ಬಿಗ್‌ಬಾಸ್ ಬ್ಯೂಟಿ ಸಂಗೀತಾ ಶೃಂಗೇರಿ ತಂದೆ ಇವರೇ! ತಾಯಿ ಕೂಡ ಸಖತ್ ಫೇಮಸ್!!
ಸಂಗೀತಾ ಶೃಂಗೇರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ.. ಮೂಲತಃ ಚಿಕ್ಕಮಂಗಳೂರಿನ ಜಿಲ್ಲೆಯ ಶೃಂಗೇರಿವರಾದ ಇವರು 1996ರ ಮೇ 13ರಂದು ಜನಿಸಿದರು.. ಚಿಕ್ಕಂದಿನಲ್ಲಿಯೇ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ 0 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದಿದ್ದರು...
ನಟಿ ಸಂಗೀತಾ ಶೃಂಗೇರಿ 2016ರಲ್ಲಿ ಹರಹರ ಮಹಾದೇವ ಎನ್ನುವ ಸಿರೀಯಲ್ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿಕೊಟ್ಟರು.. ಅದರಲ್ಲಿ ಪಾರ್ವತಿ ಪಾತ್ರದ ಮೂಲಕ ಸಾಕಷ್ಟು ಕಿರುತೆರೆ ಪ್ರೇಕ್ಷಕರ ಮನೆಮಾತಾದರು..
ನಂತರ ಸಂಗೀತಾ ಶೃಂಗೇರಿ ಎ+ ಎನ್ನುವ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು.. ಬಳಿಕ 777 ಚಾರ್ಲಿ ಸಿನಿಮಾದಲ್ಲಿ ನಟಿಸಿ ದೊಡ್ಡ ಖ್ಯಾತಿ ಗಳಿಸಿದರು.. ಈ ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಸದ್ದು ಮಾಡಿದ ಈ ಬ್ಯೂಟಿ ಬಿಗ್‌ಬಾಸ್ ಶೋ ಮೂಲಕ ಅತೀ ಹೆಚ್ಚು ಜನಪ್ರಿಯತೆ ಗಳಿಸಿದರು.
ಬಿಗ್‌ಬಾಸ್ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಇತ್ತೀಚೆಗೆ ನಟ ದಿಗಂತ್ ಅವರೊಂದಿಗೆ ಮಾರಿಗೋಲ್ಡ್ ಸಿನಿಮಾದಲ್ಲಿ ನಟಿಸಿದ್ದರು.. ಈ ಚಿತ್ರಕ್ಕೆ ಪ್ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು.. ಸದ್ಯ ಸಾಕಷ್ಟು ಕ್ರೇಜ್ ಗಳಿಸಿರುವ ಈ ಮುದ್ದು ಚೆಲುವೆ ಕರ್ನಾಟಕದ ಕ್ರಷ್ ಆಗಿದ್ದಾರೆ..
ಇನ್ನು ಸಂಗೀತಾ ಶೃಂಗೇರಿ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ಇವರ ತಂದೆ ಶಿವ ಕುಮಾರ್ ಕೆ ಭಾರತೀಯ ವಾಯುಪಡೆಯ ಮಾಜಿ ಸೈನಿಕ ಮತ್ತು ತಾಯಿ ಭವಾನಿ ಶಿವ ಕುಮಾರ್ ಗಿಡಮೂಲಿಕೆಗಳ ಆರೋಗ್ಯ ತರಬೇತುದಾರರಾಗಿದ್ದಾರೆ.