ಬಿಗ್ ಬಾಸ್ ಫಿನಾಲೆಗೆ ಮೂರೇ ವಾರ ಬಾಕಿ... ಮೊದಲ ಫೈನಲಿಸ್ಟ್ ಇವರೇ! ವಿನ್ನರ್ ಯಾರೆಂಬ ಸುಳಿವು ಕೊಟ್ಟ ಕಿಚ್ಚ ಸುದೀಪ!!
Bigg Boss Kannada 11 Winner: ಬಿಗ್ ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ಈಗಾಗಲೇ 97 ದಿನಗಳಾಗಿವೆ. ಮನೆಯಲ್ಲಿ 9 ಮಂದಿ ಸ್ಪರ್ಧಿಗಳಿದ್ದಾರೆ. ಈ ವಾರ ಎಲಿಮಿನೇಷನ್ ಕೂಡ ನಡೆಯುವದಿಲ್ಲ. ಹೀಗಿರುವಾಗ ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಫಿನಾಲೆ ಬಗ್ಗೆ ಮಾತನಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರ ಫಿನಾಲೆಗೆ ಇನ್ನು ಮೂರೇ ವಾರಗಳು ಬಾಕಿ ಉಳಿದಿವೆ ಎಂದು ಕಿಚ್ಚ ಸುದೀಪ್ ವೀಕೆಂಡ್ ಎಪಿಸೋಡ್‌ನಲ್ಲಿ ತಿಳಿಸಿದ್ದಾರೆ. ಇನ್ನೂ 4 ಜನ ಸ್ಪರ್ಧಿಗಳು ಮನೆಯಿಂದ ಹೊರಬರಬೇಕಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರ ಕೊನೆಯ ವಾರಗಳಲ್ಲಿ ಸ್ಪರ್ಧಿಗಳು ಹೇಗೆ ಆಡಬೇಕೆಂಬ ಸ್ಟಾಟರ್ಜಿ ಶುರುವಾಗಿದೆ. ಕಿಚ್ಚ ಸುದೀಪ್ ಸಹ ಕೆಲವು ಕಿವಿ ಮಾತುಗಳನ್ನು ಹೇಳಿದ್ದಾರೆ.
ಸುದೀಪ್ ಈ ವೇಳೆ ಮೊದಲ ಫೈನಲಿಸ್ಟ್ ಯಾರಾಗಬಹುದು ಮತ್ತು ವಿನ್ನರ್ ಸುಳಿವು ನೀಡಿದಂತಿತ್ತು. ಇನ್ನೂ ಮೂರೇ ವಾರ ಉಳಿದಿರುವ ಕಾರಣ ಮುಂದಿನ ವಾರ ಮನೆಯ ಕ್ಯಾಪ್ಟನ್ ಆಗುವ ಸ್ಪರ್ಧಿ ನೇರವಾಗಿ ಫಿನಾಲೆಗೆ ಎಂಟ್ರಿ ಪಡೆಯಬಹುದು ಎನ್ನಲಾಗ್ತಿದೆ.
ಕ್ಯಾಪ್ಟನ್ ಆದವರು ನಾಮಿನೇಷನ್‌ನಿಂದ ಬಚಾವ್ ಆಗಲು ಇಮ್ಯುನಿಟಿ ಪಡೆಯುತ್ತಾರೆ. ಈ ಇಮ್ಯುನಿಟಿಯೇ ಮುಂದಿನ ವಾರ ಮನೆಯ ಕ್ಯಾಪ್ಟನ್ ಆಗುವವರನ್ನು ಫಿನಾಲೆಗೆ ಕೊಂಡೊಯ್ಯಬಹುದು.
ಇನ್ನೊಂದು ರೀತಿಯಲ್ಲಿ ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿ ಅದರಲ್ಲಿ ಗೆದ್ದವರನ್ನು ಫಿನಾಲೆ ಪ್ರವೇಶಿಸಿದ ಮೊದಲ ಕಂಟೆಸ್ಟಂಟ್ ಎಂದು ಸಹ ಘೋಷಿಸಬಹುದಾಗಿದೆ.
ಇದಲ್ಲದೇ, ಬಿಗ್ ಬಾಸ್ ಕನ್ನಡ ಸೀಸನ್ 11 ರ ವಿನ್ನರ್ ಬಗ್ಗೆ ಚರ್ಚೆ ಶುರುವಾಗಿದೆ. ಹನಮಂತು, ಉಗ್ರಂ ಮಂಜು, ತ್ರಿವಿಕ್ರಮ್, ರಜತ್ ಈ ನಾಲ್ವರ ಹೆಸರುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ನಿನ್ನೆ ಸುದೀಪ್ ಕೂಡ ವಿನ್ನರ್ ಯಾರಾಗಬಹುದೆಂದು ಸುಳಿವು ನೀಡಿದ್ದಾರೆ. ಇಷ್ಟು ದಿನಗಳವರೆಗಿನ ತಪ್ಪನ್ನು ಸರಿಪಡಿಸಿಕೊಂಡು, ಕೇವಲ ತನಗಾಗಿ ತನ್ನ ಆಟ ಆಡುವ ಸ್ಪರ್ಧಿಗೆ ಗೆಲವು ಹತ್ತಿರವಾಗಲಿದೆ. ಇದನ್ನೇ ಸುದೀಪ್ ಸಹ ತಮ್ಮದೇ ರೀತಿಯಲ್ಲಿ ಸ್ಪರ್ಧಿಗಳಿಗೆ ತಿಳಿಸಿದ್ದಾರೆ.
ಕೆಲವು ಬಿಗ್ ಬಾಸ್ ವೀಕ್ಷಕರ ಲೆಕ್ಕಾಚಾರದ ಪ್ರಕಾರ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಹನಮಂತು, ಉಗ್ರಂ ಮಂಜು, ತ್ರಿವಿಕ್ರಮ್, ರಜತ್ ಮತ್ತು ಚೈತ್ರಾ ಕುಂದಾಪುರ ಫಿನಾಲೆಗೆ ತಲುಪುತ್ತಾರೆ ಎನ್ನಲಾಗುತ್ತಿದೆ.
ಉಗ್ರಂ ಮಂಜು, ಹನಮಂತು, ತ್ರಿವಿಕ್ರಮ್, ರಜತ್ ಮತ್ತು ಚೈತ್ರಾ ಕುಂದಾಪುರ ಇವರಲ್ಲಿ ಹನಮಂತು ಮತ್ತು ತ್ರಿವಿಕ್ರಮ್ ಟಾಪ್ 2 ಕಂಟೆಸ್ಟಂಟ್‌ಗಳಾಗಬಹುದು. ಇವರಲ್ಲಿ ತ್ರಿವಿಕ್ರಮ್ ವಿನ್ನರ್ ಆಗಬಹುದು ಎನ್ನಲಾಗುತ್ತಿದೆ. ಆದರೆ, ಬಿಗ್ ಬಾಸ್ ಗ್ರಾಂಡ್ ಫಿನಾಲೆ ಬಳಿಕವಷ್ಟೇ ಸತ್ಯ ಸಾಬೀತಾಗಲಿದೆ.