇವರೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಪ್ರತಿ ವಾರಕ್ಕೆ ಒಂದೂವರೆ ಲಕ್ಷ ರೂಪಾಯಿ ಸಂಭಾವನೆ ಸಿಗುತ್ತಿದೆ ಎನ್ನಲಾಗಿದೆ. ಒಂದು ವೇಳೆ ಈ ಸುದ್ದಿ ನಿಜವಾಗಿದ್ದರೆ, ಈಗಾಗಲೇ ಎಂಟು ವಾರಗಳನ್ನು ಮನೆಯೊಳಗೆ ಕಳೆದಿರುವ ಗೌತಮಿ, ಸುಮಾರು 12 ಲಕ್ಷ ರೂಪಾಯಿವರೆಗೂ ಸಂಭಾವನೆ ಪಡೆದಿರಬಹುದೆಂದು ಅಂದಾಜಿಸಲಾಗುತ್ತಿದೆ.
ಅಂದಹಾಗೆ, ಈ ವಿಷಯವನ್ನು ಕಲರ್ಸ್ ಕನ್ನಡ ಗೌಪ್ಯವಾಗಿ ಇಟ್ಟಿದೆ. ಜೊತೆಗೆ ಗೌತಮಿ ಜಾಧವ್ ಕಡೆಯವರಾಗಿ ಬಹಿರಂಗಪಡಿಸಿಲ್ಲ. ಇದು ಕೇವಲ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯಷ್ಟೇ.