ದೊಡ್ಮನೆಯಲ್ಲಿ ತೊಟ್ಟ ಬಟ್ಟೆಗಳನ್ನು ಹರಾಜಿಗಿಡಲು ರೆಡಿಯಾದ ಬಿಗ್‌ ಬಾಸ್‌ ಸುಂದರಿ..! ಖರೀದಿ ಮಾಡ್ತೀರಾ ಯಾರಾದ್ರು.?

Fri, 18 Oct 2024-9:01 pm,

ಬಿಗ್ ಬಾಸ್ ಮರಾಠಿಯ 5ನೇ ಸೀಸನ್ ಈ ವರ್ಷ ಬಹಳ ಜನಪ್ರಿಯವಾಗಿತ್ತು. ಅಕ್ಟೋಬರ್ 6 ರಂದು ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ, ಸೂರಜ್ ಚವಾಣ್ ಕಾರ್ಯಕ್ರಮವನ್ನು ಗೆದ್ದರು ಮತ್ತು ಬಿಗ್ ಬಾಸ್ ಮರಾಠಿ ಟ್ರೋಫಿ ಎತ್ತಿಹಿಡಿದರು..   

ಈಗ ಕಾರ್ಯಕ್ರಮ ಮುಗಿದು ಬಹಳ ದಿನಗಳು ಕಳೆದರೂ ಪ್ರೇಕ್ಷಕರು ಅದರ ಬಗ್ಗೆಯೇ ಮಾತನಾಡಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮದ ಹೆಚ್ಚಿನ ಸ್ಪರ್ಧಿಗಳು ಜನಪ್ರಿಯರಾಗಿದ್ದಾರೆ.. ಈ ಪೈಕಿ ಜಾನ್ವಿ ಕಿಲ್ಲೇಕರ್ ಸಖತ್‌ ಸದ್ದು ಮಾಡುತ್ತಿದ್ದಾರೆ..  

ಬಿಗ್ ಬಾಸ್‌ನಿಂದ ಹೊರಬಂದ ನಂತರ ಜಾನ್ವಿ ದಶಿತ್ ಹಲವು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಬಿಗ್ ಬಾಸ್‌ಗೆ ಹೋಗಲು ತಾನು ಹೇಗೆ ತಯಾರಿ ನಡೆಸಿದ್ದೇನೆ ಎಂಬ ಕುರಿತು ಮಾತನಾಡಿದ್ದಾರೆ.  

ಬಿಗ್ ಬಾಸ್ ನಲ್ಲಿ ಟಾಸ್ಕ್ ಕ್ವೀನ್ ಎಂದೇ ಜನಪ್ರಿಯರಾಗಿರುವ ಜಾನ್ವಿ ಡ್ರೆಸ್ಸಿಂಗ್ ಸೆನ್ಸ್ ಕೂಡ ತುಂಬಾ ಚೆನ್ನಾಗಿತ್ತು. ಬಿಗ್ ಬಾಸ್ ಕೂಡ ಅವರನ್ನು ಹಲವು ಬಾರಿ ಹೊಗಳಿದ್ದರು. ಈ ಬಗ್ಗೆ ಆಕೆಯನ್ನು ಪ್ರಶ್ನಿಸಲಾಯಿತು. ಯಾವಾಗ, ಯಾವ ದಿನ ಯಾವ ಬಟ್ಟೆ ಧರಿಸಬೇಕೆಂದು ನೀವು ನಿರ್ಧರಿಸಿದ್ದೀರಾ..? ಸಿದ್ಧತೆಗಳೇನು? ಎಂದು ಪ್ರಶ್ನಿಸಲಾಯಿತು..  

ಅದಕ್ಕೆ ಜಾನ್ನಿ.. 'ನಿಜ ಹೇಳಬೇಕೆಂದರೆ, ಬಿಗ್‌ ಬಾಸ್‌ಗೆ ಹೋಗೋಕೆ ನಾನು 100 ಬಟ್ಟೆಗಳನ್ನು ಖರೀದಿಸಿದೆ. ಈಗ ನನ್ನ ಬೆಡ್ ರೂಮಿನಲ್ಲಿ ಜಾಗವಿಲ್ಲದಷ್ಟು ಬಟ್ಟೆ ತುಂಬಿದೆ. ಇನ್ನು ಕೆಲವೇ ದಿನಗಳಲ್ಲಿ ಬಟ್ಟೆ ಹರಾಜು ಹಾಕಲಿದ್ದೇನೆ, ಲೇಕೆ ಜಾವೋ, ಲೇಕೆ ಜಾವೋ. ಎನ್ನುತ್ತೇನೆ..' ಅಂತ ತಮಾಷೆಯಾಗಿ ಉತ್ತರಿಸಿದರು.   

ನಾನು ಬಿಗ್ ಬಾಸ್ ಪ್ರವೇಶಿಸಲು ಸಂಪೂರ್ಣವಾಗಿ 2 ತಿಂಗಳು ತೆಗೆದುಕೊಂಡಿದ್ದೆ. ಬಿಗ್ ಬಾಸ್ ಮನೆಗೆ ಬರುವುದು ಅಷ್ಟು ಸುಲಭವಲ್ಲ, ಅದಕ್ಕೆ ಮಾನಸಿಕ ಸಿದ್ಧತೆ ಬೇಕು. ನಾವು ತುಂಬಾ ರೆಡಿ ಆಗಿರಬೇಕು ಎಂದು ಬಿಗ್‌ಹೌಸ್‌ಗೆ ಹೋಗುವ ಮುನ್ನ ಜಾನ್ವಿ ನಡೆಸಿದ ತಯಾರಿ ಕುರಿತು ತಿಳಿಸಿದರು..  

ಈ ಪ್ರಯಾಣದಲ್ಲಿ ನನ್ನ ಕುಟುಂಬ ನನಗೆ ಸಾಕಷ್ಟು ಬೆಂಬಲ ನೀಡಿತು. ಅವರಿಂದಲೇ ನಾನು ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದೆ, ಇಲ್ಲದಿದ್ದರೆ ಅಲ್ಲಿರಲು ಸಾಧ್ಯವಾಗುತ್ತಿರಲಿಲ್ಲ. ಚಿಕ್ಕ ಮಗುವನ್ನು ಬಿಟ್ಟು ಹೋಗುವುದು ತಾಯಿಯಾಗಿ ನನಗೆ ತುಂಬಾ ಕಷ್ಟದ ಕೆಲಸವಾಗಿತ್ತು ಅಂದರು..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link