BBK11: ಬಿಗ್‌ಬಾಸ್‌ ಮನೆ ಎಂಟ್ರಿಯಲ್ಲೇ ಶುರುವಾಯ್ತಾ ಲವ್!? ಈ ಕ್ಯೂಟೆಸ್ಟ್‌ ರೂಮರ್ಡ್‌ ಜೋಡಿಗೆ ಸಿಕ್ತು ಪ್ರೇಕ್ಷಕರಿಂದ ಫುಲ್‌ ಸಪೋರ್ಟ್!!‌

Tue, 01 Oct 2024-11:09 am,

ಈ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ಸ್ವರ್ಗ, ನರಕ ಎನ್ನುವ ಹೊಸ ಕಾನ್ಸೆಪ್ಟ್‌ ಶುರುವಾಗಿದ್ದು, ವೇದಿಕೆ ಮೇಲೆಯೇ ಯಾರು ಎಲ್ಲಿ ಹೋಗಬೇಕು ಎನ್ನುವುದನ್ನು ಪ್ರೇಕ್ಷಕರೇ ತಿರ್ಮಾನಿಸಿದರು..  

ಬಿಗ್‌ಬಾಸ ಮನೆಗೆ 5ನೇ ಸ್ಪರ್ಧಿಯಾಗಿ ಅನುಷಾ ರೈ ಮತ್ತು  6ನೇ ಸ್ಪರ್ಧಿಯಾಗಿ ಧರ್ಮ ಕೀರ್ತಿರಾಜ್ ಎಂಟ್ರಿಕೊಟ್ಟರು.. ಇಬ್ಬರನ್ನು ಒಮ್ಮೆಲೆ ವೇದಿಕೆ ಮೇಲೆ ಕರೆಸಿ ದೊಡ್ಮನೆಯೊಳಕ್ಕೆ ಕಳುಹಿಸಲಾಯ್ತು..  

ಈ ವೇಳೆ ಕಿಚ್ಚ ಸುದೀಪ್‌ ಕೂಡ ಅನುಷಾ ರೈಗೆ ವಿಶ್ ಮಾಡಲೆಂದೇ ಧರ್ಮ ಅವರ ಕುಟುಂಬವೇ ಬಂದಿದೆ.. ಎಂದು ವೇದಿಕೆ ಮೇಲೇಯೇ ಅನುಷಾ ಹಾಗೂ ಧರ್ಮ ಅವರ ಕಾಲೆಳೆದರು..   

ಇನ್ನು ಅನುಷಾ ಹಾಗೂ ಧರ್ಮ ಒಟ್ಟಿಗೆ ಸಿನಿಮಾವೊಂದರಲ್ಲಿ ನಟಿಸಿದ್ದಾರೆ.. ಸದ್ಯ ಜೊತೆಯಾಗಿಯೇ ಬಿಗ್‌ಬಾಸ್‌ ಮನೆಯೊಳಕ್ಕೂ ಕಾಲಿಟ್ಟಿದ್ದಾರೆ.. ಇದೇ ವೇಳೆ ಸೋಷಿಯಲ್‌ ಮಿಡಿಯಾದಲ್ಲಿ ಇಂತದ್ದೊಂದು ಚರ್ಚೆ ಶುರುವಾಗಿದ್ದು, ಇಬ್ಬರ ಜೋಡಿ ಸಖತ್‌ ಆಗಿದೆ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ..  

ಇಷ್ಟೇ ಅಲ್ಲ.. ಇಬ್ಬರೂ ಬಿಗ್‌ಬಾಸ್‌ ಮನೆಯೊಳಗೆ ಜೋಡಿಯಾಗ್ತಾರೆ.. ದೊಡ್ಮನೆಯಲ್ಲಿ ಆರಂಭದಲ್ಲೇ ಚಿಗುರೊಡೆಯಿತು ಪ್ರೀತಿ ಎಂದೆಲ್ಲ ಅಭಿಮಾನಿಗಳು ಫುಲ್‌ ಕಾಮೆಂಟ್‌ ಮಾಡುತ್ತಿದ್ದಾರೆ..   

ಅನುಷಾ ರೈ ಬಗ್ಗೆ ಮಾತನಾಡುವುದಾರೇ ಅವರು ಬೆಂಗಳೂರಿನಲ್ಲೇ ಇಂಜಿನಿಯರಿಂಗ್‌ ಪದವಿ ಪಡೆದಿದ್ದು, 2017ರಲ್ಲಿ ಮಹಾನುಭಾವರು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.. ನಟಿ ಇತ್ತೀಗೆ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಫ್ಯಾನ್‌ ಪಾಲೋಯಿಂಗ್‌ ಪಡೆದುಕೊಂಡಿದ್ದಾರೆ..   

 ಧರ್ಮ ಕೀರ್ತಿ ರಾಜ್‌ ಬಗ್ಗೆ ಮಾತನಾಡುವುದಾದರೇ ಇವರು ಖ್ಯಾತ ವಿಲನ್‌ ಕೀರ್ತಿರಾಜ್‌ ಅವರ ಪುತ್ರ.. ಇವರು ಮೊದಲ ಸಿನಿಮಾದಲ್ಲೇ ಒಳ್ಳೆ ಫೇಮ್‌ ನೇಮ್‌ ಪಡೆದುಕೊಂಡು,, ಒಲವೇ ವಿಸ್ಮಯ ಸಿನಿಮಾದಿಂದ ನಾಯಕನಾದರು..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link