ಹೊರ ಹೋಗಲು ನಿರ್ಧರಿಸಿದ್ದೇಕೆ ಸಿಂಗರ್ ಹನುಮಂತ? ಬಿಗ್ ಬಾಸ್ʼನಲ್ಲಿ ಮಿಡ್ ವೀಕ್ ಎಲಿಮಿನೇಷನ್ ಶಾಕ್!
Bigg Boss elimination: ಸಿಂಗರ್ ಹನುಮಂತ ಬಿಗ್ ಬಾಸ್ ಕನ್ನಡ ಸೀಸನ್ 11 ರ ವಿನ್ನರ್ ಆಗಬಹುದೆಂದು ಅನೇಕರು ಊಹಿಸುತ್ತಿರುವ ಹೊತ್ತಲ್ಲೇ ಶಾಕಿಂಗ್ ಘಟನೆಯೊಂದು ನಡೆದಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಪ್ರತಿ ವಾರ ಹನುಮಂತ ಉತ್ತಮವಾಗಿ ವೋಟ್‌ಗಳನ್ನು ಪಡೆಯುತ್ತಿದ್ದಾರೆ. ಇವರ ಆಟ ಜನರ ಮನಸ್ಸಿಗೆ ಇಷ್ಟವಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರ ಫಿನಾಲೆಗೆ ಇನ್ನೂ ಮೂರೇ ವಾರ ಬಾಕಿ ಇದೆ. ಈ ವಾರ ತುಂಬಾ ಇಂಪಾರ್ಟೆಂಟ್ ವೀಕ್ ಆಗಿದ್ದು, ಇಮ್ಯುನಿಟಿ ಪಡೆದವರು ನೇರವಾಗಿ ಫಿನಾಲೆಗೆ ಎಂಟ್ರಿ ಕೊಡಲಿದ್ದಾರೆ.
ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಿಗ್ ಬಾಸ್ ಶೋ ಗೆ ಬಂದರು. ಲಾಯರ್ ಜಗದೀಶ್ ಮತ್ತು ರಂಜಿತ್ ಮನೆಯಿಂದ ಹೊರ ನಡೆದ ಬಳಿಕ ಹನುಮಂತ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟರು.
ಆದರೆ ಈಗ ಹನುಮಂತ ಬಿಗ್ ಬಾಸ್ ಆಟವನ್ನು ತೊರೆಯುವ ಬಗ್ಗೆ ಮಾತನಾಡಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಹನುಮಂತ ಶೋ ಕ್ವಿಟ್ ಮಾಡಲು ನಿರ್ಧರಿಸಿದ್ದಾರೆ.
ಹನುಮಂತ ಬಿಗ್ ಬಾಸ್ ಕ್ವಿಡ್ ಮಾಡುವ ಕುರಿತು ಧನರಾಜ್ ಜೊತೆ ಚರ್ಚೆ ಮಾಡಿದ್ದಾರೆ. ಆದರೆ ಧನರಾಜ್ ಅವರು ಹನುಮಂತನಿಗೆ ಧೈರ್ಯ ತುಂಬಿ ಇಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳದಂತೆ ತಿಳಿಸಿದ್ದಾರೆ.
ಬಿಗ್ ಬಾಸ್ ಫಿನಾಲೆ ಹತ್ತಿರ ಇರುವಾಗಲೇ ಹನುಮಂತ ಶೋ ತೊರೆಯುವ ಬಗ್ಗೆ ಮಾತನಾಡಿರುವುದು ಅಭಿಮಾನಿಗಳಿಗೆ ಕೊಂಚ ಬೇಸರ ತರಿಸಿದೆ.