ಬಿಗ್‌ ಬಾಸ್‌ ಫಿನಾಲೆಗೂ ಮುನ್ನ ಅಚ್ಚರಿಯ ಎಲಿಮಿನೇಷನ್.. ಈ ಸ್ಪರ್ಧಿಯೇ‌ ವಿನ್ನರ್? ಕಿಚ್ಚ ಸುದೀಪ ಕೊಟ್ರು ಸುಳಿವು

Mon, 22 Jan 2024-11:07 pm,

ಸಂಗೀತಾ ಶೃಂಗೇರಿ, ಕಾರ್ತಿಕ್‌, ವಿನಯ್‌, ವರ್ತೂರು ಸಂತೋಷ್‌, ತುಕಾಲಿ ಸಂತು ಹಾಗೂ ಡ್ರೋನ್‌ ಪ್ರತಾಪ್‌ ಬಿಗ್‌ ಬಾಸ್‌ ಫಿನಾಲೆ ವಾರಕ್ಕೆ ಎಂಟ್ರಿ ಪಡೆದಿದ್ದಾರೆ. ಬಿಗ್‌ ಬಾಸ್‌ ಫಿನಾಲೆ ವಾರದಿಂದ ಈ ಆರು ಜನರಲ್ಲಿ ಒಬ್ಬರು ಎಲಿಮಿನೇಟ್‌ ಆಗಲಿದ್ದಾರೆ. 

ಬಿಗ್‌ ಬಾಸ್‌ ಫಿನಾಲೆ ವಾರದಲ್ಲಿ ಮಿಡ್‌ ವೀಕ್‌ ಎಲಿಮಿನೇಷನ್‌ ನಡೆಯಲಿದೆ ಎಂದು ಕಳೆದ ವಾರದ ವೀಕೆಂಡ್‌ ಎಪಿಸೋಡ್‌ ನಲ್ಲಿ ಸುದೀಪ ಸುಳಿವು ನೀಡಿದ್ದರು.

ಸಂಗೀತಾ ಶೃಂಗೇರಿ ಅವರಿಂದ ಹಿಡಿದು ಕಾರ್ತಿಕ್‌, ವಿನಯ್‌, ವರ್ತೂರು ಸಂತೋಷ್‌, ತುಕಾಲಿ ಸಂತು, ಡ್ರೋನ್‌ ಪ್ರತಾಪ್‌ ಈ ಆರು ಜನರಲ್ಲಿ ಯಾರಾದರೂ ಆಚೆ ಹೋಗಬಹುದು.

ಬಿಗ್‌ ಬಾಸ್‌ ಮಿಡ್‌ ವೀಕ್‌ ಎಲಿಮಿನೇಷನ್‌ನಲ್ಲಿ ಯಾವ ಸ್ಪರ್ಧಿ ಯಾವ ರೀತಿ ಆಚೆ ಹೋಗಲಿದ್ದಾರೆ ಎಂಬ ಸಂಗತಿ ಅಚ್ಚರಿ ತರಿಸಲಿದೆ ಎಂದು ಸುದೀಪ್‌ ಹೇಳಿದ್ದರು.

ಬಿಗ್‌ ಬಾಸ್‌ ವೀಕ್ಷಕರ ಅಂದಾಜಿನ ಪ್ರಕಾರ, ತುಕಾಲಿ ಸಂತೋಷ್‌ ಮಿಡ್‌ ವೀಕ್‌ ಎಲಿಮಿನೇಷನ್‌ ನಲ್ಲಿ ಆಚೆ ಬರಬಹುದು ಎನ್ನಲಾಗಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ವಿನ್ನರ್‌ ಪೈಟೋಟಿಯಲ್ಲಿ ಸಂಗೀತಾ, ಕಾರ್ತಿಕ್‌ ಹಾಗೂ ಪ್ರತಾಪ್‌ ಪರ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಕ್ರಿಯೇಟ್‌ ಆಗುತ್ತಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link