Bigg Boss Finale: 1 ಕೋಟಿ ವೋಟ್ ಪಡೆದ ಈ ಸ್ಪರ್ಧಿಯೇ ಬಿಗ್ ಬಾಸ್ ವಿನ್ನರ್, ಸುದೀಪ್ ಅಕ್ಕ-ಪಕ್ಕ ನಿಲ್ಲೋರು ಪಕ್ಕಾ ಇವರೇ.?
ಬಿಗ್ ಬಾಸ್ ವೋಟಿಂಗ್ ಲೈನ್ಸ್ ಕ್ಲೋಸ್ ಆಗಿದೆ. ವೋಟಿಂಗ್ ಲೈನ್ಸ್ ಕ್ಲೋಸ್ ಆಗುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಹೊಸ ಗಾಸಿಪ್ ಜೋರಾಗಿದೆ.
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ವೋಟಿಂಗ್‌ನಲ್ಲಿ ಭರ್ಜರಿ ಟ್ವಿಸ್ಟ್ ಸಿಕ್ಕಿದ್ದು, ವರ್ತೂರು ಸಂತೋಷ್ ಅವರಿಗೆ ಅತೀ ಹೆಚ್ಚು ವೋಟ್ ಬಿದ್ದಿವೆ ಎನ್ನಲಾಗಿದೆ. ವರ್ತೂರು ಬಳಿಕ ಎರಡನೇ ಸ್ಥಾನದಲ್ಲಿ ಡ್ರೋನ್ ಪ್ರತಾಪ್ ಅತಿ ಹೆಚ್ಚು ವೋಟ್ ಪಡೆದಿದ್ದಾರೆ ಎನ್ನಲಾಗಿದೆ.
ಸೋಷಿಯಲ್ ಮೀಡಿಯಾದ ವದಂತಿಗಳ ಪ್ರಕಾರ, ವರ್ತೂರು ಸಂತೋಷ್ 1 ಕೋಟಿಗೂ ಅಧಿಕ ವೋಟ್ ಪಡೆದಿದ್ದಾರೆ ಎನ್ನಲಾಗಿದೆ. ಟಾಪ್ 6 ಸ್ಪರ್ಧಿಗಳಲ್ಲಿ ವರ್ತೂರು ಸಂತೋಷ್ ಅತೀ ಹೆಚ್ಚು ವೋಟ್ ಪಡೆದಿದ್ದು, ಇವರೇ ವಿನ್ನರ್ ಆಗಬಹುದೆಂಬ ಗುಲ್ಲು ಹಬ್ಬಿದೆ.
ಡ್ರೋನ್ ಪ್ರತಾಪ್ ಎರಡನೇ ಸ್ಥಾನದಲ್ಲಿದ್ದು, ರನ್ನರ್ ಅಪ್ ಆಗಿದ್ದಾರೆ ಎನ್ನಲಾಗ್ತಿದೆ. ಡ್ರೋನ್ ಪ್ರತಾಪ್ ಸಹ 1 ಕೋಟಿಗೂ ಅಧಿಕ ವೋಟ್ ಪಡೆದಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವೋಟಿಂಗ್ ಆರ್ಡರ್ ಪ್ರಕಾರ, ಮೂರನೇ ಸ್ಥಾನದಲ್ಲಿ ಸಂಗೀತಾ ಶೃಂಗೇರಿ, ನಾಲ್ಕನೇ ಸ್ಥಾನದಲ್ಲಿ ಕಾರ್ತಿಕ್, ಐದನೇ ಸ್ಥಾನದಲ್ಲಿ ವಿನಯ್ ಗೌಡ, ಆರನೇ ಸ್ಥಾನದಲ್ಲಿ ತುಕಾಲಿ ಸಂತು ಇದ್ದಾರೆ ಎನ್ನಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಮತ್ತೊಂದು ವದಂತಿಯ ಪ್ರಕಾರ, ಕಾರ್ತಿಕ್ ಮಹೇಶ್ 34% ಮತಗಳನ್ನ ಪಡೆದು ಟಾಪ್ 1 ಸ್ಥಾನದಲ್ಲಿದ್ದಾರೆ ಎನ್ನಲಾಗಿದೆ.
ಡ್ರೋನ್ ಪ್ರತಾಪ್ 21% ವೋಟ್ ಪಡೆದು ಎರಡನೇ ಸ್ಥಾನ, ಸಂಗೀತಾ 20% ವೋಟ್ ಪಡೆದು ಮೂರನೇ ಸ್ಥಾನ, 10% ವೋಟ್ ಪಡೆದ ವರ್ತೂರು ಸಂತೋಷ್ ನಾಲ್ಕನೇ ಸ್ಥಾನ, 9% ವೋಟ್ ಪಡೆದ ವಿನಯ್ ಗೌಡ ಐದನೇ ಸ್ಥಾನ, 6% ವೋಟ್ ಪಡೆದ ತುಕಾಲಿ ಸಂತು 6ನೇ ಸ್ಥಾನದಲ್ಲಿದ್ದಾರೆ ಎಂಬ ಪೋಸ್ಟ್ ವೈರಲ್ ಆಗಿವೆ.
ಯಾವ ಸ್ಪರ್ಧಿಗೆ ಎಷ್ಟು ವೋಟ್ ಬಂದಿದೆ ಎಂಬ ಮಾಹಿತಿಯನ್ನ ಬಿಗ್ ಬಾಸ್ ಆಯೋಜಕರಾಗಲಿ, ಕಲರ್ಸ್ ಕನ್ನಡ ವಾಹಿನಿ ಆಗಲಿ ಬಹಿರಂಗ ಪಡಿಸಿಲ್ಲ. ಕಿಚ್ಚ ಸುದೀಪ್ ಮಾತ್ರ ವಿನ್ನರ್ ಕೈ ಮೇಲೆತ್ತಿ ಹೆಸರು ಘೋಷಿಸುವವರೆಗೂ ಇದ್ಯಾವುದೂ ಗ್ಯಾರೆಂಟಿ ಇಲ್ಲ.