ಪಾಸಿಟಿವಿಟಿ ಅಂತಲೇ ಫೇಮಸ್ ಆಗಿರೋ ಬಿಗ್ ಬಾಸ್ ಸ್ಪರ್ಧಿ ಗೌತಮಿ ಜಾಧವ್ ಯಾರು ಗೊತ್ತಾ? ಇವ್ರ ಮಾವ ಕನ್ನಡದ ಹೆಸರಾಂತ ವ್ಯಕ್ತಿ...ಕಿಚ್ಚ ಸುದೀಪ್ ಗೆಳೆಯನೂ ಹೌದು!
ಗೌತಮಿ ಜಾಧವ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. 1993ರ ಆಗಸ್ಟ್ 22ರಂದು ಬೆಂಗಳೂರಿನಲ್ಲಿ ಜನಿಸಿದ ಗೌತಮಿ, ಸತ್ಯ ಸೀರಿಯಲ್ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದವರು. ಇವರ ಪತಿ ಅಭಿಷೇಕ್ ಕಾಸರಗೋಡ್. ಇವರು ಕೂಡ ಕನ್ನಡ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ.
ಗೌತಮಿ ಜಾಧವ್ 2018ರಲ್ಲಿ ತೆರೆಕಂಡ ʼಕಿನಾರೆʼ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಆನಂತರ ಆದ್ಯ ಚಿತ್ರದಲ್ಲಿ ಅಭಿನಯಿಸಿದ್ದು, ಕೆಲ ತೆಲುಗು ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ.
ಇನ್ನು 2020ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಆರಂಭವಾದ 'ಸತ್ಯ' ಸೀರಿಯಲ್ ಮೂಲಕ ಗೌತಮಿ ಜಾದವ್ ಕನ್ನಡ ಕಿರುತೆರೆ ಕಾಲಿಟ್ಟರು. ಈ ಧಾರಾವಾಹಿಯಲ್ಲಿ ಅಪಾರ ಅಭಿಮಾನಿ ಬಳಗವನ್ನೇ ಸಂಪಾದಿಸಿದ್ದರು ಗೌತಮಿ.
ಗೌತಮಿ ಜಾದವ್ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ 4ನೇ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೆ. ಇನ್ನು ಬಿಗ್ ಬಾಸ್ ಮನೆಯ ಒಂದಷ್ಟು ಸದಸ್ಯರ ಪರಿಚಯ ಸುದೀಪ್ ಅವರಿಗೆ ಇದೆ. ಆ ಸ್ಪರ್ಧಿಗಳಲ್ಲಿ ಗೌತಮಿ ಕೂಡ ಒಬ್ಬರು.
ನೇರವಾಗಿ ಸುದೀಪ್‌ಗೆ ಗೌತಮಿ ಪರಿಚಯ ಇಲ್ಲದಿದ್ದರೂ, ಅವರ ಮಾವ ಮತ್ತು ಸುದೀಪ್ ಬಹಳಷ್ಟು ಪರಿಚಿತರು. ಹಿರಿಯ ಸಿನೆಮಾ ಪತ್ರಕರ್ತ ಗಣೇಶ ಕಾಸರಗೋಡು ಅವರೇ ಗೌತಮಿ ಜಾಧವ್ ಅವರ ಮಾವ. ಗಣೇಶ ಕಾಸರಗೋಡು ಮಗನೇ ಗೌತಮಿ ಜಾಧವ್ ಪತಿ ಅಭಿಷೇಕ ಕಾಸರಗೋಡು.
ಗಣೇಶ ಕಾಸರಗೋಡು ಮತ್ತು ಸುದೀಪ್ ಅವರು ಅನೇಕ ವರ್ಷಗಳಿಂದ ಪರಿಚಯಸ್ಥರು. ಇಬ್ಬರ ನಡುವೆ ಉತ್ತಮ ಬಾಂಧವ್ಯ ಇದೆ. ಈ ಹಿಂದೆ ಗೌತಮಿ ಮತ್ತು ಅಭಿಷೇಕ್ ಮದುವೆ ಆಹ್ವಾನವನ್ನು ಗಣೇಶ್ ಕಾಸರಗೋಡು ನೀಡಿದ್ದಾಗ ನಿರಾಕರಿಸದ ಕಿಚ್ಚ ಸುದೀಪ್, ಸಂಭ್ರಮದಿಂದ ಮದುವೆಯಲ್ಲಿ ಭಾಗವಹಿಸಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.