ಬಿಗ್‌ಬಾಸ್‌ಗೆ ಅವಮಾನ ಮಾಡಿದ್ರೂ ಹೊರಹೋಗ್ತಿಲ್ಲ ಜಗದೀಶ್!? ಬದಲಾಗಿ...ಈ ವಾರ ಗೇಟ್‌ಪಾಸ್ ಪಡೆದುಕೊಂಡವರು ಈ ಮಹಿಳಾ ಸ್ಪರ್ಧಿ!
)
ಕನ್ನಡ ಬಿಗ್‌ಬಾಸ್‌ನಲ್ಲಿ ಇಂದು ಕಿಚ್ಚನ ಪಂಚಾಯ್ತಿ ನಡೆಯಲಿದೆ. ಬಿಗ್‌ಬಾಸ್ ಸೀಸನ್ 11ರಲ್ಲಿ ಒಬ್ಬರಿಂದ ಒಬ್ಬರು ಪಂಟರೇ ಎನ್ನುವಂತಿದ್ದಾರೆ. ಆದರೆ ಈ ಎಲ್ಲರಿಗಿಂತ ಭಾರೀ ಗಮನ ಸೆಳೆದಿದ್ದು ಲಾಯರ್ ಜಗದೀಶ್. ಇನ್ನು ಭಾನುವಾರದಂದು ಎಲಿಮಿನೇಶನ್ ಪ್ರಕ್ರಿಯೆ ಶುರುವಾಗಿದ್ದು, ಈ ಹಂತದಲ್ಲಿ ಇಬ್ಬರು ಕಂಟೆಸ್ಟೆಂಟ್‌ಗಳ ಮೇಲೆ ತೂಗುಗತ್ತಿ ನೇತಾಡುತ್ತಿದೆ.
)
ಬಿಗ್‌ಬಾಸ್ ಕನ್ನಡ ಪ್ರಾರಂಭವಾಗಿ ವಾರವಷ್ಟೇ ಆಗಿದೆ. ಈ ವಾರದಲ್ಲಿ ಲಾಯರ್ ಜಗದೀಶ್ ಬಿಗ್‌ಬಾಸ್‌ಗೆ ಅವಮಾನ ಮಾಡಿದ್ದರು. ಬಿಗ್‌ಬಾಸ್ ಯಾರೆಂದು ಎಕ್ಸ್‌ಪೋಸ್ ಮಾಡ್ತೇನೆ ಎಂದೆಲ್ಲಾ ಧಮ್ಕಿ ಹಾಕಿದ್ದರು. ಈ ವಾರ ಕಿಚ್ಚ ಇದೇ ವಿಚಾರದಲ್ಲಿ ಖಡಕ್ ಸಂದೇಶವನ್ನು ನೀಡಿದ್ದಾರೆ.
)
"ನಂಗೆ ಶೋ ಹೇಗೆ ನಡೆಸಿಕೊಡ್ಬೇಕು ಅಂತ ಹೇಳ್ಕೊಡಿ" ಎಂದು ಕಿಚ್ಚ ಜಗದೀಶ್ ಬಳಿ ಕೇಳುತ್ತಾರೆ. ಆಗ "ನಿಮ್ಮದೇನು ತಪ್ಪಿಲ್ಲ, ನೀವು ಕರೆಕ್ಟ್ ಆಗಿದ್ದೀರಾ" ಎಂದು ಜಗದೀಶ್ ಹೇಳುತ್ತಾರೆ. ಅದಕ್ಕೆ ಖಡಕ್ ಆಗ ಪ್ರತಿಕ್ರಿಯಿಸಿದ ಕಿಚ್ಚ, "ಖಡಾಖಂಡಿತವಾಗಿ ಕರೆಕ್ಟ್ ಆಗಿದೆ. ಇಲ್ಲಾಂದ್ರೆ 11ನೇ ಸೀಸನ್ ದಾಟುತ್ತಲೇ ಇರ್ತಿಲ್ಲ. ಕ್ಯಾಮರಾ ಮುಂದೆ ಬಿಗ್‌ಬಾಸ್‌ಗೆ ಚಾಲೆಂಜ್ ಮಾಡಿದ್ರಲ್ಲಾ!! ಅದು ತಪ್ಪೇ ಅಲ್ಲ ಸಾರ್... ಅದು ಜೋಕ್. ಬಿಗ್‌ಬಾಸ್ ಅನ್ನೋದು ಅದ್ಭುತವಾದ ವೇದಿಕೆ. ಅದನ್ನು ಹಾಳು ಮಾಡೋಕೆ ನಿಮ್ಮಪ್ಪನಿಂದಲೂ ಸಾಧ್ಯವಿಲ್ಲ" ಎಂದು ಹೇಳಿ ಎಚ್ಚರಿಕೆ ಕೊಟ್ಟಿದ್ದಾರೆ.
ಕಿಚ್ಚನ ಈ ಮಾತುಗಳನ್ನು ಕೇಳಿ ಇಡೀ ಬಿಗ್‌ಬಾಸ್ ಮನೆಯೇ ಚಪ್ಪಾಳೆ ತಟ್ಟಿದೆ.
ಇನ್ನೊಂದೆಡೆ ಈ ಬಾರಿ ಬಿಗ್‌ಬಾಸ್ ಮನೆಯಿಂದ ಯಾರು ಹೊರಹೋಗುತ್ತಾರೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಇಬ್ಬರು ಮಹಿಳಾ ಕಂಟೆಸ್ಟೆಂಟ್‌ಗಳ ಹೆಸರು ಕೇಳಿಬಂದಿದ್ದು, ಅನುಷಾ ರೈ ಅಥವಾ ಮೋಕ್ಷಿತಾ ಪೈ ಹೊರಬೀಳಬಹುದು ಎಂದು ಹೇಳಲಾಗುತ್ತಿದೆ.
ಈ ಹಿಂದೆ ಹಂಸ ಅವರ ಹೆಸರು ಈ ಪಟ್ಟಿಯಲ್ಲಿತ್ತು. ಆದರೆ ಮೊದಲ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾದ ಕಾರಣ ಇಮ್ಯೂನಿಟಿ ಪಡೆದು, ಎಲಿಮಿನೇಷನ್ ತೂಗುಗತ್ತಿಯಿಂದ ಸೇಫ್ ಆಗಿದ್ದಾರೆ. ಹೀಗಾಗಿ ಈ ಇಬ್ಬರು ಸ್ಪರ್ಧಿಗಳಲ್ಲಿ ಒಬ್ಬರು ಬಿಗ್‌ಬಾಸ್ ಮನೆಯಿಂದ ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ.
ಇನ್ನು ಈ ಇಬ್ಬರಲ್ಲಿ ಮೋಕ್ಷಿತಾ ಪೈ ಅವರು ಔಟ್ ಆಗುತ್ತಾರೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ದಸರಾ ಶುಭಸಂದರ್ಭದಲ್ಲಿ ಸ್ಪರ್ಧಿಗಳಿಗೆ ಸಿಹಿಸುದ್ದಿ ನೀಡಿ ಈ ಬಾರಿ ಎಲಿಮಿನೇಷನ್ ಇರಲ್ಲ ಎಂದೂ ಹೇಳಲಾಗುತ್ತಿದೆ.