ಬಿಗ್‌ ಬಾಸ್‌ನಲ್ಲಿ ಈ ವಾರ ಅಚ್ಚರಿಯ ಎಲಿಮಿನೇಷನ್.​!

Sat, 16 Dec 2023-10:44 am,

ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಒಟ್ಟು ಆರು ಮಂದಿ ನಾಮಿನೇಟ್‌ ಆಗಿದ್ದಾರೆ. ಪ್ರತಾಪ್, ಸಿರಿ, ಪವಿ, ಸಂಗೀತಾ, ವಿನಯ್, ಮೈಕಲ್ ಮೇಲೆ ಎಲಿಮಿನೇಷನ್‌ ತೂಗುಗತ್ತಿ ಇದೆ. ಈ ಪೈಕಿ ಒಬ್ಬರು ಎಲಿಮಿನೇಟ್​ ಆಗಿ ಮನೆಯಿಂದ ಹೊರ ನಡೆಯುತ್ತಾರೆ.

ಪವಿ, ಸಿರಿ ಹಾಗೂ ಮೈಕಲ್ ಹೆಚ್ಚು ಡೇಂಜರ್‌ ಝೋನ್‌ನಲ್ಲಿರುವಂತೆ ತೋರುತ್ತಿದೆ. ಸಿರಿ ಅವರ ಸೈಲೆಂಟ್‌ ಆಟ ಅವರು ಎಲಿಮಿನೇಟ್‌ ಆಗಲು ಕಾರಣವಾಗಬಹುದು ಎಂದು ಹಲವರು ಹೇಳುತ್ತಿದ್ದಾರೆ.

ಇನ್ನೊಂದೆಡೆ ಮೈಕಲ್‌ ಕಳೆದ 2 ವಾರಗಳಿಂದ ಕೊನೆಯಲ್ಲಿ ಎರಡನೇಯವರಾಗಿ ಸೇವ್‌ ಆಗುತ್ತಿದ್ದಾರೆ. ಮೊದಲಿನಷ್ಟು ಮೈಕಲ್‌ ಆಕ್ಟಿವ್‌ ಆಗಿಲ್ಲ ಎಂದು ವೀಕ್ಷಕರಿಗೆ ಭಾಸವಾಗುತ್ತಿದೆ.

ಸಿರಿ ಮತ್ತು ಮೈಕಲ್‌ಗೆ ಹೋಲಿಸಿದರೆ ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಬಾಸ್‌ ಮನೆಗೆ ಗೇಮ್‌ ಚೇಂಜರ್‌ ಆಗಿ ಎಂಟ್ರಿ ಕೊಟ್ಟ ಪವಿ ಪೂವಪ್ಪ ಎಲಿಮಿನೇಟ್‌ ಆಗುವ ಚಾನ್ಸ್‌ ಹೆಚ್ಚಾಗಿದೆ ಎನ್ನಲಾಗುತ್ತಿದೆ. 

ಪವಿ ಪೂವಪ್ಪ ಇನ್ನೂ ಬಿಗ್‌ ಬಾಸ್‌ ಆಟ ಶುರು ಮಾಡಿದಂತೆ ಕಾಣುತ್ತಿಲ್ಲ. ಸಾಕಷ್ಟು ಎನರ್ಜಿ ಇದ್ದರೂ ಅದನ್ನು ಅವರು ಬಳಸಿಕೊಳ್ಳುತ್ತಿಲ್ಲ ಎಂದು ಬಿಗ್‌ ಬಾಸ್‌ ವೀಕ್ಷಕರ ವಾದವಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link