ಲಾಯರ್ ಜಗದೀಶ್ ಮೇಲೆ ಧನರಾಜ್ ಹಲ್ಲೆಗೆ ಯತ್ನ! ಬಿಗ್ ಬಾಸ್ ಮನೆಯಲ್ಲಿ ನಡೆದೇ ಹೋಯ್ತಾ ಮ್ಯಾನ್ ಹ್ಯಾಂಡಲಿಂಗ್?
ಇಂದಿನ ಬಿಗ್ ಬಾಸ್ ಎಪಿಸೋಡ್‌ನಲ್ಲಿ ನಾಮಿನೇಟ್ ಆದ ಸ್ಪರ್ಧಿಗಳಿಗಾಗಿ ಒಂದು ವಿಶೇಷ ಟಾಸ್ಕ್ ನೀಡಿದ್ದರು. ಈ ಟಾಸ್ಕ್ ಉಸ್ತುವಾರಿಯನ್ನು ಧನರಾಜ್ ಅವರಿಗೆ ನೀಡಿದ್ದರು. ಟಾಸ್ಕ್ ವೇಳೆ ಧನರಾಜ್ ಮತ್ತು ಜಗದೀಶ್ ನಡುವೆ ಮಾತಿನ ಚಕಮಕಿ ಶುರುವಾಗಿದೆ.
ಆಟದ ನಿಯಮಗಳ ವಿಚಾರವಾಗಿ ಶುರುವಾದ ಈ ಜಗಳ ತಾರಕಕ್ಕೇರಿದೆ. ಧನರಾಜ್ ಎಷ್ಟೇ ಸಮಾಧಾನವಾಗಿ ಆಟ ಮುಂದುವರೆಸಲು ಯತ್ನಿಸಿದರೂ ಜಗದೀಶ್ ಮಾತ್ರ ಜಗಳ ಮುಂದುವರೆಸಿದ್ದಾರೆ.
ಈ ವೇಳೆ ಧನರಾಜ್ ಅವರನ್ನು ಕನ್ಫೆಷನ್ ರೂಮ್‌ಗೆ ಬಿಗ್ ಬಾಸ್ ಕರೆಸಿದ್ದಾರೆ. ಧನರಾಜ್ ಗೆ ಸಹಾಯಕರಾಗಿ ಒಬ್ಬರನ್ನು ಪಡೆಯಬಹುದು ಎಂದಿದ್ದಾರೆ. ಆಗ ಧನರಾಜ್ ಅವರು ತ್ರಿವಿಕ್ರಮ್ ಅವರನ್ನು ಆಯ್ಕೆ ಮಾಡಿದ್ದಾರೆ.
ಈ ವೇಳೆ ಧನರಾಜ್ ಅವರು ತ್ರಿವಿಕ್ರಮ್ ಜೊತೆ ಸೇರಿಕೊಂಡು ಮತ್ತೆ ಆಟ ಮುಂದುವರೆಸಲು ಹೋದಾಗ ಜಗದೀಶ್ ಅವರು ಕಿರಿಕ್ ಮಾಡಿದ್ದಾರೆ.
ಮಾತಿಗೆ ಮಾತು ಬೆಳೆಯುತ್ತ ಧನರಾಜ್ ಅವರಿಗೆ ನೀನು ಉಸ್ತುವಾರಿಯಾಗಲು ಅನ್‌ಫಿಟ್ ಅಂದಿದ್ದಾರೆ. ಆಗ ಸಿಟ್ಟಿಗೆದ್ದ ಧನರಾಜ್ ʻಇದೆಲ್ಲ ಹೇಳಲು ನೀವ್ಯಾರುʼ ಎನ್ನುತ್ತ ಜಗದೀಶ್ ಅವರ ಬಳಿ ಹೋಗಿದ್ದಾರೆ.
ಆಗ ಧರ್ಮ ಕೀರ್ತಿರಾಜ್ ಮತ್ತು ತ್ರಿವಿಕ್ರಮ್ ಅಡ್ಡ ಬಂದಿದ್ದು, ಜಗಳವನ್ನು ತಡೆದಿದ್ದಾರೆ. ಈ ಜಗಳದ ಬಳಿಕ ಜಗದೀಶ್ ಅವರು ʻನೀನು ನನ್ನನ್ನು ಹೊಡೆಯಲು ಬಂದೆʼ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರವೇ ಬೆಂಕಿ ಹೊತ್ತಿ ಉರಿಯುತ್ತಿದೆ. ಜಗದೀಶ್ ಜೊತೆ ಇಡೀ ಮನೆಯವರೆಲ್ಲರೂ ಜಗಳವಾಡಿಕೊಂಡಿದ್ದಾರೆ.