ಗೋಲ್ಡ್ ಸುರೇಶ್ ಪತ್ನಿ ಇವರೇ ನೋಡಿ... ಇವರು ನಡೆಸೋ ಬ್ಯುಸಿನೆಸ್ ಯಾವುದು? ಇವರದ್ದು ಲವ್ ಮ್ಯಾರೇಜ್? ಅರೆಂಜ್ಡ್ ಮ್ಯಾರೇಜ್!!
Gold Suresh wife: ಬಿಗ್ ಬಾಸ್ ಕನ್ನಡ ಸೀಸನ್ 11 ಮನೆಯಿಂದ ಆಚೆ ಬಂದಿರುವ ಗೋಲ್ಡ್ ಸುರೇಶ್ ತಾವು ಹೊರಬರಲು ಬ್ಯುಸಿನೆಸ್‌ನಲ್ಲಾದ ಸಮಸ್ಯೆ ಕಾರಣ ಎಂದಿದ್ದಾರೆ.
ಗೋಲ್ಡ್ ಸುರೇಶ್ ತಮ್ಮ ಮೈಮೇಲೆ ಸುಮಾರು 2 ಕೋಟಿ ಬೆಲೆಬಾಳುವ ಚಿನ್ನಾಭರಣಗಳನ್ನು ಹಾಕಿಕೊಂಡು ಓಡಾಡುತ್ತಾರೆ. ಗೋಲ್ಡ್ ಮ್ಯಾನ್ ಎಂದೇ ಹೆಸರು ಮಾಡಿದ್ದಾರೆ.
ಗೋಲ್ಡ್ ಸುರೇಶ್ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮದವರು. ಈಗ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಗೋಲ್ಡ್ ಸುರೇಶ್ Bharata Led ಫೌಂಡರ್, ಡೈರೆಕ್ಟರ್, ಸಿಇಓ ಆಗಿದ್ದಾರೆ. ಸ್ವಂತ ಕಂಪನಿ ಹೊಂದಿದ್ದಾರೆ.
ಸುರೇಶ್ ಅವರ ಪತ್ನಿ ಬಗ್ಗೆ ಈ ಹಿಂದೆ ಮಾತನಾಡಿದ್ದರು. ಪತ್ನಿ ನನಗಿಂತ ಚೆನ್ನಾಗಿ ಓದಿದ್ದಾರೆ. ನಮ್ಮ ಮನೆಯಲ್ಲಿ ಲವ್ ಮ್ಯಾರೇಜ್‌ಗೆ ಅವಕಾಶ ಇರಲಿಲ್ಲ. ಹಾಗಾಗಿ ಅರೆಂಜ್ ಮ್ಯಾರೇಜ್ ಆಗಿದ್ದೇನೆ ಎಂದಿದ್ದರು.
ನಾನು ಚಿನ್ನ ಧರಿಸಿ ಓಡಾಡೋದು, ದುಬಾರಿ ಕಾರು ಕೊಳ್ಳುವುದು ನನ್ನ ಹೆಂಡತಿಗೆ ಇಷ್ಟವಾಗಲ್ಲ ಎಂದು ಸುರೇಶ್ ಈ ಹಿಂದೊಮ್ಮೆ ಹೇಳಿದ್ದರು. ಹೆಣ್ಣು ಮಗು ಬೇಕು ಎಂದು ಬಯಸಿ ಹರಕೆ ಹೊತ್ತಿದ್ದೆ. ಮಗಳು ಹುಟ್ಟಿದ್ದಾಳೆ ಎಂದಿದ್ದರು ಸುರೇಶ್.
ಗೋಲ್ಡ್ ಸುರೇಶ್ ಬೆಂಗಳೂರಿನಲ್ಲಿ ಕನ್‌ಸ್ಟ್ರಕ್ಷನ್ ಬ್ಯುಸಿನೆಸ್ ಬಿಟ್ಟು ಇಂಟಿರಿಯರ್ ಬ್ಯುಸಿನೆಸ್ ಕೂಡ ನಡೆಸುತ್ತಾರೆ.
ಇಂಟಿರಿಯರ್ ಬ್ಯುಸಿನೆಸ್‌ನ್ನು ಸುರೇಶ್ ಬಿಗ್ ಬಾಸ್‌ನಲ್ಲಿದ್ದಾಗ ಅವರ ಪತ್ನಿಯೇ ನೋಡಿಕೊಳ್ಳುತ್ತಿದ್ದರು. ಇದರಲ್ಲಾದ ಸಮಸ್ಯೆಯಿಂದಲೇ ಅವರು ಬಿಗ್ ಬಾಸ್‌ನಿಂದ ಆಚೆ ಬಂದಿದ್ದಾರೆ.