BBK 11: “ಬಿಗ್ ಬಾಸ್...` ಅಂತಾ ಪ್ರತಿದಿನ ಕಾರ್ಯಕ್ರಮದಲ್ಲಿ ಕೇಳಿ ಬರುವ ಹಿನ್ನಲೆ ಧ್ವನಿ ಯಾರದ್ದು ಗೊತ್ತಾ? ಪ್ರಖ್ಯಾತ ನಟನೇ ಆ ಗತ್ತಿನ ಧ್ವನಿಯ ʼಸರದಾರʼ
ಕನ್ನಡ ಬಿಗ್‌ಬಾಸ್ ಸಖತ್ ಕ್ರೇಜ್ ಹುಟ್ಟುಹಾಕಿದೆ. ಈ ನಡುವೆ ಒಂದು ವಾರವೇ ಮುಕ್ತಾಯಗೊಂಡಿದ್ದು ಮೊದಲ ಎಲಿಮಿನೇಷನ್ ಮೂಲಕ ಯಮುನಾ ಶ್ರೀನಿಧಿ ಅವರು ಬಿಗ್‌ಬಾಸ್ ಮನೆಯಿಂದ ಹೊರ ನಡೆದಿದ್ದಾರೆ. ಇನ್ನೊಂದೆಡೆ ಮೊದಲ ಕ್ಯಾಪ್ಟನ್ ಆಗಿ ಹಂಸ ಆಯ್ಕೆಯಾಗಿದ್ದು, ಇವರ ಆಯ್ಕೆ ಅನುಸಾರ ಜಗದೀಶ್ ಅವರು ನರಕಕ್ಕೆ ಹೋದರೆ, ರಂಜಿತ್ ಅವರು ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಅಂದಹಾಗೆ ಪ್ರತಿದಿನ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ "ಬಿಗ್‌ಬಾಸ್.... ಸಮಯ 7 ಗಂಟೆ" ಎಂದು ಕೇಳಿಬರುತ್ತದೆ. ಈ ಧ್ವನಿಯ ಹಿಂದಿರುವ ವ್ಯಕ್ತಿ ಪ್ರದೀಪ್ ಬಡೆಕ್ಕಿಲ. ಆದರೆ ಇವರ ಹೊರತಾಗಿ ʼಬಿಗ್‌ಬಾಸ್ʼ ಆಗಿ ಧ್ವನಿ ನೀಡುತ್ತಿರುವವರು ಯಾರೆಂದು ನಿಮಗೆ ತಿಳಿದಿದೆಯೇ?
ಈ ವ್ಯಕ್ತಿಯನ್ನು ನೋಡಿದಾಕ್ಷಣ... ಇವರನ್ನ ಎಲ್ಲೋ ನೋಡಿದ್ದೇವೆ ಎಂದು ಅನಿಸುತ್ತಿದೆಯೇ? ಇವರು ಬೇರಾರು ಅಲ್ಲ, 2010ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ “ಸೀತೆ” ಧಾರಾವಾಹಿಯಲ್ಲಿ ಶ್ರೀರಾಮ ಪಾತ್ರದಲ್ಲಿ ಅಭಿನಯಿಸಿದ್ದ ಅಮಿತ್ ಭಾರ್ಗವ್ ಅವರು. ಬೆಂಗಳೂರಿನವರೇ ಆದರೂ, ಕನ್ನಡಕ್ಕಿಂತ ಹೆಚ್ಚಾಗಿ ತಮಿಳಿನಲ್ಲಿ ಗುರುತಿಸಿಕೊಂಡಿದ್ದಾರೆ. ಅಮಿತ್ ಭಾರ್ಗವ್ ಅವರು 2013ರಲ್ಲಿ ಈಟಿವಿ ಕನ್ನಡದಲ್ಲಿ ಪ್ರಸಾರವಾದ ಬಿಗ್ ಬಾಸ್ ಸೀಸನ್ 1 ಹಾಗೂ 2014 ರಲ್ಲಿ ಏಷ್ಯಾನೆಟ್ ಸುವರ್ಣದಲ್ಲಿ ಪ್ರಸಾರವಾದ ಬಿಗ್ ಬಾಸ್ ಸೀಸನ್ 2 ಕ್ಕೆ ಧ್ವನಿ ನೀಡಿದ್ದರು.
ಇವರ ಬಳಿಕ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಝೇಂಡೆ ಪಾತ್ರದಲ್ಲಿ ಬಣ್ಣಹಚ್ಚಿದ್ದ ಕನ್ನಡದ ಹೆಸರಾಂತ ನಟ ಬಿಎಂ ವೆಂಕಟೇಶ್ ಬಿಗ್ ಬಾಸ್ ಸೀಸನ್ 3ಕ್ಕೆ ಧ್ವನಿ ನೀಡಿದ್ದರು.
ಇನ್ನು ನಟ, ಮಾಡೆಲ್, ಕಂಠದಾನ ಕಲಾವಿದ ಬಡೆಕ್ಕಿಲ ಪ್ರದೀಪ್ ಅವರು ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಚಿರಪರಿಚಿತರಾಗಿದ್ದಾರೆ. ಟಿವಿ 9 ವಾಹಿನಿಯಲ್ಲಿ ವಾರ್ತಾ ವಾಚಕರಾಗಿ ವೃತ್ತಿ ಪ್ರಾರಂಭಿಸಿದ ಪ್ರದೀಪ್, ಆ ನಂತರ ತಮಿಳು, ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದರು. ಇನ್ನು ಇವರು ಬಿಗ್ ಬಾಸ್ ಶೋಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಆದರೆ ಬಿಗ್ ಬಾಸ್ ಆಗಿ ಅಲ್ಲ.
2016ರಿಂದ ಇದುವರೆಗೂ ಬಿಗ್‌ಬಾಸ್ ಆಗಿ ಹಿನ್ನೆಲೆ ಧ್ವನಿ ನೀಡುತ್ತಿರುವುದು ಶ್ರೀನಿವಾಸ್ ಪ್ರಸಾದ್. ಇವರ ಮುಖ ಪರಿಚಯ ಇನ್ನೂ ಯಾರಿಗೂ ಇಲ್ಲ.