ರಾತ್ರೋ ರಾತ್ರಿ ಬಿಗ್ ಬಾಸ್ ಮನೆಯಿಂದ ಸ್ಟ್ರಾಂಗೆಸ್ಟ್ ಕಂಟೆಸ್ಟಂಟ್ ಔಟ್!? ವಿನ್ನರ್ ಆಗ್ತಾರೆ ಅನ್ಕೊಂಡವ್ರೇ ಹೊರ ಬಂದಬಿಟ್ರಾ?
bigg boss kannada 11 elimination: ಬಿಗ್ ಬಾಸ್ ಮನೆಯಿಂದ ಈ ಸ್ಟ್ರಾಂಗೆಸ್ಟ್ ಕಂಟೆಸ್ಟಂಟ್ ಹೊರಬರುತ್ತಾರಾ ಎಂಬ ಚರ್ಚೆ ಶುರುವಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಕೊನೆಯ ಹಂತ ತಲುಪಿದೆ. ಟಿಕೆಟ್ ಟು ಫಿನಾಲೆಗಾಗಿ ಹೋರಾಟ ಶುರುವಾಗಿದೆ.
ಫಿನಾಲೆಗೆ ಡೈರೆಕ್ಟ್ ಎಂಟ್ರಿ ಯಾರು ಪಡೆಯುತ್ತಾರೆ ಎಂಬ ಕುತೂಹಲ ಒಂದೆಡೆಡ ಆಗಿದ್ರೆ ಮತ್ತೊಂದೆಡೆ ಈ ವಾರ ಎಲಿಮಿನೇಟ್ ಆಗೋದು ಯಾರು ಎಂಬ ಕ್ಯೂರಿಯಾಸಿಟಿ ಹೆಚ್ಚಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು 9 ಜನ ಸ್ಪರ್ಧಿಗಳು ಮನೆಯಲ್ಲಿದ್ದಾರೆ. ಇವರಲ್ಲಿ ಒಟ್ಟು 4 ಸ್ಪರ್ಧಿಗಳು ಫಿನಾಲೆ ಬರುವ ಹೊತ್ತಿಗೆ ಎಲಿಮಿನೇಟ್ ಆಗಬೇಕಿದೆ.
ಹೀಗಾಗಿ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಇದು ವರೆಗೆ ಒಂದೇ ಒಂದು ಬಾರಿಯೂ ಮಿಡ್ ವೀಕ್ ಎಲಿಮಿನೇಷನ್ ನಡೆದಿಲ್ಲ. ಆದರೆ ಫಿನಾಲೆ ಸನಿಹದ ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಡೆಯಬಹುದು ಎನ್ನಲಾಗುತ್ತಿದೆ.
ಈ ವಾರ ಕ್ಯಾಪ್ಟನ್ ಆದ ರಜತ್ ಬುಜ್ಜಿ ಇಮ್ಯುನಿಟಿ ಪಡೆದು ನಾಮಿನೇಷನ್‌ನಿಂದ ಪಾರಾಗಿದ್ದಾರೆ. ಇವರ ಜೊತೆಗೆ ಗೌತಮಿ, ಮಂಜು, ಹನಮಂತು ಸಹ ನಾಮಿನೇಟ್ ಆಗಿಲ್ಲ. ಹೀಗಾಗಿ ಇವರು ಈ ವಾರ ಎಲಿಮಿನೇಟ್‌ನಿಂದ ಬಚಾವ್ ಆಗಿದ್ದಾರೆ.
ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ, ಚೈತ್ರಾ, ಧನರಾಜ್ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಇಬ್ಬರು ಅಥವಾ ಒಬ್ಬರು ಮನೆಯಿಂದ ಹೊರಬರುತ್ತಾರೆ.
ಇಂದು ವೋಟಿಂಗ್ ಲೈನ್ ಕ್ಲೋಸ್ ಆಗುವ ಕಾರಣ ಒಂದು ವೇಳೆ ಮಿಡ್ ವೀಕ್ ಎಲಿಮಿನೇಷನ್ ನಡೆದರೆ ಅತಿ ಕಡಿಮೆ ವೋಟ್ ಪಡೆದ ಓರ್ವ ಸ್ಪರ್ಧಿಯನ್ನು ಇಂದೇ ರಾತ್ರೋ ರಾತ್ರಿ ಮನೆಯಿಂದ ಹೊರ ಕಳಿಸಲಾಗುತ್ತದೆ.
ಬಿಗ್ ಬಾಸ್ ವೀಕ್ಷಕರ ಪ್ರಕಾರ, ಈ ವಾರ ಚೈತ್ರಾ ಕುಂದಾಪುರ ಅಥವಾ ಭವ್ಯಾ ಗೌಡ ಮನೆಯಿಂದ ಎಲಿಮಿನೇಟ್ ಆಗಬಹುದು ಎನ್ನಲಾಗುತ್ತಿದೆ. ಸಮೀಕ್ಷೆವೊಂದರ ಪ್ರಕಾರ, ಮೋಕ್ಷಿತಾ ಅತಿ ಹೆಚ್ಚು ವೋಟ್ ಪಡೆದಿದ್ದು ಮೊದಲು ಸೇವ್ ಆಗಲಿದ್ದಾರೆ.
ತ್ರಿವಿಕ್ರಮ್ ಎರಡನೆಯವರಾಗಿ ಸೇವ್ ಆಗಲಿದ್ದು, ಧನರಾಜ್ ಕೂಡ ಎಲಿಮಿನೇಷನ್‌ನಿಂದ ಪಾರಾಗಲಿದ್ದಾರೆ. ಚೈತ್ರಾ ಕುಂದಾಪುರ ಮತ್ತು ಭವ್ಯಾ ಗೌಡ ಅತಿ ಕಡಿಮೆ ವೋಟ್ ಪಡೆದಿದ್ದು ಇವರು ಎಲಿಮಿನೇಟ್ ಆಗುವ ಚಾನ್ಸ್ ಹೆಚ್ಚಾಗಿದೆ.
ಮಿಡ್ ವೀಕ್ ಎಲಿಮಿನೇಷನ್ ಇದ್ದು, ಲೆಕ್ಕಾಚಾರ ಈ ಸಮಿಕ್ಷೆಯಂತೆಯೇ ನಡೆದರೆ ಭವ್ಯಾ ಗೌಡ ಇಂದೇ ಮನೆಯಿಂದ ಹೊರಬರಬಹುದಾಗಿದೆ. ಆದರೆ ಎಲ್ಲದಕ್ಕೂ ಸೂಪರ್ ಸಂಡೇ ವಿತ್ ಸುದೀಪ ಎಪಿಸೋಡ್‌ನಲ್ಲಿ ನಿಜವಾದ ಉತ್ತರ ಸಿಗಲಿದೆ.