ಬಿಗ್ ಬಾಸ್ ನಲ್ಲಿ ಒಬ್ಬರಲ್ಲ ಮೂವರು ಔಟ್!? ಫಿನಾಲೆಗೆ ಬಂದೇ ಬರ್ತಾರೆ ಎಂದುಕೊಂಡಿದ್ದ ಸ್ಪರ್ಧಿಯೇ ಎಲಿಮಿನೇಟ್.. ಅತಿಯಾದ ದೋಸ್ತಿಯೇ ಮುಳುವಾಯ್ತಾ?
Bigg Boss Kannada 11 Elimination: ಕನ್ನಡ ಬಿಗ್ ಬಾಸ್ ನಲ್ಲಿ ಈ ವಾರ ಶಾಕಿಂಗ್ ಎಲಿಮಿನೇಷನ್ ನಡೆದಿದೆ. 11 ನೇ ವಾರ ಮನೆಯಿಂದ ಯಾರು ಮತ್ತು ಎಷ್ಟು ಜನ ಹೊರ ಬಂದಿದ್ದಾರೆ ತಿಳಿಯೋಣ..
ಕಿಚ್ಚ ಸುದೀಪ್ ಬಿಗ್‌ಬಾಸ್ ಕನ್ನಡ ಸೀಸನ್ 11 ರ 11 ನೇ ವಾರದ ಪಂಚಾಯಿತಿ ನಡೆಸಿದ್ದಾರೆ. ಸುದೀಪ್ ಶನಿವಾರದ ಸಂಚಿಕೆಯಲ್ಲಿ ಇಬ್ಬರನ್ನು ಸೇವ್ ಮಾಡಿದ್ದು, ಇನ್ನೂ 6 ಜನರು ಬಾಕಿ ನಾಮಿನೇಷನ್ ಲಿಸ್ಟ್‌ನಲ್ಲಿದ್ದಾರೆ.
ಬಿಗ್ ಬಾಸ್ ನಲ್ಲಿ ಈ ವಾರ ಭವ್ಯಾ, ಚೈತ್ರ, ಶಿಶಿರ್, ತ್ರಿವಿಕ್ರಮ್, ಹನಮಂತು, ಧನರಾಜ, ರಜತ್ ಮತ್ತು ಮೋಕ್ಷಿತಾ ನಾಮಿನೇಟ್ ಆಗಿದ್ದರು.
ಸುದೀಪ್ ಶನಿವಾರದ ಎಪಿಸೋಡ್‌ನಲ್ಲಿ ಹನಮಂತು ಮತ್ತು ತ್ರಿವಿಕ್ರಮ್ ಅವರನ್ನು ಸೇವ್ ಮಾಡಿದ್ದಾರೆ. ಸುದೀಪ್ ಮೊದಲು ಹನಮಂತು, ನಂತರ ತ್ರಿವಿಕ್ರಮ್ ಅವರನ್ನು ಸೇವ್ ಮಾಡಿದ್ದಾರೆ.
ಕೆಲ ವರದಿಗಳ ಪ್ರಕಾರ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರ ಅಚ್ಚರಿಯ ಎಲಿಮಿನೇಷನ್ ನಡೆದಿದೆ. ಮೂವರ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇಬ್ಬರು ಆಚೆ ಬಂದಿದ್ದಾರೆ ಎನ್ನಲಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಅಚ್ಚರಿಯ ಎಲಿಮಿನೇಷನ್ ನಡೆದಿದ್ದು, ಮೊದಲ ದಿನದಿಂದಲೇ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ್ದ ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಶಿಶಿರ್ ಶಾಸ್ತ್ರಿ ಕೂಡ ಕಡಿಮೆ ಮತಗಳನ್ನು ಪಡೆದು ಎಲಿಮಿನೇಟ್ ಆಗಿದ್ದಾರೆ ಎಂದು ಮತ್ತೆ ಕೆಲವು ವರದಿಗಳು ಹೇಳುತ್ತಿವೆ. ಇವರ ಜೊತೆಗೆ ಗೋಲ್ಡ್ ಸುರೇಶ್ ಸಹ ಮನೆಯಿಂದ ಆಚೆ ಬಂದಿದ್ದಾರೆ ಎನ್ನಲಾಗಿದೆ.
ಗೋಲ್ಡ್ ಸುರೇಶ್ ಅವರಿಗೆ ಕೆಲವು ಅನಿವಾರ್ಯ ಕಾರಣಗಳಿಂದಾಗಿ ಬಿಗ್ ಬಾಸ್ ಆಟ ತೊರೆದು ಹೊರ ಬಂದಿದ್ದಾರೆ ಎಂಬ ಸಂಗತಿ ವೈರಲ್ ಆಗಿದೆ.
ಒಟ್ಟಾರೆ ಈ ವಾರ ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಇಬ್ಬರು ಸ್ಪರ್ಧಿಗಳು ಹೊರ ಬರುವುದು ಖಚಿತವಾಗಿದೆ ಎನ್ನಲಾಗುತ್ತಿದೆ.
ಇಂದು ರಾತ್ರಿ ನಡೆಯಲಿರುವ ಬಿಗ್ ಬಾಸ್ ಕನ್ನಡ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಮನೆಯಿಂದ ಎಲಿಮಿನೇಟ್ ಆಗುವ ಸ್ಪರ್ಧಿಗಳ ಹೆಸರನ್ನು ಪ್ರಕಟಿಸಲಿದ್ದಾರೆ.