BBK10 Winner: ಕಾರ್ತಿಕ್ ಕೈ ಸೇರಲ್ಲ ಸಂಪೂರ್ಣ 50 ಲಕ್ಷ ರೂಪಾಯಿ.. ವಿನ್ನರ್‌ಗೆ ಸಿಗುವ ಮೊತ್ತ ಇಷ್ಟೇ.!
ಬಿಗ್ ಬಾಸ್ ಕನ್ನಡ ವಿನ್ನರ್‌ಗೆ 50 ಲಕ್ಷ ರೂಪಾಯಿ ಬಹಮಾನ ಸಿಗಲಿದೆ ಎಂದು ಹೇಳಲಾಗಿತ್ತು. ಆದರೆ ಈ ಸಂಪೂರ್ಣ ಮೊತ್ತ ಅವರ ಕೈ ಸೇರಲ್ಲ.
ಬಿಗ್ ಬಾಸ್ ಕನ್ನಡ ವಿನ್ನರ್‌ಗೆ ಮಾರುತಿ ಸುಜುಕಿ ಬ್ರೆಜಾ ಕಾರು, ಬೌನ್ಸ್ ಎಲಿಕ್ಟ್ರಿಕ್ ಸ್ಕೂಟರ್ ಗಿಫ್ಟ್ ಆಗಿ ಸಿಗಲಿದೆ.
ಬಿಗ್ ಬಾಸ್ ಗೆದ್ದ ಸ್ಪರ್ಧಿಗೆ ಸಂಪೂರ್ಣ 50 ಲಕ್ಷ ರೂಪಾಯಿ ಸಿಗುವುದಿಲ್ಲ. ಇದರಲ್ಲಿ ಕೊಂಚ ಹಣ ಕಟ್ ಮಾಡಲಾಗುತ್ತದೆ.
ಕರ್ನಾಟಕದಲ್ಲಿ ನಗದು ಬಹುಮಾನದ ಮೇಲಿನ ಟ್ಯಾಕ್ಸ್ 31.2% ಇದೆ. ಗೆದ್ದ ಸ್ಪರ್ಧಿಗೆ 50 ಲಕ್ಷ ರೂಪಾಯಿಯಲ್ಲಿ 31.2% ಹಣ ಕಟ್ ಆಗಲಿದೆ.
ಕಾರ್ತಿಕ್ ಗೆದ್ದಿರುವ 50 ಲಕ್ಷ ರೂಪಾಯಿ ಹಣದಲ್ಲಿ 34.40 ಲಕ್ಷ ರೂಪಾಯಿ ಮಾತ್ರ ಅವರ ಕೈ ಸೇರಲಿದೆ. ಉಳಿದ 14.60 ಲಕ್ಷ ರೂಪಾಯಿ ಸರ್ಕಾರಕ್ಕೆ ಸಿಗಲಿದೆ. 10 ಸಾವಿರ ಹಾಗೂ ಅದಕ್ಕಿಂತ ಹೆಚ್ಚಿರುವ ಹಣದ ಮೇಲೆ ಇದು ಅಪ್ಲೈ ಆಗುವುದು.