ಬಿಗ್‌ ಬಾಸ್‌ನಿಂದ ಲಾಯರ್‌ ಜಗದೀಶ್‌ ಹೊರಬಂದಿಲ್ವಾ? ಪತ್ನಿ ಕೊಟ್ರು ಕ್ಲಾರಿಟಿ !

Thu, 17 Oct 2024-9:49 am,

Jagadish elimination from bigg boss: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಲಾಯರ್‌ ಜಗದೀಶ್‌ ವಿರುದ್ಧ ಇಡೀ ಮನೆಮಂದಿ ಎಲ್ಲ ತಿರುಗಿ ಬಿದ್ದಿದ್ದಾರೆ. ಮೂರನೇ ವಾರ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಲಾಯರ್‌ ಜಗದೀಶ್‌ ಟಾರ್ಗೆಟ್‌ ಆಗುತ್ತಿದ್ದಾರೆ.

ಜಗದೀಶ್‌ ಹಾಗೂ ರಂಜಿತ್‌ ಜಗಳ ತಾರಕಕ್ಕೇರಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಇವರಿಬ್ಬರನ್ನು ಹೊರಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪತ್ನಿ ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿದ್ದಾರೆ. 

ಮೂರನೇ ವಾರವೇ ಲಾಯರ್‌ ಜಗದೀಶ್‌ ಬಿಗ್‌ ಬಾಸ್ ಮನೆಯಿಂದ‌ ಹೊರಬಿದ್ದ ವಿಚಾರಕ್ಕೆ ಅವರ ಪತ್ನಿ ಸೌಮ್ಯ ಜಗದೀಶ್‌ ಸ್ಪಷ್ಟನೆ ನೀಡಿದ್ದಾರೆ.

ಜೀ ಕನ್ನಡ ನ್ಯೂಸ್‌ ಬಳಿ ಮಾತನಾಡಿದ ಲಾಯರ್‌ ಜಗದೀಶ್‌ ಸೌಮ್ಯ ಅವರು, ತಮ್ಮ ಪತಿಯನ್ನು ಬಿಗ್‌ ಬಾಸ್‌ನಲ್ಲಿರುವ ಉಳಿದ ಸ್ಪರ್ಧಿಗಳೆಲ್ಲ ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅವರು ಹೆಚ್ಚು ಕಂಟೆಂಟ್‌ ನೀಡುತ್ತಿರುವ ಕಾರಣಕ್ಕೆ ಉಳಿದ ಸ್ಪರ್ಧಿಗಳು ಟಾರ್ಗೆಟ್‌ ಮಾಡುತ್ತಿದ್ದಾರೆ. ಇದು ನೋಡುಗರಿಗೆ ಎದ್ದು ಕಾಣುತ್ತಿದೆ. ಎಲ್ಲರೂ ಒಂದಾಗಿ ಅವರನ್ನು ಒಬ್ಬರನ್ನೇ ಮಾಡಿದ್ದಾರೆ ಎಂದು ಸೌಮ್ಯ ಜಗದೀಶ್‌ ಜೀ ಕನ್ನಡ ನ್ಯೂಸ್‌ ಬಳಿ ಹೇಳಿದ್ದಾರೆ. 

ಲಾಯರ್‌ ಜಗದೀಶ್‌ ಬಿಗ್‌ ಬಾಸ್‌ ನಿಂದ ಹೊರಬಂದ ಬಗ್ಗೆಯೂ ಕ್ಲಾರಿಟಿ ಕೊಟ್ಟಿರುವ ಸೌಮ್ಯ ಜಗದೀಶ್‌, ಈ ಬಗ್ಗೆ ನನಗೂ ಗೊತ್ತಿಲ್ಲ. ಜಗದೀಶ್‌ ಮನೆಗೆ ಬಂದಿಲ್ಲ. ಅವರು ಹೊರ ಬಂದಿದ್ದಾರೋ ಅಲ್ಲೆಯೇ ಇದ್ದಾರೋ ತಿಳಿದಿಲ್ಲ ಎಂದು ಸೌಮ್ಯ ಜಗದೀಶ್‌ ಹೇಳಿದ್ದಾರೆ.

ಬಿಗ್‌ ಬಾಸ್‌ ಟೀಮ್‌ ಕಡೆಯಿಂದ ಯಾವುದೇ ಕಾಲ್‌ ಬಂದಿಲ್ಲ. ಈ ಬಗ್ಗೆ ನಾನು ಸಹ ಸುದ್ದಿ ಮತ್ತು ಸೋಷಿಯಲ್‌ ಮೀಡಿಯಾ ಮೂಲಕವೇ ತಿಳಿದುಕೊಂಡಿದ್ದು ಎಂದಿದ್ದಾರೆ ಸೌಮ್ಯ ಜಗದೀಶ್‌.

ZEENEWS TRENDING STORIES

By continuing to use the site, you agree to the use of cookies. You can find out more by Tapping this link