ಬಿಗ್ ಬಾಸ್ ಕನ್ನಡ ಮನೆ ಧ್ವಂಸ.. ಶೋ ರದ್ದಾಗೋದು ಪಕ್ಕಾ? ರಾತ್ರೋ ರಾತ್ರಿ ಕ್ರೇನ್ ಮೂಲಕ ಮನೆಗೆ ನುಗ್ಗಿದ ದಾಂಡಿಗರು !!
Bigg Boss Kannada Show might be cancel: ಬಿಗ್ ಬಾಸ್ ಕನ್ನಡ ಸೀಸನ್ 11 ಮನೆಗೆ ರಾತ್ರಿ ಹೊತ್ತಲ್ಲಿ ಕ್ರೇನ್ ಮೂಲಕ ನುಗ್ಗಿದ ದಾಂಡಿಗರು ಮನೆಯನ್ನೆಲ್ಲ ಪೀಸ್ ಪೀಸ್ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಎರಡನೇ ವಾರ ಪೂರ್ಣಗೊಳಿಸಿದ್ದು, ಇದೀಗ ಶಾಕಿಂಗ್ ಬೆಳವಣಿಗೆಯೊಂದು ನಡೆದಿದೆ.
ಬಿಗ್ ಬಾಸ್ ಎರಡನೇ ವಾರ ಯಾರೂ ಮನೆಯಿಂದ ಹೊರ ಹೋಗುತ್ತಿಲ್ಲ. ನಿನ್ನೆಯ ಎಪಿಸೋಡ್‌ನಲ್ಲಿ ಈ ವಾರ ವೋಟಿಂಗ್ ಲೈನ್ ತೆರೆದಿಲ್ಲ ಎಂಬ ಪ್ರಕಟಣೆಯನ್ನು ತೋರಿಸಲಾಗಿದೆ.
ಸ್ಪರ್ಧಿಗಳ ಮಧ್ಯೆ ಸಿಕ್ಕಾಪಟ್ಟೆ ಕಾಂಪಿಟೇಷನ್ ಶುರುವಾಗಿದ್ದು, ಈ ನಡುವೆ ರಾತ್ರೋ ರಾತ್ರಿ ಬಿಗ್ ಬಾಸ್ ಮನೆಯನ್ನೇ ಧ್ವಂಸಗೊಳಿಸಲಾದ ವಿಡಿಯೋ ಬಿಡುಗಡೆ ಮಾಡಲಾಗಿದೆ.
ಬಿಗ್ ಬಾಸ್ ಕನ್ನಡ 11 ರ ಮನೆಗೆ ರಾತ್ರಿ ವೇಳೆ ಕ್ರೇನ್ ಮೂಲಕ ಬಂದ ಮುಸುಕು ಧಾರಿಗಳು ನರಕವನ್ನು ಛಿದ್ರಗೊಳಿಸಿದ್ದಾರೆ.
ನರಕದ ಗೇಟ್, ಚೇರ್, ಹಾಸಿಗೆ ಹೀಗೆ ಎಲ್ಲ ವಸ್ತುಗಳನ್ನು ಪೀಸ್ ಪೀಸ್ ಮಾಡಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳು ಅರೆಕ್ಷಣ ಏನಾಗುತ್ತಿದೆ ಎಂದು ತೋಚದೆ ದಂಗಾಗಿ ನಿಂತಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾದ ಮೊದಲ ದಿನದಿಂದಲೂ ಸಾಕಷ್ಟು ಪರ ವಿರೋಧ ಚರ್ಚೆಗಳಿಗೆ ಕಾರಣವಾಗಿತ್ತು. ಈ ನಡುವೆ ಕೆಲವರು ಬಿಗ್ ಬಾಸ್ ಮನೆಯ ನರಕದ ಕಾನ್ಸೆಪ್ಟ್ ಜೈಲಿಗೆ ಹೋಲು ಕಾರಣ ಇದನ್ನು ವಿರೋಧಿಸಿದ್ದರು.
ಈ ಬಾರಿ ಬಿಗ್ ಬಾಸ್ ಅರ್ಧಕ್ಕೆ ಬಿಂತು ಹೋಗುವ ಭೀತಿ ಇದೆ ಎಂಬ ಅನೇಕ ಟ್ರೋಲ್‌ಗಳು ಶುರುವಾಗಿದ್ದವು. ಈ ಎಲ್ಲ ಬೆಳವಣಿಗೆಗಳ ನಡುವೆ ಇದೀಗ ನರಕದ ಪಾರ್ಟ್ ಸಂಪೂರ್ಣ ಛಿದ್ರಗೊಂಡಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರ ಹೊಸ ಪ್ರೋಮೋದಲ್ಲಿ ಕಲರ್ಸ್ ಕನ್ನಡ ವಾಹಿನಿ ಇದನ್ನು ತೋರಿಸಿದೆ. ಇದನ್ನು ಕಂಡ ನೆಟ್ಟಿಗರು ಶಾಕ್ ಆಗಿದ್ದಾರೆ.
ಕ್ರೇನ್ ಮೂಲಕ ಬಿಗ್ ಬಾಸ್ ಮನೆ ಒಳಗೆ ದಾಂಡಿಗರು ಎಂಟ್ರಿ ಕೊಡುತ್ತಾರೆ. ನರಕದ ವಸ್ತುಗಳನ್ನೆಲ್ಲ ಪೀಸ್ ಪೀಸ್ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಾಗಂತ ಶೋ ರದ್ದಾಗಬಹುದು ಎಂದು ಭಯ ಪಡುವ ಅಗತ್ಯವೇನೂ ಇಲ್ಲ.
ಹೌದು ಸ್ವಾಮಿ, ನರಕ ಹಾಗೂ ಸ್ವರ್ಗದ ಕಾನ್ಸೆಪ್ಟ್ ಇಲ್ಲಿಗೆ ಮುಗಿದಿದೆ. ಮುಂದಿನ ದಿನಗಳಲ್ಲಿ ಬಿಗ್ ಬಾಸ್ ನಲ್ಲಿ ಒಂದೇ ಮನೆ ಇರಲಿದ್ದು, ಎಲ್ಲರೂ ಇನ್ನು ಒಟ್ಟಾಗಿ ವಾಸಿಸಲಿದ್ದಾರೆ ಎನ್ನಲಾಗಿದೆ.