ಬಿಗ್ ಬಾಸ್ ನಮ್ರತಾ ಗೌಡ ವಿಗ್ ಬಳಸುತ್ತಾರಾ.. ಈ ಉದ್ದದ ಕೂದಲು ನ್ಯಾಚುರಲ್ ಅಲ್ವೇ!?
ನಮ್ರತಾ ಗೌಡ ಅವರ ಈ ಉದ್ದದ ಕೂದಲು ನ್ಯಾಚುರಲ್ ಅಲ್ಲಾ. ಅವರು ವಿಗ್ ಬಳಸುತ್ತಾರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ರತಾ ಗೌಡ ನೆಟ್ಟಿಗರ ಈ ಪ್ರಶ್ನೆಗೆ ಹಲವು ವರ್ಷಗಳ ಹಿಂದೆಯೇ ಉತ್ತರ ಕೊಟ್ಟಿದ್ದಾರೆ.
ನನ್ನ ಹೇರ್‌ಸ್ಟೈಲ್ ಮತ್ತು ಡ್ರೆಸ್ ಬಗ್ಗೆ ನಮ್ಮಮ್ಮ ವಿಶೇಷ ಕಾಳಜಿವಹಿಸುತ್ತಾರೆ. ಧಾರಾವಾಹಿಯಲ್ಲಿ ನಾಗಿಣಿಯ ಉದ್ದ ಕೂದಲು ವಿಗ್ ಆಲ್ಲ. ಅದು ನನ್ನ ನಿಜವಾದ ಕೂದಲು' ಎಂದು ನಮ್ರತಾ ಹೇಳಿದ್ದರು.
ಕೆಲವು ಪ್ರೇಕ್ಷಕರು ಈಗಲೂ ಅದನ್ನು ವಿಗ್ ಅಥವಾ ಎಕ್ಸ್ಟೆನ್ಷನ್ ಎಂದುಕೊಂಡಿದ್ದಾರೆ. ಆದರೆ ಅದು ನಿಜವಾದ ಕೂದಲು ಎಂದು ನಮ್ರತಾ ಹೇಳಿದ್ದರು.
ನಮ್ರತಾ ಅವರ ಅಮ್ಮನಿಗೆ ಉದ್ದ ಕೂದಲು ಅಂದರೆ ತುಂಬ ಇಷ್ಟವಂತೆ. ಇದೇ ಕಾರಣಕ್ಕೆ ನಮ್ರತಾ ಅವರ ಕೂದಲು ಇಷ್ಟೊಂದು ಚೆನ್ನಾಗಿ ಇತ್ತಂತೆ.