ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಗಳ ಪಟ್ಟಿ ವೈರಲ್
ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ಕೀರ್ತಿ ಪಾತ್ರದಿಂದ ಫೇಮಸ್ ಆದ ನಟಿ ತನ್ವಿ ರಾವ್ ಈ ಬಾರಿ ಬಿಗ್ ಬಾಸ್‌ಗೆ ಬರಬಹುದು, ಇದೇ ಕಾರಣಕ್ಕೆ ಕೀರ್ತಿ ಪಾತ್ರದಲ್ಲಿ ಟ್ವಿಸ್ಟ್ ಸಿಕ್ಕಿದೆ ಎನ್ನುತ್ತಿದ್ದಾರೆ ನೆಟ್ಟಿಗರು.
ಗೀತಾ ಧಾರಾವಾಹಿ ವಿಲನ್ ಪಾತ್ರದ ಮೂಲಕ ಗಮನ ಸೆಳೆದ ಶರ್ಮಿತಾ ಗೌಡ ಈ ಬಾರಿಯ ಬಿಗ್ ಬಾಸ್ ಆಫರ್ ಪಡೆದಿದ್ದಾರೆ ಎನ್ನಲಾಗುತ್ತಿದೆ.
ರಾಘವೇಂದ್ರ ಗೌಡ ‘ಗಿಚ್ಚಿ ಗಿಲಿಗಿಲಿ’ ಶೋ ಮೂಲಕ ಫೇಮಸ್ ಆದವರು. ಇವರು ಸಹ ಬಿಗ್‌ಬಾಸ್ ಮನೆಗೆ ಬರಲಿದ್ದಾರೆ ಎನ್ನಲಾಗಿದೆ.
ನಿರ್ದೇಶಕ ಎಸ್. ನಾರಾಯಣ್ ಮಗ ಪಂಕಜ್ ನಾರಾಯಣ್ ಕೂಡ ಬಿಗ್ ಬಾಸ್‌ಗೆ ಬರಬಹುದು ಎನ್ನಲಾಗಿದೆ.
ಪಾರು ಧಾರಾವಾಹಿ ಮೂಲಕ ಗಮನ ಸೆಳೆದ ನಟಿ ಮೋಕ್ಷಿತಾ ಪೈ ಈ ಬಾರಿ ಬಿಗ್ ಬಾಸ್‌ಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸತ್ಯ ಧಾರಾವಾಹಿಯ ನಟಿ ಗೌತಮಿ ಜಾಧವ್ ಕೂಡ ಬಿಗ್ಬಿಗ್ ಬಾಸ್‌ಗೆ ಬರಬಹುದು ಎನ್ನಲಾಗಿದೆ.
ಗಿಚ್ಚಿ ಗಿಲಿ ಗಿಲಿ 2 ವಿನ್ನರ್ ಚಂದ್ರಪ್ರಭಾ ಅವರು ಬಿಗ್ ಬಾಸ್ ರಿಯಾಲಿಟಿ ಶೋಗೆ ಅವಕಾಶ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಗ್ ಬಾಸ್ ಮನೆಗೆ ಗಾಯಕಿ ಆಶಾ ಭಟ್ ಕಾಲಿಡುತ್ತಾರೆ ಎಂದು ವರದಿ ಆಗಿದೆ.
ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿರುವ ಅಮಿತಾ ಸದಾಶಿವ ಅವರೂ ಬಿಗ್ ಬಾಸ್ ನ ಭಾಗವಾಗಲಿದ್ದಾರಂತೆ.
ಬೃಂದಾವನ ಸೀರಿಯಲ್ ನಟ ವರುಣ್ ಆರಾಧ್ಯಾ ಬಿಗ್ ಬಾಸ್‌ಗೆ ಬರಬಹುದು ಎನ್ನಲಾಗಿದೆ.
ಯೂಟ್ಯೂಬರ್ ವರ್ಷಾ ಕಾವೇರಿ ಕೂಡ ಬಿಗ್ ಬಾಸ್‌ಗೆ ಬರುವ ನಿರೀಕ್ಷೆ ಇದೆ.
ನಟ ತ್ರಿವಿಕ್ರಮ್ ‘ಪದ್ಮಾವತಿ’ ಧಾರಾವಾಹಿಯಲ್ಲಿ ನಟಿಸಿ ಫೇಮಸ್ ಆದರು. ಇವರು ಬಿಗ್ ಬಾಸ್ ಮನೆಗೆ ಬರ್ತಾರೆ ಎನ್ನಲಾಗುತ್ತಿದೆ.
ಅಂತರಪಟ ಧಾರಾವಾಹಿಯ ನಟಿ ತನ್ವಿ ಬಾಲರಾಜ್ ಈ ಬಾರಿ ಬಿಗ್ ಬಾಸ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದ ಕಿರುತೆರೆ ನಟಿ ಸುಕೃತಾ ನಾಗ್ ಬಿಗ್‌ಬಾಸ್‌ಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.