ಗೌತಮಿ ಮೂಗಿಗೆ ಹೊಡೆದ ಭವ್ಯ ! ಭವ್ಯ ಕತ್ತು ಹಿಡಿದ ಉಗ್ರಂ ಮಂಜು !ವಾರಂತ್ಯಕ್ಕೂ ಮುನ್ನವೇ ಇಬ್ಬರೂ ಔಟ್ ?
ಬಿಗ್ ಬಾಸ್ ಫಿನಾಲೆಗೆ ಇನ್ನು ಕೆಲವೇ ವಾರಗಳು ಬಾಕಿ ಇವೆ. ಸದ್ಯಕ್ಕೆ ಮನೆಯೊಳಗೆ ಸ್ಟ್ರಾಂಗ್ ಸ್ಪರ್ಧಿಗಳೇ ಉಳಿದುಕೊಂಡಿದ್ದಾರೆ.
ಇದೀಗ ಬಿಗ್ ಬಸ್ ಶೋ ನಲ್ಲಿ ಟಿಕೆಟ್ ಟು ಫಿನಾಲೆ ಟಾಸ್ಕ್ ಗಳು ನಡೆಯುತ್ತಿವೆ. ಇಲ್ಲಿ ಗೆದ್ದರೆ ನೇರವಾಗಿ ಫಿನಾಲೆ ತಲುಪುವ ಅವಕಾಶ ಸ್ಪರ್ಧಿಗೆ ಸಿಗಲಿದೆ.
ಇಲ್ಲಿ ಪ್ರತಿಯೊಬ್ಬನಿಗೂ ಮಾಡು ಇಲ್ಲವೇ ಮಡಿ ಎನ್ನುವ ಸ್ಥಿತಿ. ಹಾಗಾಗಿ ಯಾರಿಗೆ ಏನೇ ಆಗಲಿ ನಾವು ಗೆಲ್ಲಬೇಕು ಎಂದೇ ಮುನ್ನುಗುತ್ತಿದ್ದಾರೆ ಸ್ಪರ್ಧಿಗಳು.
ಈ ಮಧ್ಯೆ ಬಿಗ್ ಬಾಸ್ ನೀಡಿರುವ ಟಾಸ್ಕ್ ವೇಳೆ ಆಟದ ಭರದಲ್ಲಿ ಅಚಾತುರ್ಯ ನಡೆದಿದೆ. ಅದುವೇ ಮೂಗಿಗೆ ಗುದ್ದುವುದು, ಕುತ್ತಿಗೆ ಒತ್ತುವುದು.
ತಂಡದಲ್ಲಿರುವ ಆಟಗಾರರು ತಮ್ಮ ಒಂದೊಂದು ಕಾಲುಗಳನ್ನು ಪರಸ್ಪರ ಕಟ್ಟಿಕೊಂಡು ಬಿಗ್ ಬಾಸ್ ಸೂಚಿಸುವ ಸಂಖ್ಯೆಯ ಕೆಳಗಿರುವ ಬಾಲ್ ಗಳನ್ನು ತೆಗೆದುಕೊಂಡು ಬರಬೇಕು.
ಈ ಆಟದಲ್ಲಿ ಎಳೆದಾಡುವ ಭರದಲ್ಲಿ ತಮ್ಮ ಮೂಗಿಗೆ ಬಡಿದಿದ್ದಾರೆ ಎಂದು ಗೌತಮಿ ಆರೋಪಿಸುವುದನ್ನು ನೋಡಬಹುದು. ಜೊತೆಗೆ ಬಾಲ್ ಹಿಡಿದು ಸಾಗುತ್ತಿದ್ದ ವೇಳೆ ಹಿಂದಿನಿಂದ ಬಂದ ಮಂಜು ಭವ್ಯನನ್ನು ತಡೆಯುವ ಸಲುವಾಗಿ ಹಿಂದಿನಿಂದ ಬಂದು ಕುತ್ತಿಗೆ ಹಿಡಿಯುವುದನ್ನು ಕೂಡಾ ಕಾಣಬಹುದು.
ಅಷ್ಟರಲ್ಲಿ ಟಾಸ್ಕ್ ಉಸ್ತುವಾರಿಯಾಗಿರುವ ರಜತ್ ಮಧ್ಯಪ್ರವೇಶಿಸುತ್ತಾರೆ. ಮಂಜು ನೀವು ಆಡುತ್ತಿರುವ ರೀತಿ ಸರಿಯಿಲ್ಲ ಎಂದು ರಜತ್ ಸಿಟ್ಟಾಗುತ್ತಾರೆ.
ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಈ ಎಲ್ಲಾ ಅಂಶಗಳನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.
ಬಿಗ್ ಬಾಸ್ ನಿಯಮದ ಪ್ರಕಾರ, ಟಾಸ್ಕ್ ವೇಳೆಯಾಗಲಿ, ಮನೆಯ ಬೇರೆ ಸಮಯ ಸಂದರ್ಭಗಳಲ್ಲಿಯಾಗಲೀ ಬೇರೊಬ್ಬರಿಗೆ ಹೊಡಿಯುವುದು, ನೋವು ಉಂಟು ಮಾಡುವುದು ತಪ್ಪು. ಹಾಗಾದಲ್ಲಿ ಸ್ಪರ್ಧಿಯನ್ನು ಆ ಕ್ಷಣವೇ ಮನೆಯಿಂದ ಹೊರ ಹಾಕಲಾಗುವುದು.