ʻಈʼ ವಿಚಾರ ಸಾಬೀತಾಗದಿದ್ದರೆ ಅರ್ಧಕ್ಕೆ ನಿಲ್ಲುತ್ತಾ ಬಿಗ್ ಬಾಸ್ ಕನ್ನಡ ಶೋ? ಸ್ವರ್ಗ ನರಕ ಕ್ಲೋಸ್ ಆಗಲು ಕಾರಣವೇ ಮಹಿಳಾ ಆಯೋಗದ ʻಆʼ ನೋಟಿಸ್!
ಬಿಗ್ ಬಾಸ್ ಕನ್ನಡ ಸೀಸನ್ 11 ರ ಮನೆಯಲ್ಲಿ ಈ ಬಾರಿ ಸ್ವರ್ಗ, ನರಕ ಕಾನ್ಸೆಪ್ಟ್ ಸಿಕ್ಕಾಪಟ್ಟೆ ಹೈಲೈಟ್ ಆಗಿತ್ತು. ಆದರೆ ಎರಡೇ ವಾರಕ್ಕೆ ಸ್ವರ್ಗ - ನರಕ ಕಾನ್ಸೆಪ್ಟ್ ಮುಕ್ತಾಯಗೊಂಡಿದೆ.
ಬಿಗ್ ಬಾಸ್ ಮನೆಯಲ್ಲಿ ಶುಕ್ರವಾರದ ಎಪಿಸೋಡ್‌ನಲ್ಲಿ ಏಕಾಏಕಿ ಸೈರನ್ ಮೊಳಗಿತು. ಸ್ಪರ್ಧಿಗಳು ಗಾಬರಿಗೊಂಡರು.
ಆಗ ಬಿಗ್ ಬಾಸ್ ತಂಡದ ಮುಸುಕುಧಾರಿಗಳು ಕ್ರೇನ್ ಮೂಲಕ ಮನೆಗೆ ಪ್ರವೇಶಿಸಿ ನರಕವನ್ನು ಧ್ವಂಸಗೊಳಿಸಿದರು.
ಬಿಗ್ ಬಾಸ್ ಕನ್ನಡ 11 ಮನೆಯಲ್ಲಿನ ಸ್ವರ್ಗ, ನರಕದ ಕುರಿತಾಗಿ ರಾಜ್ಯ ಮಹಿಳಾ ಆಯೋಗ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಬಂದಿತ್ತ ಎನ್ನಲಾಗಿದೆ.
ನರಕದಲ್ಲಿ ಮಹಿಳೆಯರ ಮೂಲಭೂತ ಸೌಕರ್ಯಗಳಿಗೆ ಧಕ್ಕೆ ಉಂಟಾಗಿದೆ ಎಂದು ಮಹಿಳಾ ಆಯೋಗಕ್ಕೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು ಎನ್ನಲಾಗಿದೆ.
ಈ ಬಗ್ಗೆ ಪರಿಶೀಲನೆ ನಡೆಸುವಂತೆ ರಾಮನಗರದ ಎಸ್‌ಪಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಸೂಚನೆ ಸಹ ನೀಡಿದ್ದರು.
ಇದಾದ ಬೆನ್ನಲ್ಲೇ ಬಿಗ್ ಬಾಸ್ ಮನೆಯೊಳಗೆ ನರಕ ಧ್ವಂಸಗೊಳಿಸಲಾಗಿದೆ. ಎಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಮಹಿಳೆಯರ ಮೂಲಭೂತ ಸೌಕರ್ಯಗಳಿಗೆ ಧಕ್ಕೆ ಉಂಟಾದಲ್ಲಿ ಬಿಗ್ ಬಾಸ್ ಕನ್ನಡ ಶೋ ಅರ್ಧಕ್ಕೆ ನಿಲ್ಲುವ ಭೀತಿ ಎದುರಾಗಿದೆ ಎಂಬ ಟ್ರೋಲ್‌ಗಳು ಹರಿದಾಡುತ್ತಿವೆ.