ಬಿಗ್ ಬಾಸ್ ಮೊದಲ ಫೈನಲಿಸ್ಟ್ ಇವರೇ.. ಈ ಸ್ಪರ್ಧಿಯ ಪಾಲಾಯ್ತು ಟಿಕೆಟ್ ಟು ಫಿನಾಲೆ, ಕೊನೆಯ ಕ್ಷಣದಲ್ಲಿ ಬಿಗ್ ಟ್ವಿಸ್ಟ್!
Bigg Boss Kannada 11 First Finalist: ಬಿಗ್ ಬಾಸ್ ಕನ್ನಡ ಸೀಸನ್ 11 ರ ‘ಟಿಕೆಟ್ ಟು ಫಿನಾಲೆ’ ಟಾಸ್ಕ್ ಕೊನೆಗೊಂಡಿದೆ. ಇದರಲ್ಲಿ ಯಾರೂ ಊಹಿಸಿರದ ಸ್ಪರ್ಧಿ ಗೆದ್ದಿದ್ದು, ಮೊದಲ ಫೈನಲಿಸ್ಟ್ ಆಗಿದ್ದಾರೆ. ಫಿನಾಲೆ ಟಿಕೆಟ್ ಗೆದ್ದಿರುವ ಈ ಸ್ಪರ್ಧಿ ನೇರವಾಗಿ ಫಿನಾಲೆಗೆ ಎಂಟ್ರಿ ಪಡೆದಿದ್ದಾರೆ.
ಈ ವಾರ ಪೂರ್ತಿ ಬಿಗ್ ಬಾಸ್ ಸರಣಿ ಟಾಸ್ಕ್‌ಗಳನ್ನು ನೀಡಿದ್ದರು. ಈ ಎಲ್ಲ ಟಾಸ್ಕ್‌ಗಳ ಬಳಿಕ ಅಂತಿಮವಾಗಿ ಹನುಮಂತ, ಭವ್ಯ ಗೌಡ, ತ್ರಿವಿಕ್ರಮ್ ಮತ್ತು ರಜತ್ ಟಿಕೆಟ್ ಟು ಫಿನಾಲೆ ಟಾಸ್ಕ್ ಆಡಲು ಆಯ್ಕೆಯಾದರು. ಈ ನಾಲ್ವರಲ್ಲಿ ಒಬ್ಬರು ಈಗ ಫಿನಾಲೆ ಟಿಕೆಟ್ ಪಡೆದು ಮೊದಲ ಫೈನಲಿಸ್ಟ್ ಆಗಿದ್ದಾರೆ.
ಟಿಕೆಟ್ ಟು ಫಿನಾಲೆ ಟಾಸ್ಕ್ ತುಂಬಾನೇ ಟಫ್ ಆಗಿತ್ತು. ರಜತ್, ಭವ್ಯಾ, ತ್ರಿವಿಕ್ರಂ ಹಾಗೂ ಹನುಮಂತ ಅವರಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ತೀವ್ರವಾಗಿದೆ.
ಫಿನಾಲೆ ಟಿಕೆಟ್ ಕೊಡಲು ಅದಿತಿ ಪ್ರಭುದೇವ ಹಾಗೂ ಶರಣ್ ಬಿಗ್ ಬಾಸ್ ಮನೆಗೆ ಆಗಮಿಸಿದ್ದಾರೆ. ಅದಿತಿ ಪ್ರಭುದೇವ ಹಾಗೂ ಶರಣ್ ಛೂಮಂತರ್ ಸಿನಿಮಾ ಪ್ರಚಾರಕ್ಕಾಗಿ ಬಂದಿದ್ದು, ಟಾಸ್ಕ್ ಗೆದ್ದ ಈ ಸ್ಪರ್ಧಿಗೆ ಫಿನಾಲೆ ಟಿಕೆಟ್ ಕೊಟ್ಟು ಅಭಿನಂದಿಸಿದ್ದಾರೆ.
ಒಂದು ಕಬ್ಬಿಣದ ಟ್ರಂಕ್ ಇಟ್ಟು, ಅದಕ್ಕೆ ಬೀಗ ಹಾಕಲಾಗಿದೆ. ಅದರ ಒಳಗೆ ಟಿಕೆಟ್ ಟು ಫಿನಾಲೆ ಎಂದು ಬರೆದ ಪತಾಕೆ ಇಡಲಾಗಿದೆ. ಇದನ್ನು ಅನ್ ಲಾಕ್ ಮಾಡಬೇಕು. ಇದಕ್ಕಾಗಿ ಬಲೆಯ ಮಾದರಿಯಲ್ಲಿ ಹೆಣೆದ ಹಗ್ಗದಲ್ಲಿ ಜೋತು ಬಿದ್ದ ಕೀ ತರಬೇಕು.
ಬಳಿಕ ಟ್ರಂಕ್ ಅನ್‌ಲಾಕ್ ಮಾಡಬೇಕು. ಟಿಕೆಟ್ ಟು ಫಿನಾಲೆ ಪತಾಕೆ ತೆಗೆದುಕೊಂಡು. ಬಲೆಯ ಮೇಲೆ ಹತ್ತುತ್ತಾ ಹೋಗಬೇಕು. ಅದರ ಮೇಲಿರುವ ಟಾಪ್ ಮೇಲೆ ನಿಲ್ಲಬೇಕು. ಅಲ್ಲಿ ಪತಾಕೆಯನ್ನು ಇಟ್ಟ ಬಳಿಕ ಟಾಸ್ಕ್ ಪೂರ್ಣಗೊಳ್ಳುತ್ತದೆ.
ಟಿಕೆಟ್ ಟು ಫಿನಾಲೆ ಟಾಸ್ಕ್ ಅನ್ನು ಯಾರು ಕಡಿಮೆ ಸಮಯದಲ್ಲಿ ಮುಗಿಸುತ್ತಾರೋ ಅವರು ಗೆಲ್ಲುತ್ತಾರೆ ಎಂದು ಬಿಗ್ ಬಾಸ್ ಹೇಳಿದ್ದರು. ಈ ಟಾಸ್ಕ್‌ನ್ನು ಎಲ್ಲರೂ ಸಖತ್ ಆಗಿ ಆಡಿದ್ದು ಆದರೆ ಒಬ್ಬ ಸ್ಪರ್ಧಿ ಎಲ್ಲರಿಗಿಂತ ಕಡಿಮೆ ಸಮಯದಲ್ಲಿ ಮುಗಿಸಿ ಫಿನಾಲೆ ಟಿಕೆಟ್ ಗೆದ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿಂಗರ್ ಹನುಮಂತ ಟಿಕೆಟ್ ಟು ಫಿನಾಲೆ ಟಾಸ್ಕ್ ಗೆದ್ದು ಮೊದಲ ಫೈನಲಿಸ್ಟ್ ಆಗಿದ್ದಾರೆ. ಹನುಮಂತ ಟಾಸ್ಕ್‌ನ್ನ ಕಡಿಮೆ ಸಮಯದಲ್ಲಿ ಮುಗಿಸಿ ಫಿನಾಲೆ ಟಿಕೆಟ್ ಪಡೆದಿದ್ದಾರೆ. ಈ ಮೂಲಕ ಅವರು ನೇರವಾಗಿ ಫಿನಾಲೆಗೆ ಎಂಟ್ರಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.