ಬಿಗ್‌ಬಾಸ್‌ ಮನೆ ಕಿಚ್ಚು ಹೆಚ್ಚಿಸಿದ ರಜತ್‌ ಕಿಶನ್‌ ಒಂದು ವಾರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Fri, 13 Dec 2024-1:43 pm,

 ದರ್ಶನ್‌ ಅವರ ಅಪ್ಪಟ ಅಭಿಮಾನಿಯಾಗಿರುವ ರಜತ್‌ ಕಿಶನ್‌ ಬಿಗ್‌ಬಾಸ್‌ ಮನೆಯಲ್ಲಿ ಕಾವು ಹೆಚ್ಚಿಸಿದ್ದಾರೆ.. ದೊಡ್ಮನೆಯಲ್ಲಿ 50 ದಿನ ಕಳೆದಿರುವ ಸ್ಪರ್ಧಿಗಳು ಅವರನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.. ರಜತ್‌ ಅವರ ಖಡಕ್‌ ಆಟಕ್ಕೆ ತ್ರಿವಿಕ್ರಮ್‌ ಹಾಗೂ ಉಗ್ರಂ ಮಂಜು ಪೈಪೋಟಿ ನೀಡುತ್ತಿದ್ದಾರೆ..   

ದೊಡ್ಮನೆಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ರಜತ್‌ ಕಿರುತೆರೆ ಪ್ರೇಕ್ಷಕರ ಕಣ್ಣಿಗೆ ಬಿದ್ದದ್ದಾರೆ. ಬಿಗ್‌ಬಾಸ್‌ ಮನೆಯಿಂದ ಲಾಯರ್‌ ಜಗದೀಶ್‌ ಹೊರಬಂದ ಮೇಲೆ ಹನುಮಂತ ಅವರ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಮನೆಯೊಳಗೆ ಹೋಗಿದ್ದಾರೆ..   

ಇದರ ಬಳಿಕ ಶೋಭಾ ಶೆಟ್ಟಿ-ರಜತ್‌ ಎಂಟ್ರಿ ಕೊಟ್ಟು ಬಿಗ್‌ಬಾಸ್‌ ಮನೆಯಲ್ಲಿ ಧೂಳೆಬ್ಬಿಸಿದ್ದರು. ಸದ್ಯ ದೊಡ್ಮನೆಯಲ್ಲಿ ಬಿರುಗಾಳಿ ಎಬ್ಬಿಸಿರುವ ರಜತ್‌ ಒಂದು ವಾರಕ್ಕೆ ಪಡೆಯುವ ಸಂಭಾವನೆ ಎಷ್ಟು ಎನ್ನುವುದರ ಮಾಹಿತಿ ಹೊರಬಿದ್ದಿದೆ..  

ಮನೆಗೆ ಕಾಲಿಟ್ಟ ಒಂದೇರಡೇ ದಿನದಲ್ಲಿ ರಜತ್‌ ಹಾಗೂ ಗೋಲ್ಡ್‌ ಸುರೇಶ್‌ ಮದ್ಯೆ ಜಗಳ ನಡೆದಿತ್ತು.. ರಜತ್‌ ನಡುವಳಿಕೆಗೆ ಸುರೇಶ್‌ ಬೇಸೋತ್ತು ಹೋಗಿದ್ದರು.. ಇದಲ್ಲದೇ ಇವರ ಪದ ಬಳಕೆಯನ್ನು ಮೋಕ್ಷಿತಾ, ಹನುಮಂತ, ಶೋಭಾ ಶೆಟ್ಟಿ ತೀತ್ರವಾಗಿ ವಿರೋಧಿಸಿದ್ದರು.. ಹೀಗೆ ಮೊದಲ ವಾರದಿಂದಲೂ ರಜತ್‌ ಬಿಗ್‌ಬಾಸ್‌ ಮನೆಯಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಗಲಾಟೆ ಸೃಷ್ಟಿ ಕಾವು ಹೆಚ್ಚಿಸುತ್ತಿದ್ದಾರೆ..   

ಇದೀಗ ಬಂದಿರುವ ಮಾಹಿತಿಯ ಪ್ರಕಾರ ಧನರಾಜ್‌ ಅವರ ಮೇಲೆ ಕೈ ಮಾಡಿ ಬಿಗ್‌ಬಾಸ್‌ ಮನೆಯಿಂದ ಹೊರ ಹೋದರು ಎನ್ನಲಾದ ರಜತ್‌ ಒಂದು ವಾರಕ್ಕೆ  90 ರಿಂದ 1 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ..   

ಕೆಲವು ವರದಿಗಳ ಪ್ರಕಾರ ರಜತ್‌ ಅವರನ್ನು ಬಿಗ್‌ಬಾಸ್‌ ಮನೆಯೊಳಗೆ ಕಾಲಿಡಲು 1.20  ಸಂಭಾವನೆ ಕೇಳೀದ್ದರಂತೆ.. ಆದರೆ ಟೀಂ ಅವರೊಂದಿಗೆ ಮಾತನಾಡಿ 80 ಸಾವಿರ ಆಫರ್‌ ನೀಡಿತ್ತು ಎನ್ನಲಾಗಿದೆ.. ಬಳಿಕ ಬಹುದಿನಗಳ ಕಾಲ ಚರ್ಚೆ ಮಾಡಿ ಕೊನೆಗೆ ಈ ಮೇಲಿನ ಹಣಕ್ಕೆ ರಜತ್‌ ಬಿಗ್‌ಬಾಸ್‌ ಮನೆಗೆ ಬರಲು ಗ್ರೀನ್‌ ಸಿಗ್ನಲ್‌ ನೀಡಿದ್ದರಂತೆ.. ಆದರೆ ಈ ಬಗ್ಗೆ ಯಾವುದೇ ಅಧೀಕೃತ ಮಾಹಿತಿಗಳು ಅವರ ಕುಟುಂಬ ಅಥವಾ ಕಲರ್ಸ್‌ ಕನ್ನಡ ವಾಹಿನಿಂದ ಬಂದಿಲ್ಲ..   

ಸದ್ಯ ರಜತ್‌ ಬಿಗ್‌ಬಾಸ್‌ ಮನೆಯಲ್ಲಿ ಹಲಚಲ್‌ ಎಬ್ಬಿಸಿ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.. ಇವರ ಖಡಕ್‌ ಆಟಕ್ಕೆ ಮನೆಮಂದಿ ಸುಸ್ತಾಗಿ ಹೋಗಿದ್ದಲ್ಲದೇ.. ಕೆಲವರು ಅವರ ಪದ ಬಳಕೆಯಿಂದ ಕೆಂಡಾಮಂಡಲವಾಗಿದ್ದಾರೆ.. ಮುಂದಿನ ದಿನಗಳಲ್ಲಿ ರಜತ್‌ ಇನ್ನೂ ಬಿಗ್‌ಬಾಸ್‌ ಮನೆಯಲ್ಲಿ ರಜತ್‌ ಹೇಗೆ ಆಟ ಆಡುತ್ತಾರೆ ಎನ್ನುವುದನ್ನು ಕಾದು ನೋಡಬೇಕು..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link