ಕಿಚ್ಚ ಸುದೀಪ್ ಬಿಗ್ ಬಾಸ್ ನ ಒಂದು ಎಪಿಸೋಡ್‌ನಲ್ಲಿ ಹಾಕುವ ಬಟ್ಟೆಯ ಬೆಲೆ ಎಷ್ಟು ಗೊತ್ತಾ?
ನಟ ಸುದೀಪ್ ಸತತ 10 ವರ್ಷಗಳಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹೋಸ್ಟ್ ಮಾಡುತ್ತಿದ್ದಾರೆ.
ಕಿಚ್ಚ ಸುದೀಪ್ ಸ್ಟೈಲಿಶ್ ಲುಕ್‌ಗೆ ಫಿದಾ ಆಗದವರಿಲ್ಲ.
ಬಿಗ್ ಬಾಸ್ ಕಾರ್ಯಕ್ರಮದ ಹೋಸ್ಟ್ ಆಗಿರುವ ಸುದೀಪ್ ಪ್ರತಿವಾರ ವಿಭಿನ್ನ ಉಡುಗೆ ತೊಟ್ಟು ಬರುತ್ತಾರೆ.
ಪ್ರತಿ ವಾರ ಕಿಚ್ಚನ ಮ್ಯಾನರಿಸಂ ನೋಡಲೆಂದೇ ಒಂದಿಷ್ಟು ಅಭಿಮಾನಿಗಳು ಕಾದು ಕುಳಿತಿರುತ್ತಾರೆ.
ಕಿಚ್ಚ ಸುದೀಪ್ ವಿಭಿನ್ನವಾದಂತಹ ಡ್ರೆಸ್ಸಿಂಗ್ ಸ್ಟೈಲ್ ಅನೇಕರ ಮನಗೆಲ್ಲುತ್ತದೆ.
ಕಣ್ಣಿಗೆ ಹಾಕಿಕೊಳ್ಳುವ ಗ್ಲಾಸ್ ಬೆಲೆಯು 78,800 ರೂಪಾಯಿ ಎನ್ನಲಾಗಿದೆ.
ಮೂಲಗಳ ಮಾಹಿತಿಯ ಪ್ರಕಾರ, ಕಿಚ್ಚ ಸುದೀಪ್ ಧರಿಸುವ ಒಂದು ಜಾಕೆಟ್ ಬೆಲೆ 98,260 ಹಾಗೂ ಶೂ ಬೆಲೆ 94,700 ರೂ. ಎನ್ನಲಾಗಿದೆ.