Bigg Boss Elimination: ಯಾರೂ ಊಹಿಸದ ಸ್ಪರ್ಧಿಯೇ ಎಲಿಮಿನೇಟ್.. ಈ ವಾರ ಮನೆಯಿಂದ ಹೊರಬರೋದು ಇವರೇ!?
ಬಿಗ್ ಬಾಸ್ ಫಿನಾಲೆ ವೀಕ್ ಹತ್ತಿರ ಬರುತ್ತಿದೆ. ಈ ಬಾರಿ ಯಾರು ವಿನ್ನರ್ ಎಂಬ ಕುತೂಹಲ ಹೆಚ್ಚುತ್ತಿದೆ. ಈ ವಾರ ಪ್ರಮುಖ ಐವರು ನಾಮಿನೇಟ್ ಆಗಿದ್ದು, ಮನೆಯಿಂದ ಯಾರು ಹೊರ ಹೋಗುತ್ತಾರೆ ಎಂಬ ಕ್ಯೂರಿಯಾಸಿಟಿ ಹೆಚ್ಚಾಗಿದೆ.
ಮೈಕಲ್ ಅಜಯ್, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಈ ವಾರ ನಾಮಿನೇಟ್ ಆಗಿದ್ದಾರೆ. ಈ ಪೈಕಿ ಒಬ್ಬರು ಈ ವೀಕೆಂಡ್‌ನಲ್ಲಿ ಮನೆಗೆ ಹೋಗಲಿದ್ದಾರೆ.
ಎಲ್ಲರೂ ಘಟಾನುಘಟಿ ಸ್ಪರ್ಧಿಗಳೇ ಆಗಿದ್ದಾರೆ. ಈ ಮಧ್ಯೆ ಮನೆಯಿಂದ ಹೊರ ಹೋಗುವ ಸ್ಪರ್ಧಿ ಯಾರೆಂಬ ಬಗ್ಗೆ ಚರ್ಚೆ ಶುರುವಾಗಿದೆ.
ಬಿಗ್ ಬಾಸ್ ವೀಕ್ಷಕರ ಪ್ರಕಾರ, ಈ ವಾರ ಕೊನೆಯಲ್ಲಿ ಮೈಕಲ್ ಅಜಯ್ ಅಥವಾ ವರ್ತೂರು ಸಂತೋಷ್ ಮನೆಯಿಂದ ಎಲಿಮಿನೇಟ್ ಆಗಬಹುದೆಂದು ಹೇಳುತ್ತಿದ್ದಾರೆ.
ಆದರೆ ಡ್ರೋನ್ ಪ್ರತಾಪ್ ಆರೋಗ್ಯ ಸರಿಯಿಲ್ಲದ ಕಾರಣ ಅವರು ಈ ಬಾರಿ ಮನೆಗೆ ಹೋಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.