ಬಿಗ್‌ ಬಾಸ್‌ ಮನೆಯಲ್ಲಿ ವೋಟಿಂಗ್‌ ಲೈನ್‌ ತೆರೆಯದಿದ್ರೂ ತಪ್ಪಿಲ್ವಾ ಎಲಿಮಿನೇಷನ್‌.. ಮನೆಯಿಂದ ಹೊರಬಂದವರು ಯಾರು?

Sun, 13 Oct 2024-12:52 pm,

Bigg Boss Kannada 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ರ ಎರಡನೇ ವಾರಾಂತ್ಯದ ಸಂಚಿಕೆ ಶುರುವಾಗಿದೆ. ಕಿಚ್ಚ ಸುದೀಪ್ ತಪ್ಪು ಒಪ್ಪುಗಳ ಕುರಿತು ಪಂಚಾಯಿತಿ ನಡೆಸಿದ್ದಾರೆ.

ಬಿಗ್ ಬಾಸ್ ಕನ್ನಡದಲ್ಲಿ ಈ ವಾರ ಎಲಿಮಿನೇಷನ್‌ ಇಲ್ಲ ಎಂದು ಎಲ್ಲರೂ ಭಾವಿಸಿದ್ದಾರೆ. ಅದಕ್ಕೆ ಕಾರಣ ವೋಟಿಂಗ್‌ ಲೈನ್‌ ತೆರೆದಿಲ್ಲ ಎಂಬ ಪ್ರಕಟಣೆ.

ಐಶ್ವರ್ಯಾ‌, ಅನುಷಾ, ಭವ್ಯ, ಧನರಾಜ್, ಧರ್ಮ, ಹಂಸ, ಜಗದೀಶ್, ಮಾನಸ, ಮಂಜು, ಮೋಕ್ಷಿತಾ, ರಂಜಿತ್, ಶಿಶಿರ್, ತ್ರಿವಿಕ್ರಮ್ ಈ ವಾರ ನಾಮಿನೇಟ್‌ ಆಗಿದ್ದರು.

ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಈ ವಾರ ಎಲಿಮಿನೇಷನ್‌ ಇಲ್ಲ ಎಂಬ ಬಗ್ಗೆ ಯಾವುದೇ ಕುರುಹು ನೀಡಿಲ್ಲ. 

ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ 11 ಸ್ಪರ್ಧಿಗಳ ವರ್ತನೆಗಳ ಬಗ್ಗೆ ಗಮನ ಸೆಳೆದರು. ಅಚ್ಚರಿಯ ಉಡುಗೊರೆಗಳನ್ನು ಸ್ಪರ್ಧಿಗಳು ಪಡೆದರು. 

ಬಿಗ್‌ ಬಾಸ್‌ ಸ್ಪರ್ಧಿಗಳು ಪಡೆದ ಉಡುಗೊರೆ ಅವರು ಮುಂದಿನ ದಿನಗಳಲ್ಲಿ ಮನೆಯಲ್ಲಿ ಹೇಗಿರಬೇಕು ಎಂಬ ವರ್ತನೆಯ ಬಗ್ಗೆ ತಿಳಿಸಿದೆ. 

StudyBizz.com ನಡೆಸಿದ ಸಮೀಕ್ಷೆಯ ಪ್ರಕಾರ, ಮಾನಸ, ಹಂಸ ಪ್ರತಾಪ್ ಮತ್ತು ರಂಜಿತ್ ಬಿಗ್ ಬಾಸ್ ಕನ್ನಡ ಸೀಸನ್ 11 ರ ಕೆಳಗಿನ 4 ಸ್ಥಾನಗಳಲ್ಲಿದ್ದಾರೆ. 

ಬಿಗ್‌ ಬಾಸ್‌ ಕೊನೆಯಲ್ಲಿ ಸುದೀಪ್‌ ಟ್ವಿಸ್ಟ್‌ ನೀಡಲಿದ್ದು, ದಸರಾ ಹಬ್ಬದ ಹಿನ್ನೆಲೆ ಈ ವಾರ ಯಾರೂ ಮನೆಯಿಂದ ಎಲಿಮಿನೇಟ್‌ ಆಗುತ್ತಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link