ತಂದೆಯ ಅನಾರೋಗ್ಯವೂ ಅಲ್ಲ.. ನಿಧನವೂ ಅಲ್ಲ; ಗೋಲ್ಡ್ ಸುರೇಶ್ ಬಿಗ್ ಬಾಸ್‌ನಿಂದ ಹೊರ ಬಂದಿದ್ದಕ್ಕೆ ಇದೇ ಅಸಲಿ ಕಾರಣ!
Gold Suresh Out From Bigg Boss: ಕನ್ನಡ ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ಕುಟುಂಬದಲ್ಲಿನ ತುರ್ತು ಪರಿಸ್ಥಿತಿಯ ಕಾರಣ ಹೊರ ನಡೆಯಬೇಕೆಂಬ ಪ್ರೋಮೋ ರಿಲೀಸ್ ಆಗಿದೆ.
ಗೋಲ್ಡ್ ಸುರೇಶ್ ಅವರ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದ್ದು, ಬಿಗ್ ಬಾಸ್‌ಗಿಂತ ಅವರ ಮನೆಯವರಿಗೆ ಸುರೇಶ್ ಅವಶ್ಯಕತೆ ಹೆಚ್ಚಾಗಿದೆ.
ಹೀಗಾಗಿ ಸುರೇಶ್ ಈ ಕೂಡಲೇ ತಮ್ಮ ಬಟ್ಟೆಗಳನ್ನೆಲ್ಲ ಪ್ಯಾಕ್ ಮಾಡಿಕೊಂಡು ಮನೆಯಿಂದ ಹೊರ ಬರಬೇಕು ಎಂದು ಬಿಗ್ ಬಾಸ್ ಹೇಳುತ್ತಾರೆ.
ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ಸುರೇಶ್ ಅವರಿಗೆ ಇದು ಆಘಾತ ತಂದಿದೆ. ಬಿಗ್ ಬಾಸ್‌ನ ಉಳಿದ ಕಂಟೆಸ್ಟಂಟ್‌ಗಳು ಸಹ ಗಾಬರಿಯಾಗಿದ್ದಾರೆ.
ಬಿಗ್‌ಬಾಸ್ ಮನೆಯಿಂದ ದಿಢೀರನೆ ಸುರೇಶ್ ಅವರನ್ನು ಹೊರಗೆ ಕರೆಸಿಕೊಂಡ ಕಾರಣವೇನು ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಕೆಲವರು ಅವರ ತಂದೆ ನಿಧನ ಎಂದರೆ, ಮತ್ತೆ ಕೆಲವರು ತಾಯಿಗೆ ಹುಷಾರಿಲ್ಲ ಎನ್ನುತ್ತಿದ್ದಾರೆ.
ಆದರೆ ಈಗ ಎಲ್ಲ ಊಹಾಪೋಹಗಳಿಗೆ ಖುದ್ದು ಗೋಲ್ಡ್ ಸುರೇಶ್ ತಂದೆ ಶಿವಗೌಡ ಫುಲ್ ಸ್ಟಾಪ್ ಇಟ್ಟಿದ್ದಾರೆ. ಖಾಸಗಿ ಚಾನೆಲ್ ಜೊತೆ ಮಾತನಾಡಿದ ಸುರೇಶ್ ತಂದೆ ನನಗೆ ಏನೂ ಆಗಿಲ್ಲ. ಇನ್ನೂ ಬದುಕಿದ್ದೇನೆ. ನಮ್ಮ ಮನೆಯಲ್ಲೂ ಎಲ್ಲರೂ ಕ್ಷೇಮವಾಗಿದ್ದಾರೆ ಎಂದಿದ್ದಾರೆ.
ಬೆಂಗಳೂರಿನ ಮನೆಯಲ್ಲೂ ಯಾವ ರೀತಿಯ ಅಹಿತಕರ ಘಟನೆ ಸಂಭವಿಸಿಲ್ಲ. ನಮಗೂ ಅವನನ್ನು ಹೊರಗೆ ಕರೆಸಿರುವುದು ಶಾಕ್ ಆಗಿದೆ. ಅವನಿಗೆ ಕಾಲು ನೋವಾಗಿತ್ತು. ಬಹುಶಃ ಅದೇ ಕಾರಣಕ್ಕೆ ಹೊರ ಕರೆಸಿರಬಹುದು ಎಂದು ಗೋಲ್ಡ್ ಸುರೇಶ್ ತಂದೆ ಶಿವಗೌಡ ತಿಳಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳನ್ನ ನೋಡಿದರೆ ಅಸಲಿ ವಿಚಾರ ಬೇರೆ ಏನೋ ಇದೆ ಎಂದು ಕೆಲವರು ಹೇಳುತ್ತಿದ್ದಾರೆ. ಇಂದಿನ ಅಂದರೆ ಡಿಸೆಂಬರ್ 16 ರ ಎಪಿಸೋಡ್‌ನಲ್ಲಿ ಈ ಸಂಗತಿ ಪ್ರಸಾರವಾಗಲಿದೆ.