ಬಿಗ್‌ಬಾಸ್ ನಿಂದ ಹೊರ ಬರುತ್ತಲೇ ಗ್ಲಾಮರ್ ಡೋಸ್ ನೀಡಿದ ಸ್ಪರ್ಧಿ..! ಇದೇಲ್ಲಾ ಬೇಕಿತ್ತಾ ಎಂದ ಫ್ಯಾನ್ಸ್‌...

Sat, 12 Oct 2024-3:44 pm,

ಬಿಗ್ ಬಾಸ್ ತೆಲುಗು ಎಂಟನೇ ಸೀಸನ್ ಪ್ರವೇಶಿಸಿದ 14 ಸ್ಪರ್ಧಿಗಳಲ್ಲಿ ಧೀ ಖ್ಯಾತಿಯ ನೈನಿಕಾ ಕೂಡ ಒಬ್ಬರು.   

ಆರಂಭದಲ್ಲಿ ನೈನಿಕಾ ತುಂಬಾ ಶಕ್ತಿಯುತ ಮತ್ತು ಸಕಾರಾತ್ಮಕವಾಗಿ ಆಟವಾಡಿದರು.. ಈ ಪ್ರಸಿದ್ಧ ನೃತ್ಯಗಾರ್ತಿ ಇದೀಗ ದೊಡ್ಮನೆಯಿಂದ ಎಲಿಮಿನೆಟ್‌ ಆಗಿದ್ದಾಳೆ..  

ಬಿಗ್‌ ಹೌಸ್‌ನಲ್ಲಿ ತನ್ನ ಮಾತಿನ ಮೂಲಕ ಪ್ರೇಕ್ಷಕರ ಮನ ಗೆದ್ದ ನೈನಿಕಾ, ದೊಡ್ಮನೆಯ ನಾಯಕಿಯಾಗಲು ಆಡಿದ ಆಟ ಅಭಿಮಾನಿಗಳನ್ನು ಆಕರ್ಷಿಸಿತು.  

ಬಿಗ್ ಬಾಸ್ ಮನೆಯಲ್ಲಿ ಹುಡುಗರಿಗೆ ಕಠಿಣ ಸ್ಪರ್ಧೆ ನೀಡಿದ ಏಕೈಕ ಮಹಿಳಾ ಸ್ಪರ್ಧಿಯಾಗಿ ಕಾಣಿಸಿಕೊಂಡ ನೈನಿಕಾ ಕ್ರಮೇಣ ಸಂಪೂರ್ಣ ಡಲ್ ಆದರು.  

ನೈನಿಕಾ ಐದನೇ ವಾರದಲ್ಲಿ ಮನೆಯಿಂದ ಎಲಿಮಿನೇಟ್ ಆದರು. ಏಕೆಂದರೆ ಈ ಸುಂದರಿ, ಸ್ನೇಹಿತರೊಂದಿಗೆ ಸುತ್ತುವುದನ್ನು ಹೊರತುಪಡಿಸಿ ಟಾಸ್ಕ್ ಮತ್ತು ಆಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ.  

ಐದನೇ ವಾರದ ನಾಮಿನೇಷನ್‌ನಲ್ಲಿ ನಿಂತಿದ್ದ ನೈನಿಕಾ ಕಡಿಮೆ ಮತಗಳನ್ನು ಪಡೆದರು. ಇದರಿಂದಾಗಿ ಬಿಗ್ ಬಾಸ್ ಮನೆಯಿಂದ ಹೊರ ಬರಬೇಕಾಯಿತು.  

ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ನೈನಿಕಾ ತಮ್ಮ ಗ್ಲಾಮರ್ ಡೋಸ್ ಹೆಚ್ಚಿಸಿಕೊಂಡರು.   

ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಈಕೆ ಹಂಚಿಕೊಂಡಿರುವ ಫೋಟೋಗಳು ಸಖತ್‌ ವೈರಲ್‌ ಆಗುತ್ತಿವೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link