ಪುಟ್ಟಕ್ಕನ ಮಕ್ಕಳು ಖಡಕ್ ವಿಲನ್.. ಬಿಗ್‌ಬಾಸ್ ಮೊದಲ ಕ್ಯಾಪ್ಟನ್ ಹಂಸ ಅವರ ರಿಯಲ್ ಪತಿ ಕೂಡ ತುಂಬಾ ಫೇಮಸ್! ಮಗ ಎಷ್ಟು ಕ್ಯೂಟ್ ನೋಡಿ!!
ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಹಲವಾರು ಧಾರವಾಹಿಗಳು ಪ್ರಸಾರವಾಗುತ್ತವೆ.. ಅದರಲ್ಲಿ ಅತೀ ಹೆಚ್ಚು ಜನಪ್ರಿಯತೆ ಪಡೆದದ್ದು ಎಂದರೇ ಪುಟ್ಟಕ್ಕನ ಮಕ್ಕಳು..
ಪುಟ್ಟಕ್ಕನ ಮಕ್ಕಳು ಸಿರೀಯಲ್‌ನಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.. ಇವರ ಅದ್ಭುತ ನಟನೆಗೆ ಕಿರುತೆರೆ ಪ್ರೇಕ್ಷಕರು ಫಿದಾ ಆಗಿದ್ದಾರೆ..
ಈ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಅತೀ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ಅದರಲ್ಲಿ ಖಡಕ್ ವಿಲನ್ ರಾಜಿ ಅಲಿಯಾಸ್ ರಾಜೇಶ್ವರಿ ಪಾತ್ರವೂ ಒಂದು..
ಇನ್ನು ಪುಟ್ಟಕ್ಕನ ಮಕ್ಕಳು ರಾಜಿ ಅಲಿಯಾಸ್ ಹಂಸ ಅವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ಈ ರಾಜೇಶ್ವರಿ ಪಾತ್ರದಲ್ಲಿ ನಟಿಸುತ್ತಿರುವ ಪಾತ್ರಧಾರಿಯ ಹೆಸರು ಹಂಸ ನಾರಾಯಣಸ್ವಾಮಿ.. ಇವರು ಬಣ್ಣದ ಲೋಕದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ..
ನಟಿ ಹಂಸ ಅವರ ಪತಿಯ ಹೆಸರು ನಾರಾಯಣಸ್ವಾಮಿ.. ಈ ದಂಪತಿಗೆ ಒಬ್ಬ ಮಗನಿದ್ದಾನೆ.. ಇವನು ಎತ್ತರದಲ್ಲಿ ಅಪ್ಪ ಅಮ್ಮನನ್ನೇ ಮೀರಿಸುತ್ತಿದ್ದಾನೆ..
ವಿಶೇಷವೆಂದರೇ ರಾಜಿ ಅಲಿಯಾಸ್ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರ ರಾಜಾಹುಲಿ ಸಿನಿಮಾದಲ್ಲಿ ಸೈಡ್ ರೋಲ್ ಮಾಡಿದ್ದರು.. ಆ ಸಿನಿಮಾ ಇಂದಿಗೂ ಎವರ್‌ಗ್ರೀನ್..
ನಟಿ ಹಂಸ ಅವರ ಕನ್ನಡ ಸಿನಿರಂಗ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿರುವುದರೊಂದಿಗೆ ಅದ್ಭುತವಾಗಿ ನಟಿಸುವ ಮೂಲಕ ಮನೆಮಾತಾಗಿದ್ದಾರೆ..
ಸದ್ಯ ನಟಿ ಹಂಸ ಬಿಗ್‌ಬಾಸ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ.. ಜೊತೆಗೆ ಮೊದಲ ಕ್ಯಾಪ್ಟನ್ ಆಗಿದ್ದಾರೆ.. ಮೊದಲ ವಾರದಲ್ಲೇ ಮನೆ ಮಂದಿಯ ಮೆಚ್ಚುಗೆ ಗಳಿಸಿ ಕ್ಯಾಪ್ಟನ್ಸಿ ಪಟ್ಟ ಗಳಿಸಿದ್ದಾರೆ..
ಸಿನಿಮಾ, ಧಾರವಾಹಿ, ಈಗ ರಿಯಾಲಿಟಿ ಶೋಗಳ ಮೂಲಕ ನಟಿ ಹಂಸ ಮಿಂಚುತ್ತಿದ್ದಾರೆ.. ಬಿಗ್‌ಬಾಸ್ ಮನೆಯಲ್ಲಿ ಮುಂದಿನ ದಿನಗಳಲ್ಲಿ ಅವರ ಆಟ ಹೇಗಿರುತ್ತದೆ ಎಂಬುದನ್ನು ನೋಡಲು ಎಲ್ಲರೂ ಉತ್ಸುಕರಾಗಿದ್ದಾರೆ.