BBK Elimination: ಬಿಗ್ ಬಾಸ್ ನಿಂದ ಈ ವೀಕ್ ಹೊರ ಬರೋದು ಸಿಕ್ಕಾಪಟ್ಟೆ ಫೈಟ್ ಕೊಟ್ಟ ಈ ಸ್ಟ್ರಾಂಗ್ ಕಂಟೆಸ್ಟಂಟ್!?
ಬಿಗ್ ಬಾಸ್ ಮನೆಯಲ್ಲಿ ಸದ್ಯ ಏಳು ಜನರು ಉಳಿದುಕೊಂಡಿದ್ದಾರೆ. ಸಂಗೀತಾ, ತುಕಾಲಿ ಸಂತು, ವರ್ತೂರು ಸಂತೋಷ, ವಿನಯ್, ಕಾರ್ತಿಕ್, ಡ್ರೋನ್ ಪ್ರತಾಪ್ ಮತ್ತು ನಮ್ರತಾ ಮನೆಯಲ್ಲಿದ್ದಾರೆ.
ಸಂಗೀತಾ ಶೃಂಗೇರಿ ನೇರವಾಗಿ ಫಿನಾಲೆಗೆ ಆಯ್ಕೆಯಾಗಿದ್ದಾರೆ. ಅವರ ಜೊತೆ ತುಕಾಲಿ ಸಂತು ಅವರು ನಾಮಿನೇಷನ್ ನಿಂದ ತಪ್ಪಿಸಿಕೊಂಡಿದ್ದಾರೆ.
ಕಾರ್ತಿಕ್, ಡ್ರೋನ್ ಪ್ರತಾಪ್, ವರ್ತೂರು ಸಂತೋಷ, ವಿನಯ್, ನಮ್ರತಾ ನಾಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಫಿನಾಲೆ ವೀಕ್ ಗೆ 5 ಜನರು ಮಾತ್ರ ಹೋಗುವ ಕಾರಣ ಇವರಲ್ಲಿ ಇಬ್ಬರು ಎಲಿಮಿನೇಟ್ ಆಗಬೇಕಿದೆ.
ನಾಮಿನೇಟ್ ಆಗಿರುವ ಸ್ಪರ್ಧಿಗಳ ಪೈಕಿ ವಿನಯ್, ಕಾರ್ತಿಕ್ ಹಾಗೂ ಡ್ರೋನ್ ಪ್ರತಾಪ್ ಸ್ಟ್ರಾಂಗ್ ಕಂಟೆಸ್ಟೆಂಟ್ ಗಳು ಎಂದೇ ಬಿಗ್ ಬಾಸ್ ವೀಕ್ಷಕರು ಹೇಳುತ್ತಿದ್ದು, ಇವರು ಫಿನಾಲೆ ತಲುಪೋದು ಫಿಕ್ಸ್ ಎನ್ನುತ್ತಿದ್ದಾರೆ.
ಇನ್ನುಳಿದಿರುವುದು ವರ್ತೂರು ಸಂತೋಷ್ ಮತ್ತು ನಮ್ರತಾ ಗೌಡ. ಈ ಇಬ್ಬರೂ ಫಿನಾಲೆ ವೀಕ್ ತಲುಪುತ್ತಾರಾ ಇಲ್ಲವಾ ಎಂಬುದೇ ಕುತೂಹಲ ಮೂಡಿಸಿದೆ. ವರದಿಯ ಪ್ರಕಾರ, ಇವರಿಬ್ಬರು ಈ ವಾರ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ.
ಬಿಗ್ ಬಾಸ್ ನಲ್ಲಿ ಒಟ್ಟಾರೆ ಎರಡು ಎಲಿಮಿನೇಷನ್ ನಡೆಯೋದಂತೂ ಪಕ್ಕಾ ಆಗಿದೆ. ಒಬ್ಬರು ಇಂದು ಹೊರಬಂದು, ಮತ್ತೊಬ್ಬರು ನಾಳೆ ಎಲಿಮಿನೇಟ್ ಆಗಬಹುದು ಅಥವಾ ನಾಳೆಯೆ ಇಬ್ಬರೂ ಎಲಿಮಿನೇಟ್ ಆದ ಸ್ಪರ್ಧಿಗಳನ್ನು ಆಚೆ ಕರೆಸಬಹುದು ಎಂದು ಹೇಳಲಾಗ್ತಿದೆ.