ಬಿಗ್ ಬಾಸ್ ಮನೆಯಿಂದ ಕೋರ್ಟ್‌ಗೆ ಬಂದಿದ್ದೇಕೆ ಚೈತ್ರಾ ಕುಂದಾಪುರ? ಇವರ ಮೇಲಿರುವ ಆರೋಪದ ಸಂಪೂರ್ಣ ವಿವರ ಇಲ್ಲಿದೆ
Chaitra Kundapura: ಬಿಗ್ ಬಾಸ್ ಸ್ವರ್ಧಿ ಚೈತ್ರಾ ಕುಂದಾಪುರ ಇಂದು ಕೋರ್ಟ್ ನ ಕಟಕಟೆಯಲ್ಲಿ ಹಾಜರಾಗಿದ್ದರು. ವಂಚನೆ ಆರೋಪಕ್ಕೆ ಸಂಬಂಧಿಸದಂತೆ ಸಮನ್ಸ್ ಜಾರಿಯಾಗಿದ್ದ ಹಿನ್ನೆಲೆ ಬಿಗ್ ಬಾಸ್ ಮನೆಯಿಂದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಚೈತ್ರಾ ಕುಂದಾಪುರ ಮೇಲೆ ವಂಚನೆ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಿಂದ ಸಮನ್ಸ್ ಜಾರಿಯಾದ ಹಿನ್ನೆಲೆ ನ್ಯಾಯಾಧೀಶರ ಮುಂದೆ ಚೈತ್ರಾ ಕುಂದಾಪುರ ಹಾಜರಾಗಿದ್ದರು.
2023 ರಲ್ಲಿ ಸಿಸಿಬಿಯಿಂದ ಚೈತ್ರಾ ಕುಂದಾಪುರ ಅವರನ್ನು ಇದೇ ವಂಚನೆ ಕೇಸ್‌ನಲ್ಲಿ ಅರೆಸ್ಟ್ ಮಾಡಲಾಗಿತ್ತು. ಇದೀಗ ಅದೇ ಪ್ರಕರಣದ ವಾರೆಂಟ್ ರೀ ಕಾಲ್ ಗಾಗಿ ಬಿಗ್ ಬಾಸ್ ಮನೆಯಿಂದ ಕೋರ್ಟ್‌ಗೆ ಬಂದಿದ್ದರು.
ಕುಂದಾಪುರದ ಉದ್ಯಮಿ ಗೋವಿಂದಬಾಬು ಪೂಜಾರಿಗೆ ವಂಚಿಸಿದ್ದ ಆರೋಪ ಚೈತ್ರಾ ಹಾಗೂ ಗ್ಯಾಂಗ್ ಮೇಲೆ ಇದೆ. ಟಿಕೆಟ್ ಕೊಡಿಸೋದಾಗಿ ಚೈತ್ರಾ ಕುಂದಾಪುರ ಅವರು ಉದ್ಯಮಿ ಗೋವಿಂದಬಾಬು ಅವರಿಗೆ ವಂಚನೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಇದಕ್ಕಾಗಿ ಐದು ಕೋಟಿ ರೂಪಾಯಿ ಹಣ ಸಹ ಪಡೆದಿದ್ದರು ಎನ್ನಲಾಗಿದೆ. ಚೈತ್ರಾ, ಶ್ರೀಕಾಂತ್ ಸೇರಿ ಮೂವರು ಆರೋಪಿಗಳು ಇಂದು ಕೋರ್ಟ್ ಗೆ ಹಾಜರಾಗಿದ್ದರು.
ಚೈತ್ರಾ ಬಿಗ್ ಬಾಸ್ ಕನ್ನಡ ಸೀಸನ್ 11 ರ ಮನೆಯಿಂದ ನೇರವಾಗಿ ನ್ಯಾಯಾಲಯಕ್ಕೆ ಬಂದಿದ್ದಾರೆ. ವಾರಂಟ್ ರೀಕಾಲ್ ಇದ್ದ ಕಾರಣ ಕೋರ್ಟ್ ಎದುರು ಹಾಜರಾಗಿದ್ದರು.
ಚೈತ್ರಾ ಕುಂದಾಪುರ ಮತ್ತೆ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ. ಕೋರ್ಟ್ ಮುಂದಿನ ವರ್ಷ ಜನವರಿ 13ಕ್ಕೆ ವಿಚಾರಣೆ ಮುಂದೂಡಿದೆ.