BBK11: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಇನ್ನಷ್ಟು ಹತ್ತಿರ; ನಿಮ್ಮ ಪ್ರಕಾರ ಈ ಬಾರಿ ವಿನ್ನರ್ ಯಾರಾಗ್ಬೇಕು?
ಬಿಗ್ ಬಾಸ್ ಮನೆಯಲ್ಲಿ ಇದೀಗ ಒಟ್ಟು 10 ಸ್ಪರ್ಧಿಗಳಿದ್ದಾರೆ. ಎಲ್ಲರೂ ಬಿಗ್ ಟ್ರೋಫಿ ಗೆಲ್ಲುವ ಕ್ಯಾಲಿಬರ್ ಹೊಂದಿದ್ದಾರೆ. ಆದರೆ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ ಅನ್ನೋ ಕುತೂಹಲ ಮೂಡಿದೆ. ವೀಕ್ಷಕರು ಸಹ ಈ ಬಾರಿಯ ವಿನ್ನರ್ ಯಾರು ಅಂತಾ ತಲೆ ಕೆಡಿಸಿಕೊಂಡಿದ್ದು, ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸದ್ಯ ಭವ್ಯಾ ಗೌಡ, ತ್ರಿವಿಕ್ರಮ್, ರಜತ್, ಮೋಕ್ಷಿತಾ ಪೈ, ಧನರಾಜ್ ಆಚಾರ್, ಚೈತ್ರಾ ಕುಂದಾಪುರ, ಉಗ್ರಂ ಮಂಜು, ಹನುಮಂತು, ಐಶ್ವರ್ಯಾ ಸಿಂಧೋಗಿ ಮತ್ತು ಗೌತಮಿ ಜಾಧವ್ ಇದ್ದಾರೆ. ಎಲ್ಲರೂ ಉತ್ತಮವಾಗಿಯೇ ಆಟವಾಡುತ್ತಿದ್ದಾರೆ.
ಇನ್ನೂ 13ನೇ ವಾರ ಯಾರು ಬಿಗ್ ಬಾಸ್ ಮನೆಯಿಂದ ಹೊರ ಹೋಗಲಿದ್ದಾರೆ ಅನ್ನೋದು ಸಹ ತೀವ್ರ ಕುತೂಹಲ ಮೂಡಿಸಿದೆ. ಕಳೆದ ಬಾರಿಯಂತೆ ಈ ಬಾರಿಯೂ ಮಿಡ್ ವೀಕ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ. ಈ ಬಾರಿ ಯಾವ ರೀತಿ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿರುವ 10 ಸ್ಪರ್ಧಿಗಳ ಪೈಕಿ ನಾಲ್ವರು ಎಲಿಮಿನೇಷನ್ ಮೂಲಕ ಹೊರಬರಲಿದ್ದು, 6 ಜನರು ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಡಲಿದ್ದಾರೆ. ಹೊರಹೋಗುವ ನಾಲ್ವರು ಯಾರು? ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಡುವವರು ಯಾರು? ಅನ್ನೋದೇ ತೀವ್ರ ಕುತೂಹಲ ಮೂಡಿಸಿದೆ.
ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ? ಇರುವ ಹತ್ತು ಜನರ ಪೈಕಿ ಯಾರು ಬಿಗ್ ಬಾಸ್ ಟ್ರೋಫಿ ಎತ್ತಿಹಿಡಿಯಲಿದ್ದಾರೆ. ಯಾರಿಗೆ ರನ್ನರ್ಸ್ ಅಪ್ ಪಟ್ಟ ಸಿಗಲಿದೆ..? ಈ ಎಲ್ಲಾ ಪ್ರಶ್ನೆಗಳಲ್ಲಿ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ನಿಮ್ಮ ಪ್ರಕಾರ ಈ ಬಾರಿ ಯಾರು ಬಿಗ್ ಬಾಸ್ ವಿನ್ನರ್ ಆಗ್ತಾರೆ? ಕಾಮೆಂಟ್ ಮೂಲಕ ತಿಳಿಸಿರಿ..