ಮೂಗುತಿ ಮುತ್ತು ಚಂದ.. ವಾಲೆ ಜುಮಕಿ ಗತ್ತು ಚಂದ..! ದೊಡ್ಮನೆ ಕಳೆ ಹೆಚ್ಚಿಸಿದ ಭವ್ಯಾ ಸೌಂದರ್ಯ.. ಫೊಟೋಸ್ ಇಲ್ಲಿವೆ..
ಕಿರುತೆರೆಯಲ್ಲಿ ಮಿಂಚಿದ್ದ ನಟಿ ಭವ್ಯಾ ಗೌಡ ಇದೀಗ Bigg Boss Kannada season 11 ರಲ್ಲಿ ಸ್ಪರ್ಧಿಯಾಗಿ ಆಟ ಶುರು ಮಾಡಿದ್ದಾರೆ..
ತನ್ನದೇಯಾದ ಆಟದ ಶೈಲಿಯಿಂದ ಬಿಗ್‌ಬಾಸ್ ಪ್ರೇಕ್ಷಕರನ್ನು ರಂಜಿಸುತ್ತಿರುವ ಸುಂದರಿ ಆಗಾಗ ತನ್ನ ಸೌಂದರ್ಯದಿಂದಲೂ ಹುಡುಗರ ಮನ ಗೆಲ್ಲುತ್ತಿದ್ದಾಳೆ.
ಅಂದಹಾಗೆ ಭವ್ಯಾ ಗೌಡ 1996ರ ನವೆಂಬರ್ 17ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಬಿಕಾಂ ಮುಗಿಸಿದ್ದ ಈ ಚೆಲುವೆಗೆ ಗಗನಸಖಿಯಾಗಬೇಕೆಂಬ ಕನಸು ಆಸೆಯಿತ್ತು.
ಗಗನಸಖಿಯಾಗಲು ತಯಾರಿ ನಡೆಸಿ ಪರೀಕ್ಷೆ ಸಹ ಬರೆದಿದ್ದರು. ಆದರೆ, ಈಕೆಯ ಪೋಷಕರಿಗೆ ತಮ್ಮ ಮಗಳನ್ನು ನಟಿಯಾಗಿ ನೋಡಬೇಕೆಂಬ ಆಸೆ ಇತ್ತಂತೆ. ಅದಕ್ಕಾಗಿ ಭವ್ಯಾ ನಟನೆಯತ್ತ ಮುಖ ಮಾಡಿದಳು.
ಸಧ್ಯ ಬಿಗ್ ಬಾಸ್‌ನಲ್ಲಿ ಮಿಂಚುತ್ತಿರುವ ಭವ್ಯಾ ಮೊದಲಿಗೆ ಟಿಕ್‌ಟಾಕ್ ಮೂಲಕ ಖ್ಯಾತಿ ಗಳಿಸಿದ್ದರು. ಆನಂತರ ʼಗೀತಾʼ ಸೀರಿಯಲ್ ಆಡಿಷನ್‌ನಲ್ಲಿ ಆಯ್ಕೆಯಾದರು.
2020ರಲ್ಲಿ ಗೀತಾ ಸೀರಿಯಲ್ ಮೂಲಕ ನಟಿಯಾಗಿ ಎಂಟ್ರಿಕೊಟ್ಟು, ಸದ್ಯ ಕನ್ನಡ ಕಿರುತೆರೆಯ ಟಾಪ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಧಾರಾವಾಹಿಗೆ ಮೀಸಲಾಗಿದ್ದ ಈ ಸುಂದರಿ ವಿಸ್ಮಯಾ ಗೌಡ ನಿರ್ದೇಶನದ 'ಡಿಯರ್ ಕಣ್ಮಣಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆ ಮೇಲೂ ಮೋಡಿ ಮಾಡಿದರು.
ಸಧ್ಯ ಕಿಚ್ಚ ಸುದೀಪ್ ಸಾರಥ್ಯದ ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿ ಭವ್ಯಾ ಗೌಡ ಪ್ರವೇಶ ಮಾಡಿದ್ದಾರೆ..
ಇನ್ನು ಇತ್ತೀಚಿಗೆ ಮೂಗುತಿ, ವಾಲೆ ಜುಮಕಿ ಹಾಕಿಕೊಂಡು ಸೀರೆಯುಟ್ಟು ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡ ಭವ್ಯಾ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಭವ್ಯಾ ಫೊಟೋಸ್ ನೋಡಿದ ನೆಟ್ಟಿಗರು.. ಮೂಗುತಿ ಮುತ್ತು ಚಂದ.. ವಾಲೆ ಜುಮಕಿ ಗತ್ತು ಚಂದ.. ಎಂಬ ರವಿಮಾಮನ ಹಾಡಿನ ಲಿರಿಕ್ಸ್ ನೆನಪು ಮಾಡಿಕೊಳ್ಳುತ್ತಿದ್ದಾರೆ..