BBK11: ಅತಿ ಕಡಿಮೆ ಮತ ಪಡೆದ ಈ ಮೂವರಲ್ಲಿ ಮೊದಲ ವಾರ ಮನೆಯಿಂದ ಹೊರ ಹೋಗುವವರು ಯಾರು?

Fri, 04 Oct 2024-12:14 pm,

ಭವ್ಯಾ ಗೌಡ, ಚೈತ್ರ ಕುಂದಾಪುರ, ಗೌತಮಿ ಜಾಧವ್‌, ಹಂಸ, ಲಾಯರ್‌ ಜಗದೀಶ್, ಮಾನಸ, ಮೋಕ್ಷಿತಾ ಪೈ, ಶಿಶಿರ್, ಯಮುನಾ ಈ ವಾರ ನಾಮಿನೇಟ್‌ ಆಗಿದ್ದಾರೆ.

ಬಿಗ್ ಬಾಸ್ ಕನ್ನಡ 11 ರ ಮತದಾನದ ಟ್ರೆಂಡ್‌ಗಳ ಪ್ರಕಾರ ಯಮುನಾ ಶ್ರೀನಿಧಿ, ಹಂಸ ಪ್ರತಾಪ್ ಮತ್ತು ಮಾನಸ ಸಂತೋಷ್‌ ಕಡಿಮೆ ಮತಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. 

ಬಿಗ್ ಬಾಸ್ ಕನ್ನಡ ಸೀಸನ್ 11 ಎಲಿಮಿನೇಷನ್‌ ಪ್ರಕ್ರಿಯೆಯಲ್ಲಿ ಯಮುನಾ ಮತ್ತು ಹಂಸ ಕೊನೆಯವರೆಗೆ ಸೇಫ್‌ ಆಗಿದೆ ಉಳಿಯಲಿದ್ದಾರಂತೆ. 

ಚೈತ್ರಾ, ಭವ್ಯ ಮತ್ತು ಗೌತಮಿ ಅತಿ ಹೆಚ್ಚು ಮತಗಳನ್ನು ಈ ವಾರ ಪಡೆದಿದ್ದಾರೆ ಎನ್ನಲಾಗಿದೆ. ಯಮುನಾ ಮತ್ತು ಹಂಸ ಪ್ರೇಕ್ಷಕರಿಂದ ಅತಿ ಕಡಿಮೆ ಮತಗಳನ್ನು ಗಳಿಸಿದ್ದಾರೆ ಎನ್ನಲಾಗಿದೆ.

ಯಮುನಾ ಮತ್ತು ಹಂಸ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲರಾಗಿದ್ದು, ಇಬ್ಬರಲ್ಲಿ ಒಬ್ಬರು ಈ ವಾರ ಮನೆಯಿಂದ ಆಚೆ ಬರೋದು ಪಕ್ಕಾ ಎನ್ನಲಾಗಿದೆ. 

ಕೆಲವು ವರದಿಗಳ ಪ್ರಕಾರ, ಈ ವಾರ ನಟಿ ಹಂಸ ಪ್ರತಾಪ್‌ ಮನೆಯಿಂದ ಹೊರ ಹೋಗುವ ಚಾನ್ಸ್‌ ಹೆಚ್ಚಾಗಿದೆ ಎನ್ನಲಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link